ಅಥಣಿ ಪಟ್ಟಣದಲ್ಲಿ ಕೊರೊನಾ ವಾರಿಯರ್ ಗಳ ಸಭೆ ನಡೆಸಿದ ಸಿಇಓ

0

ಅಥಣಿ ವರದಿ

ಅಥಣಿ ಪಟ್ಟಣದಲ್ಲಿ ಕೊರೊನಾ ವಾರಿಯರ್ ಗಳ ಸಭೆ ನಡೆಸಿದ ಸಿಇಓ

ಅಥಣಿ ಪಟ್ಟಣದ ಆರ್ ಎಚ್ ಕುಲಕರ್ಣಿ ಸಭಾಭವನದಲ್ಲಿ ಅಧಿಕಾರಿಗಳ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳ ಜೋತೆ ಸಿಇಓ ರಾಜೆಂದ್ರ ಸಭೆ ನಡೆಸಿದರು.

ಅಥಣಿ ಮತ್ತು ಕಾಗವಾಡ ತಾಲೂಕಿನಲ್ಲಿ ಅಧಿಕ ಸಂಖ್ಯೆಯಲ್ಲಿ ಕೊರೊನಾ ಪಾಜಿಟಿವ್ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಲಾಗಿದ್ದು

ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ,ಅಥಣಿ ಡಿವೈಎಸ್ಪಿ ಎಸ್ ವಿ ಗಿರೀಶ, ಅಥಣಿ ತಹಶಿಲ್ದಾರ ದುಂಡಪ್ಪಾ ಕೋಮಾರ,ಕಾಗವಾಡ ತಹಶಿಲ್ದಾರ ಪ್ರಮಿಳಾ ದೇಶಪಾಂಡೆ ನೇತೃತ್ವದಲ್ಲಿ ಸಭೆ ನಡೆಯಿತು.

ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗೃತರಾಗಿ ಕೆಲಸ ನೀರ್ವಹಿಸಬೇಕು,ಮತ್ತು ಕಂಟೋನ್ಮೆಂಟ್ ಜೋನ್ ಗಳಲ್ಲಿ ‌ಜನರಿಗೆ ದಿನಬಳಕೆಯ ವಸ್ತುಗಳು ಸಿಗುವಂತೆ ಮಾಡಿ ಮತ್ತು ಸೀಲ್ ಡೌನ ಮಾಡಿ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನಿಡಿದರು

ಸಿಇಓ ರಾಜೇಂದ್ರ.

ರ‌್ಯಾಪಿಡ್ ಆಂಟಿಜೆನ್ ಟೆಸ್ಟ ಹೆಚ್ಚಿನ ಪ್ರಮಾಣದಲ್ಲಿ ನಡೆಸುವಂತೆ ಮತ್ತು ಸಮರ್ಪಕವಾಗಿ ಬಳಸಿ ಎಂದು ಕಿವಿಮಾತು ಹೇಳಿದರಲ್ಲದೆ

ಆರ್ಟಿಪಿಸಿಆರ್ ಇ ಟೆಸ್ಟ ನಡೆಸಲು ಕಳಿಸಬೇಕು ಮತ್ತು ನಲವತ್ತೈದು ವರ್ಷದೊಳಗಿನ ಶಿಕ್ಷಕರನ್ನು ಬಳಸಿಕೊಂಡು ಸರ್ವೆ ಮಾಡಿ,ಎರಡು ಗ್ರಾಮ ಪಂಚಾಯತಿಗೆ ಒಬ್ಬರು ಶಿಕ್ಷಕರನ್ನು ಬಳಸಿಕೊಳ್ಳಿ ಎಂದ ಸಿಇಓ… 400 ಜನ ಶಿಕ್ಷಕರ ಪಟ್ಟಿ ಮಾಡಿ ಎಂದ 55 ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೆಲಸಕ್ಕೆ ನೀರ್ವಹಿಸಿ ಸ್ವಾಬ್ ಕೊಟ್ಟವರು ಮನೆಯಲ್ಲೆ ಇರುವಂತೆ ಮಾಡಿ,ಸೊಂಕಿತರು ಹೊರಗೆ ಅಲೆಯದಂತೆ ನೊಡಿಕೊಳ್ಳಿ,ಹಬ್ಬ,ಹುಣ್ಣಿಮೆ, ಜಾತಿ ಧರ್ಮ ಮರೆತು ಕೊರೊನಾ ಬಗ್ಗೆ ಜಾಗೃತಿ ವಹಿಸಿ ಮಹಿಳೆ,ಪುರುಷ,ವಯಸ್ಸಾದ ಸಿಬ್ಬಂದಿ ಅನ್ನುವ ಬೆಧಭಾವ ಬೇಡ,ಎಲ್ಲರೂ ಸರಿಯಾಗಿ ಕೆಲಸ ಮಾಡಿ ಸರ್ಕಾರ ಸಂಬಳ ಕೊಡುತ್ತಿದೆ ಅಂದ ಮೇಲೆ ನಿರ್ಲಕ್ಷ್ಯ ತೋರದೆ ಪ್ರಾಮಿಣಿಕವಾಗಿ ಕೆಲಸ ಮಾಡಿ,

ಹೋಮ್ ಕ್ವಾರಂಟೈನ್ ಮಾಡಿದ ಏಳು ದಿನಗಳ ಬಳಿಕ ಸ್ವಾಬ್ ಟೆಸ್ಟ ಮಾಡಿ ಕೋವಿಡ್ ಕೇಂದ್ರದಲ್ಲಿ ಏನೂ ಸಮಸ್ಯೆ ಇಲ್ಲ.ಊಟ ಚೆನ್ನಾಗಿದೆ ಎಂದಿದ್ದಾರೆ, ಬೆಳಗಾವಿ ಭೀಮ್ಸನಲ್ಲಿ ಯಾವುದೆ ತೊಂದರೆ ಇಲ್ಲ.ನಾನು ಅಲ್ಲಿ ಹೋಗಿ ಬಂದಿದ್ದೇನೆ.ಸೊಂಕಿನ ಲಕ್ಷಣ ಇರುವ ಜನರನ್ನು ಗುರುತಿಸಿ ಚಿಕಿತ್ಸೆ ಕೊಡಿಸುವ ಕೆಲಸಕ್ಕೆ ಮುಂದಾಗಿ, ಸಾಮಾಜಿಕ ಕಳಕಳಿ ಇರುವವರನ್ನ ಕೆಲಸಕ್ಕೆ ಬಳಸಿಕೊಳ್ಳುವ ಕಾಲ ಬಂದಿದೆ ಎನ್ ಜಿ ಓ,ಸಾಮಾಜಿಕ ಕಾರ್ಯಕರ್ತರು,ಮಾಧ್ಯಮ ಪ್ರತಿನಿಧಿಗಳ ಮೂಲಕ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿ… ಎಂದರು

ವರದಿ ಡಾ.ಆರ್ ಎಸ್ ದೊಡ್ಡನಿಂಗಪ್ಪಗೋಳ ಅಥಣಿ

LEAVE A REPLY

Please enter your comment!
Please enter your name here