ಅಂತರಸಂತೆ ೩ ತಿಂಗಳ ಲಾಕ್‌ಡೌನ್ ಬಳಿಕ ಸಫಾರಿ ಎಂದಿನಂತೆ ಪುನಾರಂಭವಾಗಿದ್ದು

0

ಅಂತರಸಂತೆ: ೩ ತಿಂಗಳ ಲಾಕ್‌ಡೌನ್ ಬಳಿಕ ಕಾಕನಕೋಟೆ ಸಫಾರಿ ಎಂದಿನಂತೆ ಪುನಾರಂಭವಾಗಿದ್ದು, ಸಫಾರಿ ಕೇಂದ್ರಕ್ಕೆ ತಾಹಸೀಲ್ದಾರ್ ಆರ್.ಮಂಜುನಾಥ್, ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಟಿ.ರವಿಕುಮಾರ್‌ರವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಾಗರಹೊಳೆಯ ಕಾಕನಕೋಟೆ ಸಫಾರಿಯು ಹೆಚ್ಚು ಬೇಡಿಕೆಯಿಂದ ಕೂಡಿದ್ದು, ಹೆಚ್ಚು ಜನರು ಬರುವ ನಿರೀಕ್ಷೆಯಲ್ಲಿ ಸಫಾರಿ ಕೇಂದ್ರದ ಆವರಣದಲ್ಲಿ ಸಾಕಷ್ಟು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಯಿತು. ವಲಯ ಅರಣ್ಯಧಿಕಾರಿ ಸಿದ್ದರಾಜು ರವರ ನೇತೃತ್ವದಲ್ಲಿ ಪ್ರಾರಂಭವಾದ ಸಫಾರಿಯಲ್ಲಿ ಸರ್ಕಾರದ ನಿಯಮದಂತೆ ಪ್ರತಿ ಬಸ್‌ನಲ್ಲಿ ೧೩ ಜನರಂತೆ ೩೫ ಜನರಿಗೆ ಸಫಾರಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಸಫಾರಿ ಪ್ರಾರಂಭಕ್ಕೂ ಮೊದಲೇ ತಾಲ್ಲೂಕಿನ ಆಡಳಿತ ಮಂಡಳಿ ಸಫಾರಿ ಕೇಂದ್ರಕ್ಕೆ ಭೇಟಿ ನೀಡಿ ಮುಂಜಾಗೃತ ಕ್ರಮಗಳ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅಲ್ಲದೇ ಪ್ರತಿ ಬಸ್‌ಗೂ ಸಫಾರಿ ಹೊರಡುವ ಮುನ್ನ ಸ್ಯಾನಿಟೈಸರ್ ಸಿಂಪಡಿಸಬೇಕು ಸಫಾರಿ ಮುಗಿದ ನಂತರವು ಸಹ ಸ್ಯಾನಿಟೈಸರ್ ಸಿಂಪಡಿಸಬೇಕು. ಹಾಗೂ ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಬೇಕು ಸಿಬ್ಬಂದಿಗಳ ಯಾರು ಸಹ ಪ್ರವಾಸಿಗರೊಡನೆ ಸಂಪರ್ಕ ಹೋಗಬಾರದು ಸಿಬ್ಬಂದಿಗಳು ಮಾಸ್ಕ್‌ಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ಸೂಚಿಸಿದರು.
ನಂತರ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ವಲಯ ಅರಣ್ಯಧಿಕಾರಿ ಸಿದ್ದರಾಜು ಹಾಗೂ
ಸಿಬ್ಬಂದಿಗಳು ಆದಷ್ಟು ಪ್ರವಾಸಿಗರ ಸಂಪರ್ಕಕ್ಕೆ ಹೋಗದಂತೆ ಗಮನ ಹರಿಸಬೇಕು ಹಾಗೂ ಬಸ್ ನಲ್ಲಿರುವ ಪ್ರವಾಸಿಗರು ಎದ್ದು ಓಡಾಡಂತೆ ನೋಡಿಕೊಳ್ಳಬೇಕು, ಟಿಕೆಟ್ ವಿತರಿಸುವ ಸಂದರ್ಭದಲ್ಲಿ ಪ್ರವಾಸಿಗರು ಸಾಮಾಜಿಕ ಅಂತರ ಕಾಯ್ದುಕೊಳ್ಳವಂತೆ ನೋಡಿಕೊಳ್ಳಬೇಕು ಎಂದರು

ನಂತರ ಅರಣ್ಯ ಎಂಬುದು ಒಂದು ಸೂಕ್ಷ್ಮವಲಯ ಅಲ್ಲಿರುವ ಜೀವಿ ಸಂಕುಲಕ್ಕೆ ಯಾವುದೇ ತೊಂದರೆಯಾಗದಂತೆ ನಾವು ಜಾಗೃತರಾಗಿ ಕೆಲಸ ನಿರ್ವಹಿಸಬೇಕು ಎಂದು ಸಿಬ್ಬಂದಿಗಳಿಗೆ ಸೂಚಿಸಿದರು.

