ಅಕ್ಟೋಬರ್‌ 17ರಿಂದ ಅಮೆಜಾನ್‌ ‘ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌’

0

 ಇ-ಕಾಮರ್ಸ್ ವೇದಿಕೆ ಅಮೆಜಾನ್ ಇಂಡಿಯಾ ‘ಗ್ರೇಟ್ ಇಂಡಿಯನ್ ಫೆಸ್ಟಿವಲ್’ ದಿನಾಂಕ ಪ್ರಕಟಿಸಿದೆ. ಅಕ್ಟೋಬರ್ 17ರಿಂದ ಹಬ್ಬದ ವಿಶೇಷ ಮಾರಾಟ ಮೇಳ ಆರಂಭವಾಗಲಿದೆ.

ಪ್ರೈಮ್‌ ಸದಸ್ಯರು ಅಕ್ಟೋಬರ್‌ 16ರಿಂದಲೇ ಖರೀದಿಗೆ ಅವಕಾಶ ಪಡೆಯಲಿದ್ದಾರೆ. ಸಣ್ಣ ಮತ್ತು ಮಧ್ಯಮ ವ್ಯಾಪಾರಗಳ ಉದ್ಯಮಿಗಳಿಗೆ ವಹಿವಾಟು ಹೆಚ್ಚಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ ಎಂದು ಕಂಪನಿ ಹೇಳಿದೆ.

ಟಾಪ್‌ ಬ್ರ್ಯಾಂಡ್‌ಗಳು ಗ್ರೇಟ್‌ ಇಂಡಿಯನ್ ಫೆಸ್ಟಿವಲ್‌ ಸಂದರ್ಭದಲ್ಲಿ 900ಕ್ಕೂ ಹೆಚ್ಚು ಹೊಸ ಪ್ರಾಡಕ್ಟ್‌ಗಳನ್ನು ಪರಿಚಯಿಸಲಿವೆ. ಕ್ಯಾಷ್‌ಬ್ಯಾಕ್‌, ಎಕ್ಸ್‌ಚೇಂಜ್‌, ರಿವಾರ್ಡ್ಸ್‌ ಸೇರಿದಂತೆ ಗ್ರಾಹಕರಿಗೆ ನಿತ್ಯವೂ ಹಲವು ಕೊಡುಗೆಗಳು ಸಿಗಲಿವೆ. ಒಟ್ಟು 6.5 ಲಕ್ಷಕ್ಕೂ ಹೆಚ್ಚು ಮಾರಾಟಗಾರರಿಂದ ಅಮೆಜಾನ್‌ ಗ್ರಾಹಕರಿಗೆ ಪ್ರಾಡಕ್ಟ್‌ಗಳನ್ನು ಪೂರೈಸಲಿದೆ.

ಅಮೆಜಾನ್‌ ಡಾಟ್‌ ಇನ್‌ ( www.amazon.in ) ಜಾಲತಾಣದ ಮೂಲಕ ಗ್ರಾಹಕರು ಖರೀದಿ ಮಾಡಬಹುದಾಗಿದೆ. ವಿಶೇಷ ಮಾರಾಟ ಮೇಳದ ಕೊನೆಯ ದಿನಾಂಕ ಪ್ರಕಟಿಸಲಾಗಿಲ್ಲ.

LEAVE A REPLY

Please enter your comment!
Please enter your name here