ಅಥಿತಿ ಉಪನ್ಯಾಸಕರ ನೇಮಕಕ್ಕೆ ಅರ್ಜಿ ಆಹ್ವಾನ

0

ಮೈಸೂರು ನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) ನಲ್ಲಿ 2020-21 ನೇ ಶೈಕ್ಷಣಿಕ ಸಾಲಿಗೆ ಚಿತ್ರಕಲೆ, ಅಚ್ಚುಕಲೆ, ಶಿಲ್ಪಕಲೆ ಹಾಗೂ ಛಾಯಾಚಿತ್ರ ಮತ್ತು ಪತ್ರಿಕೋದ್ಯಮ ವಿಭಾಗ ಕಲಾ ಇತಿಹಾಸ ವಿಭಾಗದಲ್ಲಿ ಥಿಯರಿ ಹಾಗೂ ಭಾಷಾ ವಿಷಯಗಳಾದ ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷಾ ವಿಷಯಕ್ಕೆ ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಅತಿಥಿ ಉಪನ್ಯಾಸಕರನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿಗಧಿಪಡಿಸಿದ ಸಂಚಿತ ವೇತನ ಆಧಾರದ ಮೇಲೆ ಒಂದು ವರ್ಷದ ಶೈಕ್ಷಣಿಕ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತರು ಸೆಪ್ಟೆಂಬರ್ 5 ರೊಳಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಆಡಳಿತ ಶಾಖೆಯ ದೂರವಾಣಿ ಸಂಖ್ಯೆ 0821-2438931 ಅನ್ನು ಸಂಪರ್ಕಿಸುವಂತೆ ಕಾವಾ ಡೀನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here