ಈ ವಿಶಿಷ್ಟ ಕಲ್ಲಿರುವುದು ಕರ್ನಾಟಕದಲ್ಲಿ
ಈ ವಿಶಿಷ್ಟ ಕಲ್ಲಿರುವುದು ಸಕಲೇಶಪುರ ತಾಲ್ಲೂಕಿನ ಬಿಸಿಲೆ ಘಾಟಿಯ ಸಮೀಪ
ಇದೇ ರೀತಿಯ ಮಾಹಿತಿಯನ್ನು ಚಿಕ್ಕಮಗಳೂರು ಜಿಲ್ಲೆಗೆ ನೂರು ವರ್ಷಗಳು ತುಂಬಿದ ನೆನಪಿಗೆ ಜಿಲ್ಲಾಡಳಿತ ಸ್ಮರಣ ಸಂಚಿಕೆಯೊಂದನ್ನು ಬಿಡುಗಡೆ ಮಾಡಿದ್ದಾಗ ಆ ಪುಸ್ತಕಕ್ಕೆ ತೇಜಸ್ವಿಯವರು ಬರೆದಿದ್ದ ಲೇಖನದಲ್ಲಿ ” ಮೂಡಿಗೆರೆ ಬಸ್ ನಿಲ್ದಾಣದ ಎಡ ಭಾಗಕ್ಕೆ ಬೀಳುವ ಮಳೆ ಅರಬ್ಬೀ ಸಮುದ್ರಕ್ಕೂ, ಬಲಭಾಗಕ್ಕೆ ಬೀಳುವ ಮಳೆ ಹೇಮಾವತಿಯ ಮೂಲಕ ಬಂಗಾಳಕೊಲ್ಲಿಗೂ ಸೇರುತ್ತದೆ” ಎಂದು ಉಲ್ಲೇಖಿಸಿದ್ದಾರೆ.
ಈ ವಿಶಿಷ್ಟ ಕಲ್ಲಿರುವುದು ಸಕಲೇಶಪುರ ತಾಲ್ಲೂಕಿನ ಬಿಸಿಲೆ ಘಾಟಿಯ ಸಮೀಪ. ಬ್ರಿಟಿಷರಿಂದ ಸ್ಥಾಪಿತವಾದ ಈ ಕಲ್ಲಿನ ವೈಶಿಷ್ಟ್ಯತೆ ಎಂದರೆ ಕಲ್ಲಿನ ಎಡಭಾಗಕ್ಕೆ ಬೀಳುವ ಮಳೆಯ ನೀರು ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರವನ್ನೂ ಹಾಗೂ ಬಲಭಾಗಕ್ಕೆ ಬೀಳುವ ಮಳೆ ಪೂರ್ವಾಭಿಮುಖವಾಗಿ ಹರಿದು ಬಂಗಾಳಕೊಲ್ಲಿಯನ್ನೂ ಸೇರುವುದು. ಈಸ್ಟ್ ಇಂಡಿಯಾ ಕಂಪೆನಿಯ ಸರ್ವೇ ಅಧಿಕಾರಿಗಳು ಪಶ್ಚಿಮಘಟ್ಟವನ್ನು ಸಮೀಕ್ಷೆ ಮಾಡುವಾಗ ಈ ಸ್ಥಳವನ್ನು ಗುರುತಿಸಿ ಕಲ್ಲನ್ನು ನೆಟ್ಟ ಕುರಿತು ದಾಖಲೆಯಿದೆ.