ಅತ್ಯಾಧುನಿಕ ಮಾದರಿಯ ಕರ್ನಾಟಕ ಭವನ ನಿರ್ಮಾಣ: ಕಾರಜೋಳ

0

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 120 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಿರುವ ಕರ್ನಾಟಕ ಭವನ 1 ಕಾವೇರಿ ಅತಿಥಿ ಗೃಹವನ್ನು ಗುಜರಾತ್ ಭವನ ಮತ್ತು ಮಹಾರಾಷ್ಟ್ರ ಭವನಗಳ ವಿನ್ಯಾಸ ಮಾದರಿಗಳನ್ನು ಅಳವಡಿಸಿಕೊಂಡು ಅತ್ಯಾಧುನಿಕ ಮಾದರಿಯಲ್ಲಿ ನಿರ್ಮಿಸಲಾಗುವುದು ಎಂದು ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.

ಗುಜರಾತ್ ಭವನ ಮತ್ತು ಮಹಾರಾಷ್ಟ್ರ ಭವನಕ್ಕೆ ಭೇಟಿ ನೀಡಿ ಆ ಭವನಗಳ ವಿನ್ಯಾಸ, ತಂತ್ರಜ್ಞಾನ, ಗುಣಮಟ್ಟ, ಸೌಲಭ್ಯಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ದೆಹಲಿಯಲ್ಲಿರುವ ವಿವಿಧ ರಾಜ್ಯಗಳ ಭವನಗಳಲ್ಲಿ ಈ ಎರಡು ಭವನಗಳು ಅತ್ಯುತ್ತಮವಾಗಿವೆ. ಆ ಭವನಗಳ ಅಧಿಕಾರಿಗಳೊಂದಿಗೆಯೂ ಈ ಕುರಿತು ಚರ್ಚಿಸಲಾಗಿದೆ.

ಈ ಭವನಗಳ ವಿನ್ಯಾಸ, ತಂತ್ರಜ್ಞಾನ, ಸೌಲಭ್ಯಗಳ ಮಾದರಿಗಳನ್ನು ಅಳವಡಿಸಿಕೊಂಡು ಕರ್ನಾಟಕ ಭವನದ ಕಾವೇರಿ ಅತಿಥಿ ಗೃಹವನ್ನು ಅತ್ಯುತ್ತಮ ವಿನ್ಯಾಸ ಹಾಗೂ‌ ಗುಣಮಟ್ಟದೊಂದಿಗೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲಾಗುವುದು. ಕಾಮಗಾರಿಯ ವಿನ್ಯಾಸ ಹಾಗೂ ಗುಣಮಟ್ಟದ ಮೇಲೆ ತೀವ್ರ ನಿಗಾವಹಿಸಿ, ನಿರಂತರ ಮೇಲ್ವಿಚಾರಣೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here