ʼWhatsAppʼನಲ್ಲಿ ನಿಮ್ಮ ಪ್ರೈವೇಟ್ ಚಾಟ್ ʼರಹಸ್ಯʼವಾಗಿಡುವುದು ಹೇಗೆ..?

0

ವಾಟ್ಸಾಪ್‌ನಲ್ಲಿ ನಿಮ್ಮ ವೈಯಕ್ತಿಕ ಚಾಟ್ ಯಾರಾದರೂ ನೋಡ್ತಾರೆ ಅನ್ನೋ ಭಯ ಕಾಡ್ತಿದ್ಯಾ.? ನೀವು ನೀವು ಭಯಪಡುವ ಅಗತ್ಯವಿಲ್ಲ. ಯಾಕಂದ್ರೆ, ನಿಮ್ಮ ರಹಸ್ಯ ಸಂದೇಶಗಳನ್ನ ನೀವು ತುಂಬಾನೇ ಸುಲಭವಾಗಿ ಇತರರಿಂದ ಮರೆಮಾಚಬೋದು. ಆಸಲಿಗೆ, ವಾಟ್ಸಾಪ್‌ನಲ್ಲಿಯೇ ಇಂತಹದ್ದೊಂದು ವೈಶಿಷ್ಟ್ಯವಿದೆ. ಅದನ್ನ ಬಳಸಿದ್ರೆ, ನಿಮ್ಮ ಚಾಟ್ ಬೇರೆ ಯಾರಿಗೂ ಕಾಣಿಸೋಲ್ಲ. ಅಂದ್ಹಾಗೆ, ವಾಟ್ಸಾಪ್‌ನಲ್ಲಿ ಇಂತಹ ಅನೇಕ ವೈಶಿಷ್ಟ್ಯಗಳಿದ್ದು, ಇದರಿಂದ ನಿಮ್ಮ ಡೇಟಾ ಸುರಕ್ಷಿತವಾಗಿರುತ್ತೆ. ಹಾಗಾದ್ರೆ, ಆ ವಿಶೇಷ ವೈಶಿಷ್ಟ್ಯ ಯಾವುದು? ಅದನ್ನು ನಿಮ್ಮ ಫೋನ್‌ನಲ್ಲಿ ಸಕ್ರಿಯಗೊಳಿಸುವುದು ಹೇಗೆ ಅನ್ನೋ ವಿವಿರ ಇಲ್ಲಿದೆ ನೋಡಿ.

ಅಂಡ್ರಾಯಿಡ್ ಪೋನ್‌ನಲ್ಲಿ ಚಾಟ್‌ ಮರೆಮಾಚೋದು ಹೇಗೆ..?
ನೀವು ಅಂಡ್ರಾಯಿಡ್ ಬಳಕೆದಾರರಾದ್ರೆ ನಿಮ್ಮ ವಾಟ್ಸಾಪ್ ಚಾಟ್ ಮರೆಮಾಚುವುದು ತುಂಬಾನೇ ಸುಲಭ. ಹೌದು, ಮೊದಲು ನೀವು ನಿಮ್ಮ ವಾಟ್ಸ್ ಆಪ್ ಚಾಟ್‌ಗೆ ಹೋಗಿ. ಈಗ ಮರೆಮಾಚಲು ಬಯಸುವ ಚಾಟ್‌ನ್ನ ಲಾಂಗ್‌ ಪ್ರೆಸ್‌ಮಾಡಿ. ಆಗ ನಿಮ್ಮ ಸ್ಕ್ರೀನ್ ಮೇಲೆ ಹಲವು ಆಪ್ಶನ್‌ಗಳು ಕಾಣಿಸುತ್ವೆ. ಇದರಲ್ಲಿರುವ ಆರ್ಕೈವ್ ಆಪ್ಶನ್ ಮೇಲೆ ಕ್ಲಿಕ್‌ ಮಾಡಿ. ಈಗ ನಿಮ್ಮ ಚಾಟ್ ಯಾರಿಗೂ ಕಾಣಿಸೋಲ್ಲ.

ಆರ್ಕೈವ್ ಮಾಡಲಾಗಿರುವ ಚಾಟ್ ಮತ್ತೆ ಅನ್ ಆರ್ಕೈವ್ ಮಾಡುವುದು ಹೇಗೆ..?
ಒಂದು ವೇಳೆ ಈಗಾಗಲೇ ನೀವು ಯಾವುದಾದರೊಂದು ಚಾಟ್ ಆರ್ಕೈವ್ ಮಾಡಿದ್ದರೆ, ಆ ಚಾಟ್‌ನ್ನ ನಾರ್ಮಲ್ ಚಾಟ್ ಆಗಿ ಪರಿವರ್ತಿಸಬಹುದು. ಆರ್ಕೈವ್ ಮಾಡಿದ ಬಳಿಕ ನೀವು ಮರೆಮಾಚಿದ ಚಾಟ್ ಒಂದು ಫೋಲ್ಡರ್‌ಗೆ ಸೇರಿ, ಎಲ್ಲ ಚಾಟ್ ಗಳಿಗಿಂತ ಕೆಳಭಾಗಕ್ಕೆ ಜಾರಿರುತ್ತೆ. ಕಾಂಟ್ಯಾಕ್ಟ್ ನೇಮ್ ಸರ್ಚ್ ಮಾಡುವ ಮೂಲಕ ಇದನ್ನ ನೀವದನ್ನ ಓಪನ್ ಮಾಡಬಹುದು. ಒಂದು ವೇಳೆ ಪುನಃ ಇದನ್ನ ನಾರ್ಮಲ್ ಚಾಟ್ ಬಾಕ್ಸ್ ಗೆ ತರಲು ಬಯಸಿದರೆ. ಚಾಟ್ ಮೇಲೆ ಕ್ಲಿಕ್ಕಿಸಿ ಅದನ್ನ ಅನ್ ಆರ್ಕೈವ್ ಮಾಡಬಹುದು.

ಐಫೋನ್‌ಲ್ಲಿಯೂ ಚಾಟ್ ರಹಸ್ಯವಾಗಿಡಬೋದು..!
ಮೊದಲಿಗೆ ನೀವು ಮರೆಮಾಚಲು ಬಯಸುವ ವಾಟ್ಸ್ ಆಪ್ ಚಾಟ್ ಗೆ ಹೋಗಿ. ಈಗ ನೀವು ಮರೆಮಾಚಲು ಬಯಸುವ ಚಾಟ್ ಅನ್ನು ಬಲಭಾಗಕ್ಕೆ ಸ್ವೈಪ್ ಮಾಡಿ. ಇದಾದ ಬಳಿಕ ಆರ್ಕೈವ್ ಆಪ್ಶನ್ ಕಾಣಿಸಿಕೊಳ್ಳಲಿದ್ದು, ಅದ್ರ ಮೇಲೆ ಕ್ಲಿಕ್ಕಿಸಿ ಈಗ ನಿಮ್ಮ ಚಾಟ್ ಮರೆಯಾಗಲಿದೆ. (ಏಜೆನ್ಸೀಸ್​)

LEAVE A REPLY

Please enter your comment!
Please enter your name here