ಅಂಕೋಲಾದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮುಖಂಡರ ಸಭೆ ನೆರವೇರಿಸಲಾಯಿತು.

0

ಅಂಕೋಲಾದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮುಖಂಡರ ಸಭೆ ನೆರವೇರಿಸಲಾಯಿತು.

ಈ ಬಾರಿ ಕೊರೊನಾ ಇರುವ ಕಾರಣಕ್ಕೆ ಸಾರ್ವಜನಿಕ ಗಣೇಶ ಹಬ್ಬ ಆಚರಣೆ ಮಾಡಲು ಸರ್ಕಾರ ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಅದನ್ನು ಪಾಲಿಸಬೇಕಾದ ಅನಿವಾರ್ಯತೆ ಇಂದು ಅವಶ್ಯಕವಾಗಿದೆ. ಸರ್ಕಾರದ ನಿಯಮ ಅನುಸಾರ ಹಬ್ಬವನ್ನು ಎಲ್ಲರೂ ಆಚರಿಸಬೇಕು. ಈ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು.

ಮನೆಯಲ್ಲಿಯೂ ಗಣೇಶನ ಹಬ್ಬ ಆಚರಿಸ ಬೇಕಾದರೆ ಮುನ್ನೆಚ್ಚರಿಕೆಯನ್ನು ಪಾಲಿಸಬೇಕು. ಯಾವುದೇ ಸಮಸ್ಯೆಗೆ ಸಿಲುಕದೇ ಹಬ್ಬವನ್ನು ಹಾಗೂ ಗಣೇಶನ ವಿಸರ್ಜನೆ ಸರಳವಾಗಿ ನೆರವೇರಿಸಬೇಕು ಎಂದು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಮುಖಂಡರಿಗೆ ಮನವರಿಕೆ ಮಾಡಿಕೊಡಲಾಯಿತು.

ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ, ಪೊಲೀಸ್ ವೃತ್ತ ನಿರೀಕ್ಷಕರು, ತಹಶೀಲ್ದಾರ, ತಾಲ್ಲೂಕು ಪಂಚಾಯತ ಇಒ, ಪುರಸಭೆ ಮುಖ್ಯಾಧಿಕಾರಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಮುಖಂಡರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here