ಸತತ ಪ್ರಯತ್ನ ಹಾಗೂ ಓದುವ ಹವ್ಯಾಸ ರೂಪಿಸಿಕೊಂಡೆರ ನಮ್ಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುವುದನ್ನು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಎಸ್ಎಸ್ಎಲ್‌ಸಿ ವಿದ್ಯಾರ್ಥಿ ಇಂಗ್ಲೀಷ ಮಾಧ್ಯಮದಲ್ಲಿ 625 ಕ್ಕೆ 604 ಅಂಕ ಪಡೆಯುವುದರ ಮೂಲಕ ಅಥಣಿ ಕಿತ್ತೂರ ರಾಣಿ ಚನ್ನಮ್ನ ವಸತಿ ಶಾಲೆಗೆ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಪೋಷಕರ ಹಾಗೂ ತಾನೂ ಕಲಿತ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.
ಕಾಗವಾಡ ತಾಲ್ಲೂಕಿನ ಮೋಳೆ ಗ್ರಾಮದ ಪೂಜಾ ಎಂಬ ವಿದ್ಯಾರ್ಥಿನಿ 2019- 20 ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 625 ಕ್ಕೆ 604 ಅಂಕ ಪಡೆದು 96.64 % ರಷ್ಟು ಅಂಕಗಳಿಸಿ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ.
ದೀಪಾ ಭಡಕೆ ಕನ್ನಡ ವಿಷಯದಲ್ಲಿ 122, ಇಂಗ್ಲಿಷ್ 99, ಹಿಂದಿ 100, ವಿಜ್ಞಾನ 93, ಗಣಿತ 92 ಮತ್ತು ಸಮಾಜ ವಿಜ್ಞಾನದಲ್ಲಿ 98 ಅಂಕ ಗಳಿಸಿದ್ದಾಳೆ. ವಿದ್ಯಾರ್ಥಿಯ ಮನೆಯಲ್ಲಿ ಕಟುಂಬಸ್ಥರಿಂದ ಸಂತೋಷ ಮುಗಿಲು ಮುಟ್ಟಿದೆ. ಈ ಸಂದರ್ಭದಲ್ಲಿ ಪೂಜಾ ಭಡಕೆ ಮಾತನಾಡಿ ಈ ಒಂದು ಸಾಧನೆಗೆ ನನ್ನ ತಂದೆ ತಾಯಿಗಳೆ ಸ್ಪೂರ್ತಿ ಈ ಕೊರೊನಾ ಮಹಾಮಾರಿಯಲ್ಲಿ ದಿನಂ ಪ್ರತಿ ನನ್ನ ತಂದೆ ಶಾಲೆಗೆ ಕರೆದುಕೊಂಡು ಹೋಗಿ ನನಗೆ ಪರೀಕ್ಷೆಯಲ್ಲಿ ಧೈರ್ಯ ತುಂಬಿದರು ಎಂದು ಹೇಳಿದರು.
ನನಗೆ ಎಷ್ಟೇ ಕಷ್ಟ ಬಂದರೂ ಸಹಿತ ನನ್ನ ಮಗಳು ಎಲ್ಲಿವರೆಗೂ ಓದುತ್ತಾಳೋ ಅಲ್ಲಿಯವರೆಗೆ ಓದಿಸುತ್ತೇನೆ. ಕಷ್ಟ ಅನ್ನೋದು ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ, ಇಂತಹ ಬುದ್ದಿವಂತ ಮಗಳು ಸಿಕ್ಕಿದ್ದು ನಮ್ಮ ಪುಣ್ಯ ಎಂದು ಹೇಳಿದರು
ಒಟ್ಟಾರೆಯಾಗಿ ಸಾಧಿಸುವ ಛಲವೊಂದಿದ್ದರೆ ಏನಬೇಕಾದರೂ ಸಾಧಿಸಬಹುದು ಇದಕ್ಕೆ ಬಡತನ ಸಿರಿತನ ಮುಖ್ಯವಲ್ಲ ಓದುವ ಹಂಬಲ, ಮನಸ್ಸು ಬೇಕು ಎನ್ನುವುದನ್ನು ಪೂಜಾ ಭಡಕೆ ತೋರಿಸಿಕೊಟ್ಟಿದ್ದಾಳೆ.