ಅನಧಿಕೃತವಾಗಿ ನಡೆಸುತ್ತಿದ್ದ ಕ್ರಷರ್ ಗಳಿಗೆ ತಾಹಶೀಲ್ದಾರ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ದಾಳಿ.
ನಾಗಮಂಗಲ: ತಾಲೂಕಿನಲ್ಲಿ ಅನಧಿಕೃತವಾಗಿ ಭೂ ಪರಿವರ್ತನೆ ದಾಖಲೆಗಳಿಲ್ಲದೆ ನಡೆಸುತ್ತಿದ್ದ ಕ್ರಷರ್ ಗಳಿಗೆ ಬಿಡುವು ದಾಳಿ ಮಾಡಿದ ತಾಹಶೀಲ್ದಾರ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕ್ರಷರ್ ಗಳಿಗೆ ಬೀಗ ಜಡಿದಿದ್ದಾರೆ.
ಬೆಳಗ್ಗೆಯಿಂದಲೇ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಾದ ಉದಯರವಿ, ಪ್ರಸನ್ನ, ಹಾಗೂ ತಹಶೀಲ್ದಾರ್ ಕುಂಞಿ ಅಹಮದ್ ರವರ ನೇತೃತ್ವದಲ್ಲಿ ತಾಲೂಕಿನ ಬೇಗಮಂಗಲ, ವಡೇರ್ ಪುರ, ಕಬ್ಬಿನ ಕೆರೆಯ ನರೇಂದ್ರ ಮಾಲೀಕತ್ವದ ಕ್ರಷರ್, ಗಂಗ ಸಮುದ್ರದ ರವಿಕುಮಾರ್ ಮಾಲೀಕತ್ವದ ಕ್ರಷರ್, ಕೆಂಪನ ಕೊಪ್ಪಲು ಗ್ರಾಮದ ದೇವರಾಜ್ ರವರು ವೆಂಕಟೇಶ್ವರ ಸ್ಟೋನ್ ಕ್ರಷರ್, ವಡ್ಡರಹಳ್ಳಿ ಅಯ್ಯಪ್ಪ ಸ್ಟೋನ್ ಕ್ರಷರ್ ಗಳಿಗೆ ದಾಳಿ ಮಾಡಿ ಬೀಗ ಜಡಿಯಲಾಯಿತು.
ದಾಳಿಯ ಬಗ್ಗೆ ಮಾತನಾಡಿದ ತಾಹಶೀಲ್ದಾರ್ ಕುಂಞಿ ಅಹಮದ್, ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಾದ ಪ್ರಸನ್ನ, ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಭೂಪರಿವರ್ತನೆ ದಾಖಲೆಗಳಿಲ್ಲದೆ ಅನಧಿಕೃತವಾಗಿ ನಡೆಯುತ್ತಿದ್ದ ಕ್ರಷರ್ ಗಳನ್ನು ಸೀಸ್ ಮಾಡಿದ್ದು ಭೂ ಪರಿವರ್ತನ ದಾಖಲೆಗಳಿಲ್ಲದೆ ಕ್ರಷರ್ ನಡೆಸಿದ್ದು ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದ್ದು ಅದನ್ನು ಕ್ರಷರ್ ಮಾಲೀಕರಿಂದ ವಸೂಲಿ ಮಾಡುವುದಾಗಿ ಅಧಿಕಾರಿಗಳು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಾದ ರಂಗಯ್ಯ, ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ರಾಮಚಂದ್ರ, ಅರಣ್ಯ ಇಲಾಖೆಯ ಮಂಜು, ರವರು ಹಾಜರಿದ್ದರು.
ವರದಿ: ದೇ.ರಾ .ಜಗದೀಶ ನಾಗಮಂಗಲ