ಆತ್ಮಹತ್ಯೆಗಾಗಿ ನೀರಿಗೆ ಜಿಗಿದವನ ಸ್ಥಿತಿ ಹೀಗಾಯ್ತು.!

0

ಆಯಸ್ಸು ಗಟ್ಟಿಯಿದ್ರೆ ಸಾವಿನ ಹಿಂದೆ ಬಿದ್ರೂ ಸಾವು ಅಪ್ಪಿಕೊಳ್ಳುವುದಿಲ್ಲ. ಇದಕ್ಕೆ ಅಹಮದಾಬಾದ್ ವ್ಯಕ್ತಿ ಉತ್ತಮ ನಿದರ್ಶನ. ಆಯಸ್ಸು ಗಟ್ಟಿಯಿರುವ ವ್ಯಕ್ತಿ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಆದ್ರೆ ಸಾಯದೆ ಮೂರು ದಿನ ಪರದಾಡಿದ್ದಾನೆ.

ವ್ಯಕ್ತಿ ಮೂರು ದಿನಗಳ ಹಿಂದೆ ಸಬರಮತಿ ನದಿಗೆ ಹಾರಿದ್ದಾನೆ. ನದಿ ಪಕ್ಕದ ಪೊದೆಯೊಂದರಲ್ಲಿ ಸಿಕ್ಕಿ ಬಿದ್ದಿದ್ದಾನೆ. ಮೂರು ದಿನಗಳಿಂದ ಅನ್ನಾಹಾರವಿಲ್ಲದೆ ಪರದಾಡಿದ್ದಾನೆ. ಆ ಜಾಗಕ್ಕೆ ಅನೇಕ ಮೀನುಗಾರರು ಬಂದು ಹೋಗಿದ್ದಾರೆ. ಆದ್ರೆ ಎಲ್ಲರೂ ಆತ ಮೀನು ಹಿಡಿಯುತ್ತಿದ್ದಾನೆಂದು ಭಾವಿಸಿದ್ದಾರೆ.

ಅದೃಷ್ಟವಶಾತ್ ಒಬ್ಬ ಮೀನುಗಾರ ಸೂಕ್ಷ್ಮವಾಗಿ ಗಮನಿಸಿದ್ದಾನೆ. ಆಗ ವ್ಯಕ್ತಿ ಅಪಾಯದಲ್ಲಿರುವುದು ಗೊತ್ತಾಗಿದೆ. ಅಗ್ನಿಶಾಮಕ ದಳಕ್ಕೆ ಫೋನ್ ಮಾಡಿ ವ್ಯಕ್ತಿಯನ್ನು ರಕ್ಷಿಸಿದ್ದಾನೆ. ವ್ಯಕ್ತಿ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದಾನಂತೆ. ಈ ಹಿಂದೆಯೂ ಅನೇಕ ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದನಂತೆ,

LEAVE A REPLY

Please enter your comment!
Please enter your name here