ಅಡಹಳ್ಳಿ ಗ್ರಾಮ ಪಂಚಾಯಿತಿಗೆ ಜಯಕರ್ನಾಟಕ ಸಂಘಟನೆಯಿಂದ ಮನವಿ

0

ಅಡಹಳ್ಳಿ ಗ್ರಾಮ ಪಂಚಾಯಿತಿಗೆ ಜಯಕರ್ನಾಟಕ ಸಂಘಟನೆಯಿಂದ ಮನವಿ

ಜಯಕರ್ನಾಟಕ ಸಂಘಟನೆಯ ವತಿಯಿಂದ ಅಡಹಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಮನವಿ ಪತ್ರವನ್ನು ಸಲ್ಲಿಸಿದ ನಂತರ ಜಯಕರ್ನಾಟಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಪ್ರಹಲಾದ್ ವಾಗ್ಮೋರೆ ಮಾತನಾಡಿ.ಸರ್ಕಾರ ಬಡವರಿಗಾಗಿ ಹಲವಾರು ಯೋಜನೆಗಳನ್ನು ತಂದಿದ್ದರೂ ಸಹ, ಬಡವರಿಗೆ ಸಿಗಬೇಕಾದ ಯೋಜನೆಯ ಲಾಭವನ್ನು ಪಂಚಾಯಿತಿಯ ಸಿಬ್ಬಂದಿಗಳು ಅವರವರ ಕುಟುಂಬಗಳಿಗೆ ಬಳಸಿಕೊಂಡು ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ತನಿಖೆಯನ್ನು ಕೈಗೊಂಡು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಬಡವರಿಗೆ ಸಿಗಬೇಕಾದ ಯೋಜನೆಗಳನ್ನು ಸಿಗುವಂತೆ ಮಾಡಬೇಕು ಇಲ್ಲವಾದಲ್ಲಿ ಜಯಕರ್ನಾಟಕ ಸಂಘಟನೆ ವತಿಯಿಂದ ಹಾಗೂ ಅಡಹಳ್ಳಿ ಗ್ರಾಮಸ್ಥರು ಕೂಡಿಕೊಂಡು
ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಉಗ್ರವಾದ ಹೋರಾಟ ಮಾಡುವುದಾಗಿ ಮಾಧ್ಯಮದವರಿಗೆ ತಿಳಿಸಿದರು
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರು ಸುನಿಲ್ ನಾಯಕ್
ಅಡಹಳ್ಳಿ ಶಾಖಾ ಅಧ್ಯಕ್ಷರ ಅನಿಲ್ ಸಿಂಗೆ,ಉಪಾಧ್ಯಕ್ಷ ಸಂದೀಪ್ ಕಾಂಬಳೆ, ಬಸವರಾಜ್ ಮಾದರ್, ವಿಜಯಕುಮಾರ್ ಪವಾರ್, ಸುನಿಲ್ ಕಾಂಬಳೆ, ಸತೀಶ್ ಕಾಂಬಳೆ, ಇನ್ನುಳಿದ ಸದಸ್ಯರು ಅಡಹಳ್ಳಿ ಗ್ರಾಮಸ್ಥರು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here