ಮೊದಲ ಸಫಾರಿಯಲ್ಲೇ ಹುಲಿಯ ದರ್ಶನ:
೩ ತಿಂಗಳು ಬಳಿಕ ಪ್ರಾರಂಭವಾದ ಮೊದಲ ಸಫಾರಿಯಲ್ಲೇ ಪ್ರವಾಸಿಗರಿಗೆ ಹುಲಿಯ ದರ್ಶನ ಭಾಗ್ಯ ಸಿಕ್ಕಿದೆ. ಲಾಕ್‌ಡೌನ್‌ನಿಂದ ಮನೆಯಲ್ಲೇ ಕಾಲ ಕಳೆದಿದ್ದ ಕಣ್ಣುಗಳಿಗೆ ಇಂದಿನ ಸಫಾರಿ ಹಚ್ಚ ಹಸಿನ ಅರಣ್ಯ ಸೌಂದರ್ಯವನ್ನು ಕಣ್ತುಂಬುವಂತೆ ಮಾಡಿದೆ. ಅಲ್ಲದೇ ಸಫಾರಿಯಲ್ಲಿ ಪ್ರವಾಸಿಗರು ಹುಲಿ, ಜಿಂಕೆ, ಕಾಡೆಮ್ಮೆ, ಆನೆ ಹಾಗೂ ವಿವಿಧ ಜಾತಿಯ ಹದ್ದುಗಳು ಮತ್ತು ಪಕ್ಷಿಗಳನ್ನು ನೋಡಿ ಸಂತಸ ಪಟ್ಟು, ತಮ್ಮ ಕ್ಯಾಮೆರಗಳಲ್ಲಿ ಸೆರೆಹಿಡಿದುಕೊಂಡರು. .

ಸಿದ್ದರಾಜು
ಅಂತರಸಂತೆ
ವಲಯ ಅರಣ್ಯಧಿಕಾರಿ ..

ಸಾಫರಿಯ ಪ್ರಾರಂಭಕ್ಕೂ ಮೊದಲು ಹಾಗೂ ಸಫಾರಿ ಮುಗಿದ ನಂತರವು ಪ್ರತಿ ವಾಹನಕ್ಕೆ ಸ್ಯಾನಿಟೈಸರ್ ಸಿಂಪಡಿಸಲಾಗುವುದು. ಹಾಗೂ ನಮ್ಮ ಸಿಬ್ಬಂದಿಗಳಿಗೆ ಮುಂಜಾಗೃತ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಕಡಿಮೆ ಜನರಿಗೆ ಮಾತ್ರ ಸಫಾರಿಯಲ್ಲಿ ಅವಕಾಶವಿದ್ದು ಪ್ರವಾಸಿಗರು ಇಲಾಖೆಯೊಂದಿಗೆ ಸಹಕರಿಸಬೇಕಿದೆ.

ದೀಕ್ಷಿತ್ ಪ್ರವಾಸಿಗರು

ಲಾಕ್‌ಡೌನ್ ಬಳಿಕ ಮೊದಲ ಸಫಾರಿ ನಿಜಕ್ಕೂ ಬಹಳ ಸಂತೋಷ ತಂದಿದೆ. ಮೊದಲ ಸಫಾರಿಯಲ್ಲೇ ಹುಲಿ ಸಿಗುತ್ತದೆ ಎಂದು ಊಹಿಸಿರಲಿಲ್ಲ. ಅಲ್ಲದೇ ಅಲವು ದಿನಗಳ ಬಳಿಕ ಕಾಡನ ಸೌಂದರ್ಯ ಸವಿದದ್ದು ಎಲ್ಲವುದಕ್ಕಿಂತ ಸಂತಸದ ವಿಚಾರವಾಗಿದೆ.

LEAVE A REPLY

Please enter your comment!
Please enter your name here