ಅಥಣಿ: ತಾಲೂಕಿನಲ್ಲಿ ಇತ್ತಿಚೆಗೆ ದ್ವಿಚಕ್ರವಾಹನ ಕಳ್ಳತನ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಳಗಾವಿ ಎಸ್ಪಿ ಲಕ್ಷ್ಮಣ್ ನಿಂಬರಗಿ ಹಾಗೂ ಅಥಣಿ ಡಿವೈಎಸ್ಪಿ ಎಸ್ ವಿ ಗಿರೀಶ್ ಅವರ ನೇತೃತ್ವದಲ್ಲಿ ಅಥಣಿ ಪೋಲಿಸರು ದ್ವಿಚಕ್ರ ವಾಹನ ಕಳ್ಳನನ್ನು ಸೆರೆ ಹಿಡಿದು ಪ್ರಕರಣ ಭೇದಿಸಿದ್ದಾರೆ.

0

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು

ಬೆಳಗಾವಿ, ಬಾಗಲಕೋಟೆ, ಮತ್ತು ಮಹಾರಾಷ್ಟ್ರದ ರಾಜ್ಯದ ವಿವಿಧ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು. ಈ ಪ್ರಕರಣವನ್ನು ಪತ್ತೆಮಾಡಿರುವ ಪಿಎಸ್ಐ ಎಮ್ ಡಿ ಘೋರಿ ಹಾಗೂ ಅಥಣಿ ಪಿಎಸ್ಐ ಕುಮಾರ್ ಹಾಡಕಾರ ಮತ್ತು ತನಿಖಾ ತಂಡದ ಕಾರ್ಯವನ್ನು ಶ್ಲಾಘಿಸಿ ಇದೇ ರೀತಿ ಕಾರ್ಯನಿರ್ವಹಿಸಲಿ ಕರ್ನಾಟಕದಲ್ಲಿ ಮತ್ತು ಭಾರತದಲ್ಲಿ ಪೊಲೀಸ್ ಅಧಿಕಾರಿಗಳು ಉನ್ನತ ಹುದ್ದೆ ಉನ್ನತಮಟ್ಟಕ್ಕೆ ಹೋಗಲಿ ನಮ್ಮ ಮನೆಗೆ ಒಳ್ಳೆ ಆಡಳಿತ ನೀಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಥಾಣೆಯ ಪೊಲೀಸ್ ಠಾಣೆಯ ಹೆಸರು ಬರಲಿಆರಕ್ಷಕ ಅಧೀಕ್ಷಕರು ಬೆಳಗಾವಿ ರವರು ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಿದ್ದಾರೆ.

ಅಥಣಿ: ತಾಲೂಕಿನಲ್ಲಿ ಇತ್ತಿಚೆಗೆ ದ್ವಿಚಕ್ರವಾಹನ ಕಳ್ಳತನ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಳಗಾವಿ ಎಸ್ಪಿ ಲಕ್ಷ್ಮಣ್ ನಿಂಬರಗಿ ಹಾಗೂ ಅಥಣಿ ಡಿವೈಎಸ್ಪಿ ಎಸ್ ವಿ ಗಿರೀಶ್ ಅವರ ನೇತೃತ್ವದಲ್ಲಿ ಅಥಣಿ ಪೋಲಿಸರು ದ್ವಿಚಕ್ರ ವಾಹನ ಕಳ್ಳನನ್ನು ಸೆರೆ ಹಿಡಿದು ಪ್ರಕರಣ ಭೇದಿಸಿದ್ದಾರೆ.

