ಅಪರಿಚಿತ ವಾಹನ ಡಿಕ್ಕಿ: ಪಾದಚಾರಿ ಸಾವು

0

ಅಪರಿಚಿತ ವಾಹನ ಡಿಕ್ಕಿ: ಪಾದಚಾರಿ ಸಾವು

ನಾಗಮಂಗಲ: ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದಾನೆ.

ತಾಲೂಕಿನ ಬೆಳ್ಳೂರು ಹೋಬಳಿಯ ಹೊಸಕ್ಕಿ ಪಾಳ್ಯ ಗೇಟ್ ಬೆಳ್ಳೂರು ಕ್ರಾಸ್ ಹತ್ತಿರ ರಾತ್ರಿವೇಳೆಯಲ್ಲಿ ಅಪರಿಚಿತ ವಾಹನ ವ್ಯಕ್ತಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು. ವ್ಯಕ್ತಿಗೆ ತಲೆಗೆ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹೈವೇ ಗಸ್ತಿನಲ್ಲಿದ್ದ ಟೋಲ್ ಸಿಬ್ಬಂದಿ ಒಬ್ಬರು ಅಪರಿಚಿತ ವ್ಯಕ್ತಿ ಸತ್ತು ಬಿದ್ದಿರುವುದನ್ನು ಕಂಡು ಬೆಳ್ಳೂರು ಠಾಣಾ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಸ್ಥಳಕ್ಕೆ ಬೆಳ್ಳೂರು ಪೊಲೀಸ್ ಠಾಣಾ ಪಿಎಸ್ಐ ದಯಾನಂದ್ ಭೇಟಿ ನೀಡಿದ್ದು, ಮೃತ ವ್ಯಕ್ತಿಯನ್ನು ಆದಿಚುಂಚನಗಿರಿ ಬಿಜಿಎಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು. ಮೃತ ವ್ಯಕ್ತಿ ಯಾರೆಂದು ಗುರುತು ಪತ್ತೆಯಾಗದ ಇರುವುದರಿಂದ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು ಮೃತ ವ್ಯಕ್ತಿಯು ಮೇಲ್ನೋಟಕ್ಕೆ ಭಿಕ್ಷುಕನಂತೆ ಕಾಣುತ್ತಿದ್ದು ಮೃತ ವ್ಯಕ್ತಿ ಯಾರೆಂದು ಹಾಗೂ ಅಪಘಾತ ಮಾಡಿದ ವಾಹನ ಯಾವುದೆಂದು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದರು.

LEAVE A REPLY

Please enter your comment!
Please enter your name here