ಆಕ್ಸಿಸ್ ಬ್ಯಾಂಕ್ ಲಿಬರ್ಟಿ ಸೇವಿಂಗ್ಸ್ ಅಕೌಂಟ್ ಗೆ ಎಷ್ಟೆಲ್ಲ ಆಫರ್…!?

0

ಆಕ್ಸಿಸ್ ಬ್ಯಾಂಕ್ ನಿಂದ ಯುವ ಜನರಿಗಾಗಿ ಹೊಸ ಉಳಿತಾಯ ಖಾತೆಯನ್ನು ಆರಂಭಿಸಲಾಗಿದೆ. ಇದಕ್ಕೆ ಆಕ್ಸಿಸ್ ಲಿಬರ್ಟಿ ಸೇವಿಂಗ್ಸ್ ಅಕೌಂಟ್ ಎಂದು ಹೆಸರಿಡಲಾಗಿದೆ. ಈ ಖಾತೆಯಲ್ಲಿ ತಿಂಗಳಿಗೆ ಕನಿಷ್ಠ ಬ್ಯಾಲೆನ್ಸ್ 25 ಸಾವಿರ ರುಪಾಯಿ ನಿರ್ವಹಿಸಬೇಕು ಅಥವಾ ಪ್ರತಿ ತಿಂಗಳು ಡೆಬಿಟ್ ಕಾರ್ಡ್ ನಿಂದ ತಿಂಗಳಿಗೆ 25 ಸಾವಿರ ರುಪಾಯಿ ಖರ್ಚು ಮಾಡಬೇಕು.

ರೊನಾ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾದಲ್ಲಿ ಆಗುವ ಖರ್ಚು ಇದರಲ್ಲಿ ಒಳಗೊಳ್ಳುತ್ತದೆ. ಹಾಗಿದ್ದಲ್ಲಿ ಈ ಆಫರ್ ನಿಮಗೆ ಸಿಗುತ್ತದೆಯೇ ಎಂಬುದನ್ನು ತಿಳಿಯಲು ಮುಂದೆ ಓದಿಕೊಳ್ಳಿ. 35 ವರ್ಷದೊಳಗಿನ ವೇತನದಾರರಿಗಾಗಿ, ಡಿಜಿಟಲ್ ವ್ಯವಹಾರದಲ್ಲಿ ಆಸಕ್ತಿ ಇರುವವರು, ಯಾವುದೇ ಖರೀದಿ ಮಾಡುವ ಮುನ್ನ ಆಫರ್ ಗಳು ಮತ್ತು ಆಯ್ಕೆಗಳನ್ನು ಗಮನಿಸುವವರಿಗೆ ರೂಪಿಸಿರುವ ಖಾತೆ ಇದು.

ವಾರಾಂತ್ಯ ರಜಾ ದಿನಗಳಲ್ಲಿ ಮಾಡಿದ ಖರ್ಚುಗಳಿಗೆ ಕ್ಯಾಶ್ ಬ್ಯಾಕ್ ಇದೆ. ಆಹಾರ, ಮನರಂಜನೆ, ಶಾಪಿಂಗ್, ಪ್ರವಾಸ ಈ ವಿಭಾಗಗಳಲ್ಲಿ ಮಾಡುವ ಖರ್ಚುಗಳಿಗೆ ಆಫರ್ ಇದ್ದು, ಇದರ ಜತೆಗೆ ತ್ರೈಮಾಸಿಕವಾಗಿ ಖರ್ಚಿನ ಮೇಲೆ ಗಿಫ್ಟ್ ವೋಚರ್ ಕೂಡ ದೊರೆಯಲಿದೆ. ಆಕ್ಸಿಸ್ ಬ್ಯಾಂಕ್ ನಲ್ಲಿನ ಉಳಿದ ಉಳಿತಾಯ ಖಾತೆಗಳಿಗೆ ಯಾವ ಬಡ್ಡಿ ದರ ದೊರೆಯುತ್ತದೋ ಲಿಬರ್ಟಿ ಸೇವಿಂಗ್ ಅಕೌಂಟ್ ಗ್ರಾಹಕರೂ ಅದನ್ನೇ ನಿರೀಕ್ಷೆ ಮಾಡಬಹುದು.

ಒಂದೋ ಬ್ಯಾಂಕ್ ಖಾತೆಯಲ್ಲಿ ಇಪ್ಪತ್ತೈದು ಸಾವಿರ ರುಪಾಯಿ ಮಿನಿಮಲ್ ಬ್ಯಾಲೆನ್ಸ್ ಇಟ್ಟಿರಬೇಕು ಅಥವಾ ತಿಂಗಳಿಗೆ ಇಷ್ಟು ಮೊತ್ತ ಖರ್ಚು ಮಾಡಬೇಕು. ಯಾವುದು ಸೂಕ್ತ ಎಂದು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿಕೊಳ್ಳುವುದು ಗ್ರಾಹಕರ ಕೈಯಲ್ಲೇ ಇದೆ. ಈ ಖಾತೆ ಜತೆಗೆ ಇನ್ಷೂರೆನ್ಸ್ ಕೂಡ ದೊರೆಯುತ್ತದೆ. ಒಂದು ದಿನಕ್ಕೆ ಆಸ್ಪತ್ರೆಗೆ ದಾಖಲಾದಲ್ಲಿ ಒಂದು ವರ್ಷದಲ್ಲಿ ಒಮ್ಮೆ ನಗದು ಇಪ್ಪತ್ತು ಸಾವಿರದಷ್ಟು ಕಾಂಪ್ಲಿಮೆಂಟರಿ ಸಿಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಹೆಚ್ಚುವರಿ ಕವರ್ ಒದಗಿಸಬೇಕು ಎಂಬುದು ಈ ಇನ್ಷೂರೆನ್ಸ್ ಉದ್ದೇಶ ಎಂದು ಬ್ಯಾಂಕ್ ಹೇಳಿಕೊಂಡಿದೆ.

ಆದರೆ, ಇದು ಎಲ್ಲರಿಗೂ ಪ್ರಯೋಜನ ಆಗುತ್ತದಾ ಎಂಬುದು ಸದ್ಯಕ್ಕೆ ಪ್ರಶ್ನೆ. ಏಕೆಂದರೆ ಈಗಾಗಲೇ ಇನ್ಷೂರೆನ್ಸ್ ಇರುವವರು, ಇದಕ್ಕಿಂತ ಹೆಚ್ಚಿನ ಮೊತ್ತದ ನಿರೀಕ್ಷೆ ಮಾಡುವವರು ಈ ಖಾತೆಯ ಮೂಲಕ ದೊರೆಯುವ ಅನುಕೂಲವನ್ನು ಗಂಭೀರವಾಗಿ ಪರಿಗಣಿಸದೇ ಇರಬಹುದು. ಈ ಖಾತೆಗೆ ಸಂಬಂಧಿಸಿದಂತೆ ಕಡ್ಡಾಯವಾಗಿ ನೆನಪಿಟ್ಟುಕೊಳ್ಳಬೇಕಾದದ್ದು ಏನೆಂದರೆ, ಖಾತೆಯಲ್ಲಿ ಪ್ರತಿ ತಿಂಗಳು ಕನಿಷ್ಠ 25 ಸಾವಿರ ರುಪಾಯಿ ನಿರ್ವಗಣೆ ಮಾಡಬೇಕು ಅಥವಾ ಅಷ್ಟೇ ಮೊತ್ತವನ್ನು ಪ್ರತಿ ತಿಂಗಳು ಖರ್ಚು ಮಾಡಬೇಕು.

LEAVE A REPLY

Please enter your comment!
Please enter your name here