ಅಜಾತ ಶತ್ರುವಿನ ಪುಣ್ಯಸ್ಮರಣೆ ಮನೆ ಮನಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಆಚರಿಸೋಣ: ರಾಜಶೇಖರ್ ಸಿರಿ.

0

ಅಜಾತ ಶತ್ರುವಿನ ಪುಣ್ಯಸ್ಮರಣೆ ಮನೆ ಮನಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಆಚರಿಸೋಣ: ರಾಜಶೇಖರ್ ಸಿರಿ.

ಜೇವರ್ಗಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಧರ್ಮಸಿಂಗ್ ಅವರ ತೃತೀಯ ವರ್ಷದ ಪುಣ್ಯಸ್ಮರಣೆ ಕುರಿತು ಕಿರು ಲೇಖನ.

ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಡಾಕ್ಟರ್ ಎನ್ ಧರ್ಮಸಿಂಗ್ ಅವರು ನೆಲೋಗಿ ಗ್ರಾಮದಲ್ಲಿ ಜನ್ಮತಾಳಿ ತಮ್ಮ ಬಾಲ್ಯದ ಶಿಕ್ಷಣವನ್ನು ಮುಗಿಸಿ ನಂತರ ಕಲಬುರ್ಗಿಯಲ್ಲಿ ಪ್ರೌಢ ಶಿಕ್ಷಣ ಕಾಲೇಜು ಶಿಕ್ಷಣ ಮುಗಿಸಿ ಉನ್ನತ ಶಿಕ್ಷಣದಲ್ಲಿ ಕಾನೂನು ಪದವಿಯನ್ನು ಹೈದ್ರಾಬಾದ್ನಲ್ಲಿ ಮುಗಿಸಿದರು. ಪ್ರಭಾವತಿ ಎಂಬುವವರನ್ನು ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ.

ನಂತರ ಕಲಬುರಗಿ ಮಹಾನಗರ ಪಾಲಿಕೆಯ ಸದಸ್ಯರಾಗಿ ಆಯ್ಕೆ ಆಗಿ ತಮ್ಮ ರಾಜಕೀಯ ಪ್ರಾರಂಭವನ್ನು ಮಾಡುತ್ತಾರೆ. ನೆಲೋಗಿ ಆಂಜನೇಯಸ್ವಾಮಿಯ ಆಶೀರ್ವಾದದಿಂದ ಹಾಗೂ ಜೇವರ್ಗಿಯ ಜನ ಮತಬಾಂಧವರು ಆಶೀರ್ವಾದದಿಂದ ಎಂಟು ಬಾರಿ ಜೇವರ್ಗಿಯ ಮತಕ್ಷೇತ್ರದಿಂದ ಆಯ್ಕೆಯಾಗಿ ರಾಜ್ಯ ರಾಜಕೀಯದಲ್ಲಿ ಅನೇಕ ಖಾತೆಗಳನ್ನು ನಿಭಾಯಿಸಿ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುತ್ತಾರೆ.
80 ವರ್ಷದ ಜೀವನದಲ್ಲಿ 50ವರ್ಷ ರಾಜಕೀಯಲ್ಲಿ ಕಳೆದು 13 ಎಲೆಕ್ಷನ್ ಗಳನ್ನು ಎದುರಿಸಿ ಅದರಲ್ಲಿ 11 ಎಲೆಕ್ಷನಲ್ಲಿ ವಿಜಯ ಸಾಧಿಸಿದ್ದಾರೆ. ಎಂಟು ಬಾರಿ ಜೇವರ್ಗಿ ಮತಕ್ಷೇತ್ರದಿಂದ ಆಯ್ಕೆಯಾಗಿ ಸರಕಾರದ ಕಂದಾಯ ಅಬಕಾರಿ ಲೋಪಕಯೋಗಿ ವಿವಿಧ ಖಾತೆಗಳನ್ನು ನಿಭಾಯಿಸಿದ ತಾಲೂಕಿನ ದಿವಂಗತ ಮಾಜಿ ಮುಖ್ಯಮಂತ್ರಿಗಳಾದ ಡಾಕ್ಟರ್ ಎನ್ ಧರ್ಮಸಿಂಗ್ ಜಿ ಅವರಲ್ಲಿದೆ. ಲೋಕಸಭಾ ಕಲಬುರ್ಗಿ ಕ್ಷೇತ್ರದ ಲೋಕಸಭಾ ಸದಸ್ಯರಾಗಿ ಆಯ್ಕೆ ನಂತರ ಬೀದರ್ ಜಿಲ್ಲೆಯ ಲೋಕಸಭಾ ಸದಸ್ಯರಾಗಿ ಆಯ್ಕೆ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಹುದ್ದೆಗಳ ಅಲಂಕರಿಸಿ ಮತ್ತು ವಿರೋಧ ಪಕ್ಷದ ನಾಯಕರಾಗಿ ಜನಪರ ಕೆಲಸಗಳನ್ನು ಮಾಡಿದ್ದಾರೆ. ಕಲ್ಯಾಣ ಕರ್ನಾಟಕಕ್ಕಾಗಿ 371 ಜೆ ಕಲಂ ಜಾರಿ ತರುವಲ್ಲಿ ಅವರ ಶ್ರಮ ಮರೆಯಲಾರದು. ಅನೇಕ ಸರಕಾರಿ ಕಟ್ಟಡಗಳ ಅಭಿವೃದ್ಧಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಮಾಡಿದ್ದಾರೆ. ಹೈಕೋರ್ಟ್ ಪೀಠ ಕಲಬುರಗಿಗೆ ತರುವಲ್ಲಿ ಯಶಸ್ವಿಯಾದ ರಾಜಕಾರಣಿ. ಯುವಕರಿಗೆ ಹಿರಿಯ ನಾಯಕರಿಗೆ ಬಾಳ ಸರಳ ಸಜ್ಜನಿಕೆಯ ಸ್ವಭಾವದಿಂದ ಹಚ್ಚಿಕೊಂಡ ರಾಜಕಾರಣಿ ಮಾಜಿ ಮುಖ್ಯಮಂತ್ರಿಗಳು ದಿವಂಗತ ಧರ್ಮಸಿಂಗ್ ಅವರು. ಇಂದಿನ ಯುವಕರಿಗೆ ಸ್ಪೂರ್ತಿಯಾದ ಅವರ ಪುತ್ರರಾದ ಡಾ ಅಜಯ್ ಸಿಂಗ್ ತಂದೆಯವರ ಮಾರ್ಗದಲ್ಲಿ ತಮ್ಮ ರಾಜಕೀಯ ಜೀವನವನ್ನು ನಡೆಸುತ್ತಿದ್ದಾರೆ. ದೀನದಲಿತರ ಬಡವರ ಕಣ್ಮಣಿಯಾದ ದಿವಂಗತ ಡಾಕ್ಟರ್ ಎನ್ ಧರ್ಮಸಿಂಗ್ ಅವರು ತಮ್ಮದೇ ಆದ ಛಾಪನ್ನು ರಾಜಕೀಯಲ್ಲಿ ಮೂಡಿಸಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.

