ಅನೈತಿಕ ಚಟುವಟಿಕೆಗಳ ತಾಣವಾದ ರೋಣದ ಕಾಯಿಪಲ್ಲೆ ಮಾರುಕಟ್ಟೆ

0

ರೋಣ :ಅಗಸ್ಟ್-16 ಪಟ್ಟಣದಲ್ಲಿ ಸನ್ 2007-08ನೇ ಸಾಲಿನಲ್ಲಿ ರಾಜ್ಯ ಹಣಕಾಸು ಆಯೋಗದ ಅಡಿಯಲ್ಲಿ ನಿರ್ಮಿಸಿದ ಕಾಯಿಪಲ್ಲೆ ಸಂಕೀರ್ಣಗಳು ಸೂಕ್ತ ನಿರ್ವಹಣೆ ಇಲ್ಲದ ಕಾರಣ ಅನೈತಿಕ ಚಟುವಟಿಕೆಗಳ ತಾಣವಾಗಿದೆ
ಹಿಂದೆ ಸುಡಿಕ್ರಾಸಿನ ವೃತ್ತದಲ್ಲಿ ಪ್ರತಿ ಮಂಗಳವಾರ ಮತ್ತು ಗುರುವಾರ ನಡೆಯುತ್ತಿದ್ದ ಸಂತೆಯಿಂದ ಹಾಗೂ ತರಕಾರಿ ಹೊತ್ತು ತರುವ ವಾಹನಗಳು ಅಲ್ಲೇ ನಿಲ್ಲುವದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿದ್ದ ಕಾರಣ ಪಟ್ಟಣದ ಮಧ್ಯದಲ್ಲಿರುವ ಕೆರೆಯ ಪಕ್ಕದಲ್ಲಿ ಕಾಯಿಪಲ್ಲೆ ಸಂಕೀರ್ಣ ನಿರ್ಮಾಣ ಮಾಡಿ ಸ್ಥಳಾಂತರಿಸಲಾಯಿತು ಆದರೆ ಆ ಸಂಕೀರ್ಣದಲ್ಲಿ ವ್ಯಾಪಾರ ಮಾಡದ ಕಾರಣ ಅಲ್ಲಿ ಜೂಜುಕೋರರಿಗೆ ಮದ್ಯಪಾನ ಮಾಡುವವರ ತಾಣವಾಗಿದೆ ಸಂಕೀರ್ಣದ ಆವರಣದಲ್ಲಿ ಎಲ್ಲಿ ಬೇಕೆಂದರಲ್ಲಿ ಮಲಮೂತ್ರ ವಿಸರ್ಜನೆ ಮಾಡಲಾಗಿದೆ. ಇದೇ ಸ್ಥಳದಲ್ಲಿ ಕುಡುಕರು ಅನಾಯಾಸವಾಗಿ ಬಂದು ಮದ್ಯ ಸೇವಿಸಿದ ಬಾಟಲ್‌ಗ‌ಳನ್ನು ಒಡೆದು ಹಾಕಿದ್ದು ಕಂಡುಬರುತ್ತಿದೆ. ಈಗಾಗಲೇ ಕೊರೊನ ವೈರಸ್ ಭೀತಿಯಲ್ಲಿರುವ ಜನಸಾಮಾನ್ಯರಿಗೆ ಅಲ್ಲಿ ಬಿದ್ದಂತಹ ಕಸದ ರಾಶಿಗಳಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿದಿಗಳು ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ಸಾರ್ವಜನಿಕರಿಗೆ ಮತ್ತು ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುವ ಕಾರ್ಯಮಾಡಬೇಕಿದೆ

LEAVE A REPLY

Please enter your comment!
Please enter your name here