ಇಲ್ಲಿನ ಕಾಲೇಜು ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಳಿಗೆಯಲ್ಲಿ ‘ಆರ್ಟಿಸ್ಟ್ರಿ ಬ್ರಾಂಡೆಡ್ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ’ಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಗ್ರಾಹಕರಾದ ಪಿಎಸ್‌ಐ ರಾಜೇಶ್ವರಿ ಕದಂ, ಮಾಧುರಿ ಜಾಧವ್ ಹಾಗೂ ಭಾಗ್ಯಶ್ರೀ ಅನಗೋಳಕರ ಉದ್ಘಾಟನೆ ನೆರವೇರಿಸಿದರು. ಮಳಿಗೆಯ ಸಹಾಯಕ ನಿರ್ದೇಶಕ ಸವಾದ್ ಮತ್ತು ಮ್ಯಾನೇಜ್‌ಮೆಂಟ್ ಸದಸ್ಯರು ಉಪಸ್ಥಿತರಿದ್ದರು.
‘ಸೂಕ್ಷ್ಮ ಕುಸುರಿಯಿಂದ ರೂಪಿಸಿದ ಆಭರಣಗಳು ಕುಶಲಕರ್ಮಿಗಳ ಕೌಶಲ ಪ್ರತಿಬಿಂಬಿಸುತ್ತವೆ. ಪ್ರತಿ ಆಭರಣದಲ್ಲೂ ಕಲೆ ಇದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಆಯ್ದ ಸಂಗ್ರಹಗಳನ್ನು ಪ್ರದರ್ಶಿಸಲಾಗಿದೆ. ವಿಶೇಷ ಕೊಡುಗೆಯಾಗಿ ಪ್ರತಿ ಗ್ರಾಂ. ಚಿನ್ನಕ್ಕೆ ಮೇಕಿಂಗ್ ಶುಲ್ಕದಲ್ಲಿ ₹ 150 ಮತ್ತು ವಜ್ರದ ಮೇಲೆ ಶೇ 20ರವರೆಗೆ ಕಡಿತ ನೀಡಲಾಗುವುದು. ಸೆ. 27ರವರೆಗೆ ಪ್ರದರ್ಶನ ಇರುತ್ತದೆ. ವರ್ಷದ ಉಚಿತ ವಿಮೆ ಮತ್ತು ಬೈ ಬ್ಯಾಕ್ ಗ್ಯಾರಂಟಿ ಸೇರಿದಂತೆ ಇತರ ಮೌಲ್ಯವರ್ಧಿತ ಸೇವೆಗಳನ್ನು ನೀಡುತ್ತಿದೆ. ಹೆಚ್ಚಿನ ಮಾಹಿತಿಗೆ ಮೊ: 9481584774 ಸಂಪರ್ಕಿಸಬಹುದು’ ಎಂದು ಪ್ರಕಟಣೆ ತಿಳಿಸಿದೆ.