ಅಥಣಿ ತಾಲೂಕಿನಲ್ಲಿ ಸರಳವಾಗಿ ೭೪ ಸ್ವಾಂತಂತ್ರ್ಯ ದಿನಾಚರಣೆ ಆಚರಣೆ.

0

ಅಥಣಿ: ತಾಲೂಕು ಆಡಳಿತದಿಂದ ಸರಳವಾಗಿ ೭೪ ಸ್ವಾಂತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರಕ್ಕೆ ಶಾಸಕ ಮಹೇಶ್ ಕುಮಟಳ್ಳಿ ಪೂಜೆ ಸಲ್ಲಿಸಿದರು.

ಭೋಜರಾವ್ ಕ್ರೀಡಾಂಗಣದಲ್ಲಿ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಧ್ವಜಾರೋಹಣ ನೆರವೇರಿಸಿದರು. ನಂತರ ಪೋಲಿಸ್ ಇಲಾಖೆಯ ಪರವಾಗಿ ಗೌರವ ವಂದನೆ ಸ್ವೀಕರಿಸಿದರು.

ಇದೆ ವೇಳೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮಾತನಾಡಿದ, ಸ್ವಾತಂತ್ರ್ಯ ಹೋರಾಟಗಾರ ಅವರನ್ನು ಈ ಸಮಯದಲ್ಲಿ ಸ್ಮರಣೆ ಮಾಡಿದರು ಹಾಗೂ ಕೊರೊನಾ ವೈರಸ್ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಗಳು ಸೇವೆ ಅನನ್ಯವಾಗಿದೆ. ಅವರಿಗೆ ವಿಶೇಷವಾಗಿ ದನ್ಯವಾದಗಳು ಸಲ್ಲಿಸಿದರು. ಹಾಗೂ ಕೊರೊನಾ ವಾರಿಯರ್ಸ್ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಸರ್ಕಾರ ಮುಂದಿನ ದಿನಗಳಲ್ಲಿ ಈಡೇರಿಸುತ್ತದೆ ಎಂದು ಭರವಸೆ ನೀಡಿದರು. ಮತ್ತು ಅಥಣಿ ವಿಧಾನಸಭಾ ಕ್ಷೇತ್ರದ ಹಲವಾರು ನೀರಾವರಿ ಯೋಜನೆ ರೂಪಿಸಲಾಗಿದೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅಥಣಿಮೇಲೆ ಇರುವ ಅತಿ ಕಾಳಜಿಗೆ ೧೬೦೦ ನೂರು ಕೊಟಿ ರೂಪಾಯಿಗಳ ನೀರಾವರಿ ಪ್ರಸ್ತಾವನೆ ಯೋಜನೆ ನೀಡಿದ್ದಾರೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಜಾರಿಮಾಡಲಾಗುವದು. ತಾಲೂಕಿ ೧೭ ಗ್ರಾಮಗಳಲ್ಲಿ ನೆರೆ ಸಂತ್ರಸ್ತರ ಪರಿಹಾರ ಹಾಗೂ ಸವಳು ಜವಳು ಕಾರ್ಯ ನಡೆಯುತ್ತಿದೆ. ಹಾಗೂ ಅಥಣಿ ಬಹುತೇಕ ಭಾಗ ಮಳೆ ಆಶ್ರಿತ ಇರುವುದರಿಂದ ನೀರಾವರಿಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ನಂತರ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಮಾತನಾಡಿ, ೭೪ ಸ್ವಾಂತಂತ್ರ್ಯ ದಿನಾಚರಣೆ ಶುಭಾಶಯ ಹೇಳುತ್ತಾ, ತಾಲೂಕಿನ ಬರಪೀಡಿತಗಳಾದ ಕಕಮರಿ ಕೊಟ್ಟಲಗಿ ಏತ ನೀರಾವರಿ ಯೋಜನೆ ರೂಪಿಸಿದ ಸ್ಥಳಿಯ ಶಾಸಕ ಮಹೇಶ್ ಕುಮಟಳ್ಳಿ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಜನತೆ ಪರವಾಗಿ ಧನ್ಯವಾದಗಳು ಸಲ್ಲಿಸಿದರು. ಹಾಗೂ ಕೃಷಿ ಇಲಾಖೆ ರೈತರಿಗೆ ಹಲವಾರು ಯಂತ್ರ ಸಲಕರಣೆ ವಿತರಿಸಿದ್ದಾರೆ.

ಕೊವಿಡ್೧೯ ಮಹಾಮಾರಿ ಯಿಂದ ಜನ ಸಮೂಹ ತತ್ತರಿಸಿದೆ ಹಿಂತ ಸಂದಿಗ್ಧ ಪರಿಸ್ಥಿತಿಯಲ್ಲಿ
ಕೊರೊನಾ ವಾರಿಯರ್ಸ್ ಗಳು ಅಮೋಘ ಸೇವೆ ಶ್ಲಾಗನೀಯ. ಅವರಿಗೆ ತಾಲೂಕು ಆಡಳಿತ ಪರವಾಗಿ ಧನ್ಯವಾದಗಳು ಹಾಗೂ ಈ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಗಳನ್ನು ಸನ್ಮಾನಿಸಲಾಗುವುದು ಇದು ನಮ್ಮ ಭಾಗ್ಯ ಎಂದು ಹೆಳಿದರು. ೧೯೦೯ ರಲ್ಲಿ ತಾಲೂಕು ಸಮುದಾಯದ ಆಸ್ಪತ್ರೆ ಪ್ರಾರಂಭವಾಗಿದೆ ಅವತ್ತಿನಿಂದ ಇವತ್ತಿನ ವರೆಗೂ ಆರೋಗ್ಯ ಸೇವೆ ನೀಡುತ್ತಿದ್ದೇ ಕೊರೊನಾ ಸಂದರ್ಭದಲ್ಲಿ ತಾಲೂಕು ಆಸ್ಪತ್ರೆ ಸೇವೆ ಪ್ರಮುಖ ಪಾತ್ರವಹಿಸಿದೆ ಆಸ್ಪತ್ರೆ ಅಧಿಕಾರಿಗಳು ಸಿಬ್ಬಂದಿಗಳಿಗೆ ದನ್ಯವಾದಗಳು ಸಲ್ಲಿಸಿದರು.

ಇದೆ ಸಂದರ್ಭದಲ್ಲಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ತಹಶೀಲ್ದಾರ್ ದುಂಡಪ್ಪ ಕೋಮಾರ,ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಮುಗ್ಗನವರ ಅಥಣಿ ಡಿವೈಎಸ್ಪಿ ಎಸ್ ವಿ ಗಿರೀಶ್, ಸಿಪಿಐ ಶಂಕರಗೌಡ ಬಸನಗೌಡ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರಪ್ಪನವರ, ಪಿಎಸ್ಐ ಕುಮಾರ್ ಹಾಡ್ಕರ್, ಉಪ ತಹಶೀಲ್ದಾರ್ ರಾಜು ಬುರ್ಲಿ,c ಹಾಗು ಸಮಸ್ಥ ಅಥಣಿ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಕಲ್ಲಪ್ಪ ಕನಾಳ ಅಥಣಿ

LEAVE A REPLY

Please enter your comment!
Please enter your name here