ಅಭ್ಯಾಸದ ವೇಳೆ ಬಸ್ಸಿಗೆ ಅಪ್ಪಳಿಸಿದ ರೋಹಿತ್‌ ಸಿಕ್ಸರ್‌!

0

ಅಬುಧಾಬಿ: ಈ ಬಾರಿಯ ಐಪಿಎಲ್‌ ಪಂದ್ಯಾವಳಿಗೆ ಕೊರೊನಾ ಆತಂಕ, ಬಿಗಿ ಸುರಕ್ಷಾ ನಿಯಮಗಳಿದ್ದರೂ ನಿಧಾನಕ್ಕೆ ಕೂಟ ಕಳೆಗಟ್ಟುತ್ತಿದೆ. ಇದಕ್ಕೊಂದು ನಿದರ್ಶನ, ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮ ಸಿಡಿಸಿದ ಸಿಕ್ಸರ್‌!

ಬುಧವಾರ ಅಭ್ಯಾಸ ಮಾಡುತ್ತಿದ್ದ ಅವರು ಮುನ್ನುಗ್ಗಿ ಬಾರಿಸಿದ ಚೆಂಡು 95 ಮೀಟರ್‌ ದೂರ ಸಾಗಿ, ಮೈದಾನದಿಂದ ಹೊರಹೋಗಿದೆ. ಆಗ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್ಸಿಗೆ ಬಡಿದು ತುಸು ಹಾನಿ ಮಾಡಿದೆ. ಯುಎಇ ಮೈದಾನಗಳು ತುಸು ಚಿಕ್ಕವು. ಹಾಗೆಯೇ ವಿಶ್ವದ ಪ್ರಮುಖ ಕ್ರಿಕೆಟ್‌ ರಾಷ್ಟ್ರಗಳಲ್ಲಿರುವಂತೆ ಹೊರಾವರಣ ಇಲ್ಲದಿರುವುದರಿಂದ ಸುಲಭವಾಗಿ ಚೆಂಡು ಸ್ಟೇಡಿಯಂ ದಾಟಿದೆ.

LEAVE A REPLY

Please enter your comment!
Please enter your name here