ಅವಳಿ ಮಕ್ಕಳನ್ನು ಸ್ವಾಗತಿಸಿದ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ

0

ಸಿಂಗ್ ಸಾವಿನ ಬಳಿಕ ಮತ್ತೆ ಸುದ್ದಿಗೆ ಬಂದಿದ್ದ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಅಂಕಿತಾ ಕುಟುಂಬಕ್ಕೆ ಹೊಸ ಸದಸ್ಯರು ಆಗಮಿಸಿದ್ದಾರೆ. ಹೌದು, ಅಂಕಿತಾ ಅವಳಿ ಮಕ್ಕಳನ್ನು ಸ್ವಾಗತಿಸಿ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸುಶಾಂತ್ ಜೊತೆ ನಾಲ್ಕು ವರ್ಷಗಳ ಹಿಂದೆ ಬ್ರೇಕ್ ಅಪ್ ಮಾಡಿಕೊಂಡಿದ್ದ ಅಂಕಿತಾ ನಂತರ ವಿಕ್ಕಿ ಜೈನ್ ಜೊತೆ ಲೀವ್ ಇನ್ ರಿಲೇಶನ್ ಶಿಪ್ ನಲ್ಲಿದ್ದರು. ಇದೀಗ ಅವಳಿ ಮಕ್ಕಳನ್ನು ಸ್ವಾಗತಿಸಿದ್ದಾರೆ. ಆದರೆ ಯಾರ ಮಕ್ಕಳು ಎನ್ನುವುದನ್ನು ಬಹಿರಂಗ ಪಡಿಸಿಲ್ಲ.

 

‘ಪವಿತ್ರಾ ರಿಷ್ತಾ’ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸುತ್ತಿದ್ದ ಸುಶಾಂತ್ ಸಿಂಗ್ ಮತ್ತು ಅಂಕಿತಾ ಲೋಖಂಡೆ ಆರು ವರ್ಷ ಪ್ರೀತಿಯಲ್ಲಿದ್ದರು. 2016ರಲ್ಲಿ ಲವ್ ಬ್ರೇಕ್ ಅಪ್ ಆಗಿತ್ತು. ಬಳಿಕ, ವಿಕ್ಕ ಜೈನ್ ಎನ್ನುವರ ಜೊತೆ ಅಂಕಿತಾ ರಿಲೇಶನ್ ಶಿಪ್ ನಲ್ಲಿದ್ದರು.

ಮತ್ತೊಂದೆಡೆ ಸುಶಾಂತ್ ಸಿಂಗ್ ಬಾಲಿವುಡ್‌ನಲ್ಲಿ ಬ್ಯುಸಿ ಆದ್ಮೇಲೆ ಕಿರುತೆರೆ ನಟಿ ರಿಯಾ ಚಕ್ರವರ್ತಿ ಜೊತೆ ಪ್ರೇಮದಲ್ಲಿ ಬಿದ್ದರು. ರಿಯಾ ಜೊತೆ ವಿವಾಹಕ್ಕೂ ಚಿಂತನೆ ನಡೆಸಿದ್ದ ಸುಶಾಂತ್ ಆತ್ಮಹತ್ಯೆಗೆ ಶರಣಾಗಿದ್ದರು.

ಇನ್ನು ಸುಶಾಂತ್ ಸಿಂಗ್ ಪ್ರಕರಣದಲ್ಲಿ ಅಂಕಿತಾ ಜೊತೆ ಬ್ರೇಕ್ ಅಪ್ ಆಗಿದ್ದು ಏಕೆ ಎಂದು ಶಿವ ಸೇನಾ ನಾಯಕ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ. ‘ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿರುವ ಕಾರಣ ಅಂಕಿತಾ ಮತ್ತು ಸುಶಾಂತ್ ನಡುವೆ ಬ್ರೇಕ್ ಅಪ್ ಏಕೆ ಆಯಿತು ಎಂದು ತನಿಖೆ ಆಗಬೇಕು’ ಎಂದು ಮಹಾರಾಷ್ಟ್ರ ಶಿವಸೇನಾ ಎಂಪಿ ಸಂಜಯ್ ರಾವತ್ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here