ಅಕ್ರಮ ಗೋವು ಸಾಗಣಿಕೆ ಮಾಡುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ: ಈಶ್ವರ ಹಿಪ್ಪರಗಿ.

0

ಅಕ್ರಮ ಗೋವು ಸಾಗಣಿಕೆ ಮಾಡುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ: ಈಶ್ವರ ಹಿಪ್ಪರಗಿ.

ಜೇವರ್ಗಿ: ತಾಲೂಕಿನಲ್ಲಿ ಅಕ್ರಮವಾಗಿ ದನಗಳ ಸಾಗಣೆ ಮಾಡುತ್ತಿರುವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ತಾಲೂಕ ಶ್ರೀರಾಮಸೇನೆ ಘಟಕದ ವತಿಯಿಂದ ತಹಸಿಲ್ದಾರ್ ಅವರಿಗೆ ಮನವಿ ಪತ್ರ ನೀಡಿದರು.

ಮನವಿ ಪತ್ರ ನೀಡಿ ತಾಲೂಕ ಶ್ರೀರಾಮಸೇನೆ ಘಟಕದ ಅಧ್ಯಕ್ಷರಾದ ಈಶ್ವರ ಹಿಪ್ಪರಗಿ ಮಾತನಾಡಿದರು. ಆಗಸ್ಟ್ ಒಂದನೇ ತಾರೀಕಿನಂದು ಬಕ್ರಿದ್ ಹಬ್ಬದ ನಿಮಿತ್ಯ ಮುಸ್ಲಿಂ ಬಾಂಧವರು ದನಗಳು ಮತ್ತು ಒಂಟೆಗಳ ಪ್ರಾಣಿಬಲಿ ಮಾಡುವುದನ್ನು ತಡೆಯಬೇಕೆಂದು ಒತ್ತಾಯಿಸಿ ದಂಡಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈಗಾಗಲೇ ತಾಲೂಕಿನ ಗ್ರಾಮಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿರುವ ಧನಗಳನ್ನು ಅವರ ವಾಹನಗಳ ಸಮೇತ ಜಪ್ತಿ ಮಾಡಲಾಗಿದ್ದು.

ಇನ್ನೂ ಅನೇಕ ಧನ ಮತ್ತು ಒಂಟೆಗಳು ಬಕ್ರೀದ್ ಹಬ್ಬದ ನಿಮಿತ್ಯ ಬಲಿಕೊಡಲು ಮುಸ್ಲಿಂ ಬಾಂಧವರು ಸಿದ್ಧರಾಗಿದ್ದಾರೆ ಅದನ್ನು ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಸಿಬ್ಬಂದಿಗಳು ಅಕ್ರಮವಾಗಿ ಪ್ರಾಣಿಗಳನ್ನು ಸಾಗಿಸುತ್ತಿರುವ ವಾಹನಗಳನ್ನು ಹಾಗೂ ಮಾಲೀಕರಿಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈಶ್ವರ್ ಹಿಪ್ಪರಗಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಆನಂದ ದೇಸಾಯಿ, ಸಂಗನಗೌಡ ಪಾಟೀಲ್, ಬಸವರಾಜ ಸೂಗೂರ್, ಭಗವಂತರಾಯ ಮೈನಾಳ, ರವಿಕುಮಾರ್ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here