ಅನುಶ್ರೀ ಕಾಂಟೆಕ್ಟ್ ಲಿಸ್ಟ್ ಕಂಡು ಸಿಸಿಬಿ ದಂಗು: ಮಾತಿನ ಮಲ್ಲಿಗಿದ್ಯಾ ದೊಡ್ಡವರ ಲಿಂಕ್..!

0

ಮಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್​ ಪ್ರಕರಣದ ವಿಚಾರಣೆಗಾಗಿ ನಿರೂಪಕಿ ಅನುಶ್ರೀ ಅವ್ರಿಗೆ ನೋಟಿಸ್​ ಜಾರಿ ಮಾಡಿದ ವಿಚಾರ ಗೊತ್ತಾಗುತ್ತಿದ್ದಂತೆ, ಆಕೆ ರಾಜ್ಯದ ಮೂವರು ಪ್ರಭಾವಿ ರಾಜಕಾರಣಿಗಳಿಗೆ ಫೋನ್​ ಮಾಡಿದ್ರು. ಇದನ್ನ ಕಂಡು ಸಿಸಿಬಿ ಪೊಲೀಸರೇ ದಂಗಾಗಿದ್ದರು ಎಂದು ಹೇಳಲಾಗ್ತಿದೆ.

ಹೌದು, ಅನುಶ್ರೀಗೆ ಸಿಸಿಬಿ ನೋಟಿಸ್ ಬಂದ ದಿನ ಮತ್ತು ಮರುದಿನ ಮುಖ್ಯಮಂತ್ರಿ, ಮಾಜಿ ಸಿಎಂ ಪುತ್ರ, ಕರಾವಳಿ ಮೂಲದ ರಾಜ್ಯ ನಾಯಕರೊಬ್ಬರಿಗೆ ಕರೆ ಮಾಡಿ ತುಂಬಾ ಸಮಯ ಮಾತನಾಡಿದ್ದಾರಂತೆ. ಅನುಶ್ರೀ ಕರೆ ಮಾಡಿದ ಡಿಟೇಲ್ಸ್​ ನೋಡಿ ಸ್ವತಃ ಸಿಸಿಬಿ ಪೊಲೀಸರೇ ಶಾಕ್ ಆಗಿದ್ದಾರೆ ಎನ್ನಲಾಗ್ತಿದೆ.

ಅಂದ್ಹಾಗೆ, ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾದ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ(30) ಹಾಗೂ ಅಕೀಲ್ ನೌಶೀಲ್(28) ಜತೆ ನಂಟು ಇರುವ ಹಿನ್ನೆಲೆಯಲ್ಲಿ ನಿರೂಪಕಿ ಅನುಶ್ರೀಗೆ ಮಂಗಳೂರು ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೆ.24ರಂದು ನೋಟಿಸ್​ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅನುಶ್ರೀ ಸೆ.26ರಂದು ಸಿಸಿಬಿ ವಿಚಾರಣೆಗೆ ಹಾಜರ್​ ಆಗಿದ್ದರು.

ಇನ್ನು ಇಂದು ಬೆಳಿಗ್ಗೆಯಷ್ಟೇ ಸೋಷಿಯಲ್ ಮೀಡಿಯಾದ ಮೂಲಕ ಲೈವ್ಗೆ ಬಂದ ಅನುಶ್ರೀ ಡ್ರಗ್ಸ್ ಪ್ರಕರಣದಲ್ಲಿ ನಾನು ವಿಚಾರಣೆಗೆ ಹಾಜರಾಗಿದ್ದ ಮಾತ್ರಕ್ಕೆ ನನ್ನ ಬಗ್ಗೆ ಅಪಪ್ರಚಾರ ಮಾಡಲಾಗುತ್ತದೆ ಎಂದು ಕಣ್ಣೀರು ಹಾಕಿದ್ದರು.

LEAVE A REPLY

Please enter your comment!
Please enter your name here