ಆರೋಪಿಯಾಗಿರುವ ರಮಜಾನ, ಹುಸೇನಸಾಬ, ಐನಾಪೂರ (೨೭) ಸಾ/ ಶಿರಹಟ್ಟಿ ಹಾಲಿ ಯಲ್ಲಮವಾಡಿ ನವ ಗ್ರಾಮದಲ್ಲಿ ಪ್ಲಾಟ್ ನಲ್ಲಿ ವಾಸವಾಗಿರುವ ಇವನನ್ನು ಬಂಧಿಸಿ ಅವರಿಂದ ಅಂದಾಜು ಐದು ಲಕ್ಷ ರೂಪಾಯ ೧೫ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಆರೋಪಿ ರಮಜಾನ್ ಹುಸೇನ್ ಐನಾಪೂರ ಹಲವರಿಗೆ ಕಡಿಮೆ ದರದಲ್ಲಿ ಕಳ್ಳತನ ಮಾಡಿದ್ದ ಬೈಕಗಳನ್ನು ಮಾರಾಟ ಮಾಡಿದ್ದು ಹತ್ತು ಹದಿನೈದು ದಿನಗಳಲ್ಲಿ ಅವುಗಳ ದಾಖಲೆ ನೀಡುವದಾಗಿ ಹೇಳಿ ವಂಚಿಸುತ್ತಿದ್ದ ಮಾಹಿತಿ ಲಭ್ಯವಾಗಿದೆ.ಗಡಿಭಾಗದಲ್ಲಿ ಹೆಚ್ಚಿದ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳ ಪತ್ತೆಗಾಗಿ ಬೆಳಗಾವಿ ಪೆÇೀಲಿಸ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ಹಾಗೂ ಹೆಚ್ಚುವರಿ ಅಧೀಕ್ಷಕ ಅಮರನಾಥ ರೆಡ್ಡಿ ಇವರ ಮಾರ್ಗದರ್ಶನ ದಲ್ಲಿ ಅಥಣಿ ಡಿವೈಎಸ್ಪಿ ಎಸ್ ವಿ ಗಿರೀಶ ಮತ್ತು ಅಥಣಿ ಸಿಪಿಐ ಶಂಕರಗೌಡ ಬಸನಗೌಡರ ಅವರ ಉಸ್ತುವಾರಿಯಲ್ಲಿ ಅಪರಾಧ ವಿಭಾಗದ ಪಿಎಸ್ಐ ಎಮ್ ಡಿ ಘೋರಿ ಅವರ ನೇತೃತ್ವದಲ್ಲಿ ಎಎಸ್ಐ ವ್ಹಿ ಜಿ ಆರೇರ್, ಸಿಬ್ಬಂದಿಗಳಾದ ಎ ಎ ಈರಕರ,ಪಿ ಬಿ ನಾಯಕ,ಎಮ್ ಬಿ ದೊಡಮನಿ,ಬಿ ಜೆ ತಳವಾರ,ಎಸ್ ಕೆ ನೇಮಗೌಡ,ಇವರ ತಂಡ ರಚಿಸಲಾಗಿದ್ದು ಆರೋಪಿಯನ್ನು ಪತ್ತೆ ಹಚ್ಚಿ ಅಂದಾಜು 5 ಲಕ್ಷ ಮೌಲ್ಯದ ಹದಿನೈದು ಬೈಕಗಳನ್ನು ಜಪ್ತು ಮಾಡಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ

ಕಳೆದ ಒಂದು ವರ್ಷದ ಅವಧಿಯಲ್ಲಿ ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಿದ್ದು ದಾಖಲೆ ಇಲ್ಲದ ಬೈಕ ಸವಾರನೊಬ್ಬನ ವಿಚಾರಣೆ ಮಾಡಿದ ವೇಳೆ ಕಡಿಮೆ ಹಣಕ್ಕೆ ಬೈಕ್ ಖರೀದಿ ಮಾಡಿರುವದಾಗಿ ಹೇಳಿದ್ದರಿಂದ ಮೂಲವನ್ನು ಕೆದಕಿದ ಅಥಣಿ ಪೋಲಿಸರಿಗೆ ಬೆಳಗಾವಿ, ಬಾಗಲಕೋಟೆ ಮತ್ತು ಮಹಾರಾಷ್ಟ್ರದ ವಿವಿಧ ಪೋಲಿಸ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಕೊಕಟನೂರ ಗ್ರಾಮದಲ್ಲಿ ಮಾರಾಟ ಮಾಡುತ್ತಿದ್ದ ಶಿರಹಟ್ಟಿ ಗ್ರಾಮದ ರಮಜಾನ್ ಹುಸೇನಸಾಬ್ ಐನಾಪೂರ ಸಿಕ್ಕಿ ಬಿದ್ದಿದ್ದು ಕಳೆದ ಎರಡು ಮೂರು ವರ್ಷಗಳಿಂದ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಬೈಕಗಳನ್ನು ಕಳ್ಳತನ ಮಾಡಿ ಮಾರಾಟ ಮಾಡಿದ್ದ ಹದಿನೈದು ಬೈಕಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಿದ್ದಾರೆ

LEAVE A REPLY

Please enter your comment!
Please enter your name here