ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಕಠಿಣ ಕಾನೂನುಗಳನ್ನು ಜಾರಿಗೆ ತೆಗೆದುಕೊಂಡು ಬರಬೇಕು ಎಂಬ ಹೋರಾಟಕ್ಕೆ ಬೆಂಬಲ ಕೊಟ್ಟ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್
ಸ್ಥಳ : ಕಿತ್ತೂರು
ದೇಶದಾದ್ಯಂತ ವಿದ್ಯಾರ್ಥಿನಿಯರ ಮತ್ತು ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆ ಹಾಗೂ ಕ್ರೌರ್ಯದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದನ್ನು ನಿಯಂತ್ರ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಕೂಡಲೇ ಕಠೀಣ ಕಾನೂನನ್ನು ಜಾರಿಗೊಳಿಸಬೇಕು ಆರೋಪಿಗಳಿಗೆ ಗಲ್ಲು ಶಿಕ್ಷ ನೀಡಲು ಮುಂದಾಗಬೇಕು. ದೆಹಲಿ ನಿರ್ಭಯಾ ಪ್ರಕರಣ, ಆಶೀಫಾಳ ಕಥುವಾ ಪ್ರಕರಣ, ಉತ್ತರ ಪ್ರದೇಶದ ಉನ್ನಾವೋ ಮತ್ತು ಹೈದ್ರಾಬಾದಿನ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮಾಸುವ ಮುನ್ನೆವೇ ಇಡೀ ನಾಗರಿಕ ಸಮಾಜವೆ ತಲೆ ತಗ್ಗಿಸುವಂತ ಅಮಾನವೀಯ ಮತ್ತು ಕ್ರೂರ ವಾದ ಅತ್ಯಾಚಾರ ಮಾಡಿ ಕೊಲೆ ಪ್ರಕರಣವು ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದಿದೆ ದಲಿತ ಸಮುದಾಯಕ್ಕೆ ಸೇರಿದ ಮನೀಶಾ ಎಂಬ 19 ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿ, ಚಿತ್ರ ಹಿಂಸೆ ನೀಡಿ ಸಾಕ್ಷಿ ನಾಶಕ್ಕಾಗಿ ನಾಲಿಗೆಯನ್ನು ಕತ್ತರಿಸಿ ಕೊಲೆಗೆ ಯತ್ನವನ್ನು ಮಾಡಿದ್ದಾರೆ. ಇದು ಅತ್ಯಂತ ದುರಂತ ಮತ್ತು ಖಂಡನೀಯ. ಕೂಡಲೇ ಪ್ರಕರಣವನ್ನು ಕುರಿತಂತೆ ಸಮಗ್ರವಾದ ತನಿಖೆ ಯನ್ನು ನಡೆಸಿ ಆರೋಪಗಳಿಗೆ ಸೂಕ್ತ ಶಿಕ್ಷೆಗೆ ಗುರಿಪಡಿಸಬೇಕು. ಎನ್.ಸಿ.ಆರ್.ಬಿ ನೀಡುರುವ ದಾಖಲೆಗಳ ಪ್ರಕಾರ ದೇಶದಲ್ಲಿ ಪ್ರತಿ ದಿನ 88 ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಕೂಡಲೇ ಕಾನೂನು ಬದಲಾವಣೆಗೊಳಿಸಿ ಮೂರು ತಿಂಗಳೊಳಗಾಗಿ ಪೂರ್ಣ ತನಿಖೆ ಮುಗಿಸಿ ಆರೋಪಿಗಳಿಗೆ ಕ್ರೂರ ಶಿಕ್ಷೆಗೆ ಗುರಿಪಡಿಸಲು ಕಠೀಣ ಕಾನೂನು ಜಾರಿಗಿಳಿಸಬೇಕೆಂದು ಒತ್ತಾಯಿಸಿ ಕಿತ್ತೂರಿನ ಯುವಕರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿಕೊಟ್ಟು ಅವರೊಂದಿಗೆ ಚರ್ಚಿಸಿ ಬೆಂಬಲ ಕೊಟ್ಟು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ವತಿಯಿಂದ ರಾಜ್ಯ ಉಪ ಸಂಘಟನಾ ಕಾರ್ಯದರ್ಶಿ ಬಸವರಾಜು ಮಾತನಾಡಿದರು.
ಈ ಸಂದರ್ಭದಲ್ಲಿ
ನ್ಯಾಯವಾದಿ ಸೋಮು ಮುತ್ತ್ಯನವರ, ಸಂತೋಷ ಮಾರಿಹಾಳ, ಆದಿತ್ಯಾ ಬಿಕ್ಕಣ್ಣವರ, ಶಿವು ಹಿರೇಮಠ, ವಿನಾಯಕ ಪತ್ತಾರ, ಪ್ರಮೋಧ ನಾಯ್ಕ, ಮಲ್ಲಿಕಾರ್ಜುನ ತಳವಾರ, ಸಂತೋಷ ಹುಲಮನಿ, ರಾಜು ಗುಡ್ಲೂರ, ಅದಿಲ ಹೊಂಗಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು