ಆರ್‌ಸಿಬಿ ವಿರುದ್ಧ ಆರ್‌ಸಿಬಿ ಮಾಜಿ ಬ್ಯಾಟ್ಸ್‌ಮನ್ ಗೇಲ್‌ ಕಣಕ್ಕಿಳಿಸುತ್ತಾ ಪಂಜಾಬ್?

0

ಸೆಪ್ಟೆಂಬರ್ 24ಕ್ಕೆ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 6ನೇ ಪಂದ್ಯ ಅತ್ಯಂತ ಕುತೂಹಲಕಾರಿಯೆನಿಸಿದೆ. ಯಾಕೆಂದರೆ ಇದೊಂಥರಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು-ಬಿ ನಡುವಿನ ಪಂದ್ಯ. ಅಂದರೆ, ಆರ್‌ಸಿಬಿ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಈ ದಿನ ಕಾದಾಡಲಿವೆ. ಪಂಜಾಬ್‌ ಅನ್ನು ಕನ್ನಡದ ‘ಬಿ’ ತಂಡ ಅಂತ ಅಭಿಮಾನಿಗಳು ಯಾಕೆ ಕರೆಯುತ್ತಿದ್ದಾರೆಂದರೆ ಈ ತಂಡದಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡಿಗರಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ಗೆಲುವಿನ ಹುಮ್ಮಸ್ಸಿನಲ್ಲಿದೆ. ಯಾಕೆಂದರೆ ಮೊದಲ ಪಂದ್ಯದಲ್ಲಿ ಆರ್‌ಸಿಬಿ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯ ಗಳಿಸಿತ್ತು. ಅತ್ತ ಕೆXIಪಿ ಮೊದಲ ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೂಪರ್ ಓವರ್‌ನಲ್ಲಿ ಸೋತಿತ್ತು.

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್‌ನಲ್ಲಿ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಆಡಿರಲಿಲ್ಲ. ಆದರೆ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಮಾಜಿ ಬ್ಯಾಟ್ಸ್‌ಮನ್ ಗೇಲ್ ಅವರನ್ನು ಪಂಜಾಬ್ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಆರ್‌ಸಿಬಿ ವಿರುದ್ಧ ಗೇಲ್ ಆಡಿದ್ದೇ ಆದಲ್ಲಿ ಪಂದ್ಯ ಇನ್ನಷ್ಟು ರೋಚಕ ಅನ್ನಿಸಲಿದೆ.

ಆರ್‌ಸಿಬಿಯಲ್ಲಿ ಆಡಬೇಕಿದ್ದ ದಕ್ಷಿಣ ಆಫ್ರಿಕಾ ಆಲ್ ರೌಂಡರ್ ಕ್ರಿಸ್ ಮೋರಿಸ್ ಗಾಯದಿಂದಾಗಿ ಪಂಜಾಬ್‌ ವಿರುದ್ಧ ಆಡುತ್ತಿಲ್ಲ. ಇವರ ಬದಲಿಗೆ ಬದಲಿ ಆಟಗಾರರನ್ನು ಇನ್ನೂ ಆರ್‌ಸಿಬಿ ಹೆಸರಿಸಿಲ್ಲ. ಆರಂಭಿಕ ಪಂದ್ಯದಲ್ಲಿ ವೇಗಿ ಉಮೇಶ್ ಯಾದವ್ ಕಳಪೆ ಪ್ರದರ್ಶನ ನೀಡಿದ್ದರು. ಅವರನ್ನು ಆರ್‌ಸಿಬಿ ಮತ್ತೆ ಕಣಕ್ಕಿಳಿಸುತ್ತಾ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here