ಅಕ್ರಮ ಸಂಬಂಧಕ್ಕೆ ಹುಟ್ಟಿದ ಮಗುವನ್ನು | ಕೊರೋನಾ ಮದ್ಯೆ ಅಬ್ಬಾ ಅಬ್ಬಾ ಆ | ಮಾರಾಟ ಮಾಡಿ ಬಳಿಕ ಮುಂದೆ ಏನಾಯಿತು ನೋಡಿ ನೋಡಲೇಬೇಕಾದ ಕಥೆ
ಚಿಕ್ಕೋಡಿ ಪೊಲೀಸ ಠಾಣೆಯಲ್ಲಿ ಮೂರು ಜನರ ವಿರುದ್ದ ಕೊಲೆ ಪ್ರಕರಣವನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಧಾಖಲಿಸಿದ್ದು ಪ್ರಕರಣದ ತನಿಖೆಯನ್ನು ಚಿಕ್ಕೋಡಿ ಪೊಲೀಸರು ಕೈಗೊಂಡಿದ್ದಾರೆ. ನಿಜಕ್ಕೂ ಕೊಲೆ ನಡೆದಿದೆಯಾ ಅಥವಾ ಮಗು ಅನಾರೋಗ್ಯದಿಂದ ಸಾವನ್ನಪ್ಪಿದೇಯಾ ಅನ್ನುವ ಕುರಿತು ತನಿಖೆ ಶುರುವಾಗಿದೆ. ಅಕ್ರಮ ಸಂಭಂದ್ದಕ್ಕೆ ಹುಟ್ಟಿದ ಮಗುವನ್ನ ಮಾರಾಟ ಮಾಡಿ ಬಳಿಕ ಮಗು ಬುದ್ಧಿಮಾಂದ್ಯ ಇದೆ ಎನ್ನುವ ಕಾರಣಕ್ಕಾಗಿ. ಮಗುವನ್ನ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದ್ದು ಈ ಕುರಿತು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ಒಂದು ದಾಖಲಾಗಿದೆ.
ಕರೋನಾ ನಡುವೆ ಅಕ್ರಮ ಸಂಭಂದ್ದಕ್ಕೆ ಹುಟ್ಟಿದ ಮಗುವನ್ನ ಮಾರಾಟ ಮಾಡಿ ಬಳಿಕ ಮಗು ಬುದ್ಧಿಮಾಂದ್ಯ ಇದೆ ಎನ್ನುವ ಕಾರಣಕ್ಕಾಗಿ. ಮಗುವನ್ನ ಕೊಲೆ ಮಾಡಿರುವ ಆರೋಪ ಏನಿದು ಘಟನೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ರಾಮು ಬಾಳಪ್ಪಾ ಚೌಗಲಾ ಎನ್ನುವವರ ಮನೆಯ ಹೆಣ್ಣು ಮಗಳು 2017 ರಲ್ಲಿ ಮದುವೆ ಆಗದೆ ಗಂಡು ಮಗುವಿಗೆ ಜನ್ಮ ನೀಡಿರುತ್ತಾಳೆ ಎಲ್ಲಿ ಹೊರಗಿನವರಿಗೆ ಗೊತ್ತಾಗಿ ತನ್ನ ಮಗಳ ಭವಿಷ್ಯ ಹಾಳಾಗುತ್ತದೆ ಎಂಬ ಕಾರಣಕ್ಕಾಗಿ ಹುಟ್ಟಿದ ಮಗುವನ್ನ ಚಿಕ್ಕೋಡಿಯ ಡಾ. ಮಾರುತಿ ಮುಸಾಳೆ. ಶ್ರೀಮತಿ ರೇಖಾ ಮುಸಾಳೆ ಮಧ್ಯಸ್ಥಿಕೆಯಲ್ಲಿ ಮಗುವಿನ ಅಜ್ಜ ರಾಮು ಚೌಗಲಾ ಮೂವರು ಸೇರಿಕೊಂಡು ಎರಡು ಲಕ್ಷ ರೂಪಾಯಿಗೆ ಹುಬ್ಬಳ್ಳಿ ಮೂಲದ ಸುವರ್ಣಲತಾ ಗದಿಗೆಪ್ಪಗೌಡರ ಎಂಬುವರಿಗೆ ನಕಲಿ ದಾಖಲೆಗಳನ್ನ ಸೃಷ್ಟಿಸಿ ಮಗುವನ್ನ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಹುಬ್ಬಳ್ಳಿ ಮೂಲದ ಸುವರ್ಣಲತಾರಿಂದ ಅಕ್ರಮವಾಗಿ ಎರಡು ಲಕ್ಷ ಹಣ ಪಡೆದ ಆರೋಪಿಗಳು ಮಗು ಚಿಕ್ಕದಿದ್ದಾಗ ಮಗು ಬುದ್ಧಿಮಾಂದ್ಯತೆ ಹಾಗೂ ಅನಾರೋಗ್ಯದಿಂದ ಕೂಡಿರುವುದನ್ನ ಮುಚ್ಚಿಟ್ಟು ಆರೋಗ್ಯದ ಕುರಿತು ಯಾವುದೇ ಮಾಹಿತಿ ನೀಡದೆ ಸುವರ್ಣಲತಾ ಅವರಿಗೆ ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಮಗು ವಾಪಸ್ ನೀಡಿದ ಸುವರ್ಣಲತಾ ಇನ್ನು ಮಗು ದೊಡ್ಡದಾಗುತ್ತ ಬರುತ್ತಿದ್ದಂತೆ ಮಗು ಬುದ್ಧಿಮಾಂದ್ಯತೆ ಇದ್ದು ಮಗುವಿನ ಖಾಯಿಲೆ ವಾಸಿಯಾಗಲ್ಲ ಮಗು ಬಹಳ ದಿನ ಬದುಕಲ್ಲ ಎಂದು ತಿಳಿಯುತ್ತಿದ್ದಂತೆ ಸುವರ್ಣಲತಾ ಮಗುವುನ್ನ ವಾಪಸ್ ಅಜ್ಜ ರಾಮೂ ಚೌಗಲಾ ಕೈಗೆ ಕೊಟ್ಟು ಹೊರಟು ಹೋಗಿದ್ದಾಳೆ ಆದ್ರೆ ಆರೋಪಿತರು ಮಗುವನ್ನ ಮನೆಗೆ ತೆಗೆದುಕೊಂಡು ಹೋಗಿ ಮಗುವನ್ನ ಕೊಂದು ಸುಟ್ಟು ಹಾಕಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಮಹಿಳಾ & ಮಕ್ಕಳ ಇಲಾಖೆಯಿಂದ ದೂರು ಇನ್ನು ಮಗು ಸಾವಿನ ಕುರಿತು ಹಲವು ಅನುಮಾನಗಳು ಹುಟ್ಟಿದ ಹಿನ್ನಲೆ ಅನುಮಾನಗೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಗು ಸಾವಿನ ಕುರಿತು ಮಾಹಿತಿ ಕಲೆ ಹಾಕಿದಾಗ ಸ್ವತಃ ಆರೋಪಿತರೆ ಮಗುವನ್ನ ಕೊಲೆ ಮಾಡಿದ್ದಾರೆ ಎನ್ನುವ ಮಹಿತಿ ಸಿಕ್ಕಿದ್ದು ಪ್ರಕರಣ ತನಿಖೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಚಿಕ್ಕೋಡಿ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಒಟ್ಟಿನಲ್ಲಿ ಮಗು ಮಾರುವುದಾಗಲಿ ಕೊಳ್ಳುವುದಾಗಲಿ ಎರಡೂ ಸಹ ಅಪರಾಧದಗಳೆ. ಸದ್ಯ ಪ್ರಕರಣದ ಕುರಿತು ಪೊಲೀಸ ತನಿಖೆ ಚುರುಕು ಗೊಂಡಿದ್ದು ವೈದ್ಯರಾದ ಡಾ. ಮಾರುತಿ ಮುಸಾಳೆ ವೈದ್ಯನ ಪತ್ನಿ ರೇಖಾ ಮುಸಾಳೆ ಹಾಗೂ ಅಜ್ಜ ರಾಮು ಚೌಗಲಾ ವಿರುದ್ದ ಐಪಿಸಿ ಸೆಕ್ಷನ್ 302, 201, 465, 471, 420, 34 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ನಿಜಕ್ಕೂ ಮಗು ಮಾರಾಟವಾಗಿತ್ತಾ ಮಗು ಅನಾರೋಗ್ಯದಿಂದಾಗಿ ಸಾವನ್ನಪ್ಪಿದೆಯಾ ಅಥವಾ ಕೊಲೆ ಮಾಡಲಾಗಿದೆ ಅನ್ನೊದರ ಕುರಿತು ಪೊಲೀಸ ತನಿಖೆಯಿಂದಲೆ ಗೊತ್ತಾಗಬೇಕಿದೆ.
https://www.youtube.com/watch?v=EcwCB0Hatvo&feature=youtu.be