ದಿವಂಗತ ಮಾಜಿ ಮುಖ್ಯಮಂತ್ರಿ ಡಾಕ್ಟರ್. ಎನ್ ಧರ್ಮಸಿಂಗ್ ಅವರವರ ಪುತ್ರರಾದ ವಿಜಯಸಿಂಗ್ ವಿಧಾನಪರಿಷತ್ ಸದಸ್ಯರು ಹಾಗೂ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರು ಕರ್ನಾಟಕ ಸರ್ಕಾರ ಎರಡು ಜನ ಗಂಡು ಮಕ್ಕಳು ರಾಜಕೀಯಲ್ಲಿ ತಮ್ಮದೇಯಾದ ಅನೇಕ ಜವಾಬ್ದಾರಿಗಳನ್ನು ಅಲಂಕರಿಸಿ ತಂದೆಯಂತೆ ಮಕ್ಕಳು ಜನರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇವರಿಗೆ ಓರ್ವ ಪುತ್ರಿಯಾದ ಪ್ರಿಯದರ್ಸಿನಿ ಚಂದ್ರಸಿಂಗ್ ಅವರು ಕೂಡ ತಂದೆಯ ಹಾಕಿಕೊಟ್ಟ ಮಾರ್ಗದಲ್ಲಿಯೇ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.

27/07/ 2020 ರಂದು ತೃತೀಯ ಪುಣ್ಯಸ್ಮರಣೆ ಕೊರೊನಾವೈರಸ್ ಹಿನ್ನೆಲೆಯಲ್ಲಿ ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಂಡು ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಸನಿಟ್ಜರ್ ಬಳಸಿ ಮನೆ-ಮನಗಳಲ್ಲಿ ದಿವಂಗತ ಡಾಕ್ಟರ್ ಎನ್ ಧರ್ಮಸಿಂಗ್ ಅವರ ತೃತೀಯ ಪುಣ್ಯಸ್ಮರಣೆ ಆಚರಣೆ ಮಾಡಬೇಕೆಂದು ಕಾಂಗ್ರೆಸ್ ಯುವ ಮುಖಂಡರಾದ ರಾಜಶೇಖರ್ ಸಿರಿ ಜೇವರ್ಗಿ ಮತ ಬಾಂಧವರಲ್ಲಿ ವಿನಂತಿಸಿಕೊಂಡಿದ್ದಾರೆ.

ಶರಣಪ್ಪ ಎನ್ ನೀರಡಗಿ.

LEAVE A REPLY

Please enter your comment!
Please enter your name here