ಅನುಮತಿ ಸಿಕ್ಕಿದ್ದೇ ತಡ ಕಾಫಿನಾಡು ಚಿಕ್ಕಮಗಳೂರಲ್ಲಿ ಮೈಲಿಗಟ್ಟಲೆ ಟ್ರಾಫಿಕ್​ ಯಾಕೆ?

0

ಚಿಕ್ಕಮಗಳೂರು: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿಗೆ ಭೇಟಿಕೊಡಲು ಪ್ರವಾಸಿಗರಿಗೆ ಅವಕಾಶ ದೊರಕಿದ ಹಿನ್ನೆಲೆಯಲ್ಲಿ ಬೆಟ್ಟದತ್ತ ಜನಜಾತ್ರೆಯೇ ಹೊರಟಂಥ ದೃಶ್ಯಗಳು ಕಂಡುಬಂತು.

ಕೊರೊನಾ ಕಾಟದಿಂದ ಕಳೆದ ಐದಾರು ತಿಂಗಳಿಂದ ಮುಳ್ಳಯ್ಯನಗಿರಿ ಬೆಟ್ಟವನ್ನು ಪ್ರವಾಸಿಗರ ಪ್ರವೇಶಕ್ಕೆ ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಇದೀಗ, ನಿರ್ಬಂಧ ತೆರವಾಗುತ್ತಿದ್ದಂತೆ ಇಂದು ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಇತ್ತ ಮುಖಮಾಡಿದರು. ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ಆಗಮಿಸಿದ್ದು ಸುಮಾರು 780 ಕಾರು, 380 ಬೈಕ್ ಮತ್ತು 70 ಟಿಟಿ ವಾಹನಗಳಲ್ಲಿ ಪ್ರವಾಸಿಗರು ಭೇಟಿಕೊಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here