ದೆಹಲಿ ಪೊಲೀಸರು ಬಂಧಿಸಿರುವ ಉತ್ತರಪ್ರದೇಶದ ಐಸಿಸ್ ಉಗ್ರ ಹಲವು ಸ್ಫೋಟಕ ಸತ್ಯಗಳನ್ನು ಬಯಲು ಮಾಡಿದ್ದಾನೆ. ದೆಹಲಿ ಮಾತ್ರವಲ್ಲದೇ, ಅಯೋಧ್ಯೆ ಕೂಡ ಈತನ ಹಿಟ್ ಲಿಸ್ಟ್ನಲ್ಲಿತ್ತು.
ಬಂಧಿತ ಉಗ್ರ ಮಹಮ್ಮದ್ ಮುಷ್ತಕೀಮ್ ದೆಹಲಿಯ ಹಲವು ಜನನಿಬಿಡ ಪ್ರದೇಶಗಳಲ್ಲಿ ಏಕಾಂಗಿ ಬಾಂಬ್ ಸ್ಫೋಟಿಸುವ ಸಂಚು ರೂಪಿಸಿದ್ದ. ಅದಕ್ಕಾಗಿ ಸ್ಫೋಟಕಗಳನ್ನು ಸಿದ್ಧಪಡಿಸಿದ್ದ. ಮಾತ್ರವಲ್ಲದೇ, ಉತ್ತರಪ್ರದೇಶದ ಬಲರಾಮ್ಪುರದ ಮನೆಯಲ್ಲಿ ಏರ್ಗನ್ನಿಂದ ನಿತ್ಯ ಪ್ರ್ಯಾಕ್ಟಿಸ್ ಮಾಡುತ್ತಿದ್ದ.
; ದಾವೂದ್ ತನ್ನ ನೆಲದಲ್ಲಿಯೇ ಇದ್ದಾನೆಂದು ಒಪ್ಪಿಕೊಂಡ ಪಾಕ್; ಆರ್ಥಿಕ ದಿಗ್ಬಂಧನದಿಂದ ಪಾರಾಗಲು ತಂತ್ರ.?
ಇತ್ತೀಚೆಗಷ್ಟೇ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾದ ಅಯೋಧ್ಯೆಯಲ್ಲಿಯೂ ಭಾರಿ ವಿದ್ವಂಸಕ ಕೃತ್ಯ ನಡೆಸುವುದ ಕೂಡ ಈತನ ಉದ್ದೇಶವಾಗಿತ್ತು ಎಂಬುದು ಕೂಡ ಬಯಲಾಗಿದೆ.
ದೆಹಲಿಯ ಕರೊಲ್ ಬಾಗ್ ಪ್ರದೇಶದಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದರು. ಸ್ಫೋಟಕವಾಗಿ ಬಳಸಲು ಇಟ್ಟಿದ್ದ ಎರಡು ಪ್ರೆಷರ್ ಕುಕರ್, 15 ಕೆಜಿಗಳಷ್ಟು ಸ್ಫೋಟಕ, ಪಿಸ್ತೂಲ್, ನಾಲ್ಕು ಗುಂಡುಗಳನ್ನು ಈತನಿಂದ ವಶಪಡಿಸಿಕೊಳ್ಳಲಾಗಿತ್ತು.
; ಆತ್ಮಹತ್ಯಾ ದಾಳಿಗೆ ಸ್ಫೋಟಕಗಳಿದ್ದ ಬೆಲ್ಟ್, ಜಾಕೆಟ್ ಸಿದ್ಧಪಡಿಸಿದ್ದ ಐಸಿಸ್ ಉಗ್ರ
ಆತ್ಮಹತ್ಯಾ ದಾಳಿಗೆ ಬಳಸಲಾಗುವ ಸ್ಫೋಟಕವಿರಿಸುವ ಏಳು ಪಾಕೆಟ್ಗಳಿರುವ ಎರಡು ಜಾಕೆಟ್ಗಳು, ಮೂರು ಕೆಜಿ ಸ್ಫೋಟಕ ತುಂಬಿದ್ದ ನಡುಪಟ್ಟಿಗಳು ಪತ್ತೆಯಾಗಿದ್ದವು. ತಜ್ಞರು ಇದರಲ್ಲಿದ್ದ ಬಾಂಬ್ಗಳನ್ನು ಸುರಕ್ಷಿತವಾಗಿ ಹೊರ ತೆಗೆದು ನಿಷ್ಕ್ರಿಯಗೊಳಿಸಲಾಗಿದೆ. ಒಟ್ಟಾರೆ 9 ಕೆಜಿ ಸ್ಫೋಟಕವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.