ಅಸಹಾಯಕ ಕುಟುಂಬಕ್ಕೆ ಶೌಚಾಲಯ ಹಾಗೂ ಮನೆ ದುರಸ್ತಿ ಕಾರ್ಯಕ್ಕೆ 25,000/- ರೂಪಾಯಿ ಧನಸಹಾಯ

0

ಪಾಲಡ್ಕ ಗ್ರಾಮದ ನೆಲ್ಲಕ್ಕೆ ಕಿನ್ನಿಪದವಿನಲ್ಲಿ ವಿಧವೆ ಶಾಂತ ನಾಯ್ಕ್ ಇವರು ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ( 9ನೇ,10 ನೇ ತರಗತಿ ) ಮನೆಯಲ್ಲಿ ಶೌಚಾಲಯ ಹಾಗೂ ಇತರ ಮೂಲಭೂತ ಸೌಕರ್ಯಗಳಿಲ್ಲದೆ ಅಸಹಾಯಕ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದು ಈ ಅಸಹಾಯಕ ಕುಟುಂಬದ ಪರಿಸ್ಥಿತಿಯನ್ನು ನೋಡಿ ಶೌಚಾಲಯ ಹಾಗೂ ಮನೆ ದುರಸ್ತಿ ಕಾರ್ಯಕ್ಕೆ 25,000/- ರೂಪಾಯಿ ಧನಸಹಾಯ ಹಾಗೂ 2 ಬೆಡ್ ನೀಡುವ ಮೂಲಕ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮಂಗಳುರು ಇವರು ಈ ಕುಟುಂಬಕ್ಕೆ ನೆರವಾಗಿದ್ದಾರೆ ಹಾಗೂ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದ ನಮಗೂ ಸ್ಮರಣಿಕೆಯನ್ನು ನೀಡಿ ಗೌರವಿಸಿರುತ್ತಾರೆ

ನಮ್ಮ ಮನವಿಗೆ ಸ್ಪಂದಿಸಿ ಈ ಪುಣ್ಯ ಕಾರ್ಯದಲ್ಲಿ ನಮ್ಮೊಂದಿಗೆ ಕೈ ಜೋಡಿಸಿದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟಿನ ಅರ್ಜುನ್ ಭಂಡಾರ್ಕರ್ ಸರ್ ಹಾಗೂ ಅವರ ಸಂಸ್ಥೆಯ ಎಲ್ಲಾ ದಾನಿಗಳಿಗೂ ನಮ್ಮ ಸ್ಪೂರ್ತಿ ವಿಶೇಷ ಶಾಲಾ ಆಡಳಿತ ಮಂಡಳಿ ಹಾಗೂ ಶಾಲಾ ಹಿತೈಷಿಗಳ ವತಿಯಿಂದ ಹ್ರತ್ಪೂರ್ವಕ ಧನ್ಯವಾದಗಳು
ಪ್ರಕಾಶ್ ಜೆ ಶೆಟ್ಟಿಗಾರ್
ಸ್ಪೂರ್ತಿ ವಿಶೇಷ ಶಾಲೆ
ಮೂಡುಬಿದಿರೆ

LEAVE A REPLY

Please enter your comment!
Please enter your name here