ಅನ್​​ಲಾಕ್​ ಇದೆ ಎಂದ ಮಾತ್ರಕ್ಕೆ ಅಸಡ್ಡೆ ಬೇಡ; ಆರೋಗ್ಯ ಸಚಿವರು ನೀಡಿದ್ದಾರೊಂದು ಎಚ್ಚರಿಕೆ

0

ದೇಶದಲ್ಲಿ ನಿನ್ನೆಯಿಂದ ಅನ್​ಲಾಕ್​-5 ಪ್ರಾರಂಭವಾಗಿದೆ. ಆದರೆ ಕರೊನಾ ಸೋಂಕಿತರ ಸಂಖ್ಯೆಯಲ್ಲೂ ಏರಿಕೆಯಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಹರ್ಷವರ್ಧನ್​ ಅವರು ಒಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಕೊವಿಡ್​-19 ನಿಯಂತ್ರಣಾ ಸಲಹೆಗಳನ್ನು, ಮಾರ್ಗದರ್ಶಿಯನ್ನು ಪಾಲನೆ ಮಾಡುವಲ್ಲಿ ನಿಷ್ಕಾಳಜಿ, ನಿರ್ಲಕ್ಷ್ಯ ವಹಿಸಿದರೆ ಕರೊನಾ ವೈರಸ್​ ಪ್ರಸರಣ ತಡೆಯುವುದು ಇನ್ನಷ್ಟು ಕಷ್ಟವಾಗಲಿದೆ ಎಂದಿದ್ದಾರೆ. ಹಾಗೇ, ಸೋಂಕು ತಡೆಯಲು ಮಾಸ್ಕ್​ ಅತ್ಯಗತ್ಯ ಮತ್ತು ಅತ್ಯುತ್ತಮ ಸಾಧನವಾಗಿದ್ದು, ತಪ್ಪದೆ ಧರಿಸಿ ಎಂದು ಸಲಹೆಯನ್ನೂ ನೀಡಿದ್ದಾರೆ.

ಹೊರಗಡೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ ನಿಯಮ ಪಾಲನೆ ಮಾಡುವುದು, ಕೈ ತೊಳೆಯುವುದು, ಸ್ಯಾನಿಟೈಸರ್​ ಬಳಕೆ ಮಾಡುವುದು ಸೇರಿ ಸ್ವಚ್ಛತೆ ಕಾಪಾಡಿಕೊಳ್ಳುವುದು ತೀರ ಅಗತ್ಯ. ಕೊವಿಡ್​-19 ಪ್ರಸರಣಾ ಸರಪಳಿಯನ್ನು ಕಡಿತಗೊಳಿಸಲು ನಿಯಮಗಳ ಪಾಲನೆ ಮಾಡುವುದು ತೀರ ಮುಖ್ಯ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

ಈಗ ದೇಶದಲ್ಲಿ ಅನ್​ಲಾಕ್​ ಹಂತಗಳು ನಡೆಯುತ್ತಿವೆ. ಆದರೆ ಕೆಲವು ಜನರು ಕೊವಿಡ್​-19 ನಿಯಂತ್ರಣ ನಿಯಮಪಾಲನೆ ಬಗ್ಗೆ ತೀರ ಅಸಡ್ಡೆ ತೋರುತ್ತಿದ್ದಾರೆ ಇದು ಒಳ್ಳೆಯದಲ್ಲ. ಹೀಗಾದರೆ ಕರೊನಾ ಸೋಂಕು ತಡೆಗಟ್ಟಲು ಸಾಧ್ಯವೇ ಇಲ್ಲ ಎಂದು ಎಚ್ಚರಿಸಿದ್ದಾರೆ. (ಏಜೆನ್ಸೀಸ್​)

LEAVE A REPLY

Please enter your comment!
Please enter your name here