ಅಧಿಕಾರಿಗಳು ಪ್ರಭಾವಿಗಳ ಕೈಗೊಂಬೆಯಾಗದಿರಲಿ,ಜೀತದಾಳಾಗದಿರಲಿ

0

ಬಳ್ಳಾರಿ ಜಿಲ್ಲೆ ಕೂಡ್ಲಿಗಿ,ತಾಲೂಕಿನ ಅಧಿಕಾರಿಗಳು ಪ್ರಭಾವಿಗಳ ಕೈಗೊಂಬೆಗಳಾಗಬಾರದು,ಅವರು ಜೀತದಾಳಗಬಾರದು ಎಂದು ದಲಿತ ಹೋರಾಟಗಾರ ಬಿ.ಟಿ.ಗುದ್ದಿ ಚಂದ್ರು ನುಡಿದಿದ್ದಾರೆ.ಅವರು ಆ13ರಂದು ತಹಶಿಲ್ದಾರರವರ ಕಚೇರಿಯಲ್ಲಿ,ದಲಿತ ಹಕ್ಕುಗಳ ಸಮಿತಿ ಹಾಗೂ ದಲಿತ ಶೋಷಣಾ ಮುಕ್ತಿ ಮಂಚ್, ರಾಜ್ಯವ್ಯಾಪಿ ಕರೆ ನೀಡಿದ ಹಿನ್ಮಲೆಯಲ್ಲಿ.ತಾಲೂಕು ಸಮಿತಿಯ ಪದಾಧಿಕಾರಿಗಳೊಂದಿಗೆ,ಸಕಾ೯ರದ ದಲಿತ ವಿರೋಧಿ ನೀತಿ ಕಾನೂನು ಜಾರಿಯನ್ನು ಖಂಡಿಸಿ ಪ್ರತಿಭಟಿಸಿ ಮಾತನಾಡಿದರು.ದೇಶಕ್ಕೆ ಸ್ವಾತಂತ್ರ್ಯ ಬಂದು70ವಷ೯ಗಳಾಗಿರಬಹುದಾದರೂ,ದಲಿತರು ಶೋಷಣೆಯಿಂದ ಸ್ವಾತಂತ್ರ್ಯ ಹೊಂದಿಲ್ಲ.ಸ್ಥಳೀಯ ಆಡಳಿತ,ತಾಲೂಕು ಆಡಳಿತ,ಜಿಲ್ಲಾಡಳಿತ, ಸಕಾ೯ರ ಮಟ್ಟದಲ್ಲಿಯೂ ಪ್ರಭಾವಿಗಳದ್ದು,ಬಂಡವಾಳಶಾಹಿಗಳದ್ದೇ ಮೇಲುಗೈಯಾಗುತ್ತಿದೆ.ಕಾರಣ ಪರಿಸ್ಥಿತಿ ಬದಲಾಗದಿದ್ದಲ್ಲಿ,ಶೋಷಣೆಯ ವಿರುದ್ಧ ಹೋರಾಟಗಳು ಅನಿವಾಯ೯ವಾಗಲಿವೆ ಎಂದು ಅವರು ಎಚ್ಚರಿಸಿದರು. ದಲಿತರಿಗೆ ಸಕಾ೯ರ ಮೀಸಲಾತಿ ಹೆಚ್ಚಿಸಬೇಕು,ಉಧ್ಯೋಗ,ಶಿಕ್ಷಣ ,ಆರೋಗ್ಯ,ಆಹಾರ,ಭದ್ರತೆಯಲ್ಲಿ ಹೆಚ್ಚು ಸುಧಾರಣೆಯಾಗಬೇಕಿದೆ. ಸಕಾ೯ರ ದಲಿತರ ಮೇಲಾಗುತ್ತಿರುವ ದೌಜ೯ನ್ಯಗಳನ್ನು ನಿಯಂತ್ರಿಸಬೇಕಾಗಿದೆ, ಸೇರಿದಂತೆ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತಕ್ಕೆ,ರಾಜ್ಯ ಸಕಾ೯ರಕ್ಕೆ ಸಂಬಂಧಿಸಿದ ಹಲವು ಹಕ್ಕೋತ್ತಾಯಗಳನ್ನು ಮಾಡಲಾಯಿತು.ಹಕ್ಕೋತ್ತಾಯದ ಪತ್ರವನ್ನು ತಹಶಿಲ್ದಾರವರಿಗೆ, ಜಿಲ್ಲಾಧಿಕಾರಿಗಳಿಗೆ,ಮುಖ್ಯಮಂತ್ರಿಗಳಿಗೆ ನೀಡಲಾಯಿತು. ಪತ್ರವನ್ನು ಪ್ರತಿಭಟನಾಕಾರರು ತಹಶಿಲ್ದಾರರಾದ ಎಸ್.ಮಹಾಬಲೇಶ್ವರವರಿಗೆ ನೀಡಿದರು.ವಕೀಲರು ಹಾಗೂ ಕಾಮಿ೯ಕ ಮುಖಂಡರಾದ ವಿರುಪಾಕ್ಷಪ್ಪ,ಕಾಮಿ೯ಕ ಮುಖಂಡ ಗುನ್ನಳ್ಳಿ ರಾಘವೇಂದ್ರ ಮಾತನಾಡಿದರು.ದಲಿತ ಹಕ್ಕುಗಳ ಸಮಿತಿ ಪದಾಧಿಕಾರಿಗಳು,ಸದಸ್ಯರು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

*ವಿ.ಜಿ.ವೃಷಭೇಂದ್ರ ಕೂಡ್ಲಿಗಿ

 

LEAVE A REPLY

Please enter your comment!
Please enter your name here