ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾಗತಿಕ ಕಂಪನಿಗಳಿಗೆ ಅತಿಯಾದ ತೆರಿಗೆ ಹಾಕುತ್ತಿದೆ. ಆರ್ಥಿಕತೆ ಕುಸಿದಿದೆ, ಆಟೋಮೊಬೈಲ್ ಮಾರಾಟ ನಿರೀಕ್ಷಿತ ಮಟ್ಟದಲ್ಲಿಲ್ಲ. ಇದರ ನಡುವೆ ಅತಿಯಾದ ತೆರಿಗೆಯಿಂದ ಕಂಪನಿಗೆ ನಷ್ಟವಾಗುತ್ತಿದೆ. ಹಾಗಾಗಿ ಭಾರತದಲ್ಲಿ ಉದ್ಯಮ ವಿಸ್ತರಿಸುವುದಿಲ್ಲ ಎಂದು ಟೊಯೋಟಾ ಇಂಡಿಯಾ ಸ್ಪಷ್ಟಪಡಿಸಿದೆ.
ಟೊಯೋಟಾ ಕಿರ್ಲೋಸ್ಕರ್ ಮುಖ್ಯಸ್ಥ ಶೇಖರ್ ವಿಶ್ವನಾಥನ್, ಕೇಂದ್ರ ಸರ್ಕಾರ ಜಾಗತಿಕ ಕಂಪನಿಗಳ ಕಾರು ಬೈಕ್ ಉತ್ಪಾದನೆ ಹಾಗೂ ಮಾರಾಟದ ಮೇಲೆ ಅತಿಯಾದ ತೆರಿಗೆ ಹಾಕುತ್ತಿದೆ. ಹೀಗಾಗಿ ಭಾರತದಲ್ಲಿ ಟೊಯೋಟಾ ಉದ್ಯಮ ವಿಸ್ತರಿಸುವ ಯೋಜನೆ ಕೈಬಿಡಲಾಗಿದೆ ಎಂದು ಹೇಳಿದ್ದಾರೆ.
ಒಂದೆಡೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದೆ. ಕಚ್ಚಾ ವಸ್ತುಗಳ ಆಮದಿನ ಮೇಲೆ ಹೆಚ್ಚಿನ ತೆರಿಗೆ ಹಾಕಲಾಗುತ್ತಿದ್ದು, ಪ್ರತಿ ಹಂತದಲ್ಲಿ ಅತಿಯಾದ ತೆರಿಗೆ ಹೇರಲಾಗ್ತಿದೆ. ನಾವು ಭಾರತದಿಂದ ನಿರ್ಗಮಿಸುವುದಿಲ್ಲವಾದ್ರು ಉದ್ಯಮ ವಿಸ್ತರಣೆ ಮಾಡುವುದಿಲ್ಲ. ಹಾಗಾಗಿ ಹೆಚ್ಚಿನ ಉದ್ಯೋಗವಕಾಶ ಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಇಂಧನ ವಾಹನಗಳ ಮೇಲೆ ಶೇಕಡಾ 28 ರಷ್ಟು ತೆರಿಗೆ ವಿಧಿಸುತ್ತಿರುವ ಟೊಯೋಟಾ ಮೋಟಾರ್ಸ್, ಕೇಂದ್ರ ಸರ್ಕಾರ ಭಾರತೀಯ ಉದ್ಯಮಗಳ ಪೋಷಣೆ ಹೆಸರಲ್ಲಿ ಭಾರತದಲ್ಲಿ ನೆಲೆಯೂರಿರುವ ಹಾಗೂ ಭಾರತದ ಆರ್ಥಿಕತೆ, ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಕಂಪನಿಗಳ ಮೇಲೆ ಪ್ರಹಾರ ನಡೆಸುತ್ತಿದೆ. ಇದು ಮತ್ತೊಂದು ಅಧಪತನಕ್ಕೆ ದಾರಿಯಾಗಲಿದೆ ಎಂದಿದೆ.