ಆಶಾ ಕಾರ್ಯಕರ್ತೆಯರಿಗೆ ಮಾಸಿಕ ರೂ.6 ಸಾವಿರ ವೇತನ ದಿಂದ ರೂ.12 ಸಾವಿರಗೆ ಏರಿಕೆ ಮಾಡುವಂತೆ ಪ್ರತಿಭಟನೆ

0

ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಮಾಸಿಕ ರೂ.6 ಸಾವಿರ ವೇತನ ನೀಡಲಾಗುತ್ತಿದೆ. ಈ ಮೊತ್ತವನ್ನು ಒಟ್ಟಾಗಿ ರೂ.12 ಸಾವಿರಗೆ ಏರಿಕೆ ಮಾಡುವಂತೆ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರೂ ಬೇಡಿಕೆ ಈಡೇರಿಸಿಲ್ಲ. ಈ ಹಿನ್ನೆಲೆಯಲ್ಲಿ ಸೇವೆ ಬಹಿಷ್ಕರಿಸಿ ಮುಷ್ಕರ ಹಾದಿ ಹಿಡಿದಿದ್ದಾರೆ. ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತೊಮ್ಮೆ ಮನವಿ ಸಲ್ಲಿಸಲಿದ್ದೇವೆ ಎಂದು ಹೇಳಿದರು.

ಮನವಿ ಪತ್ರ ಸ್ವೀಕರಿಸಿ ನಂತರ ಮಾತನಾಡಿದ ಹರಿಹರ ತಾಲ್ಲೂಕ ಆರೋಗ್ಯ ಅಧಿಕಾರಿ ಡಾ. ಚಂದ್ರಮೊಹನ್ ನಾನೂ ನಿಮ್ಮ ಮನವಿಯನ್ನು ಸರ್ಕಾರಕ್ಕೆ ಶಿಘ್ರದಲ್ಲಿ ಕಳಿಸಿಕೊಡುತೇನೆ ಎಂದು ಭರವಸೆ ನೀಡಿದರು.

ಈ ವೇಳೆಯಲ್ಲಿ ಡಾ.ನಟರಾಜ,ಹಿರಿಯ ಆರೋಗ್ಯ ನೀರಿಕ್ಷರಾದ ಮಂಜುನಾಥ ಹೊರಕೇರಿ,ದಾದಪೀರ್ ಮೊಮಿನ್,ಉಮ್ಮಣ್ಣ ವೀರಮ್ಮ, ಶೃತಿ, ಗೀತ, ಉಮಾದೇವಿ, ಲಕ್ಷ್ಮಿ, ಅನಿತಾ, ಸುನಿತಾ, ವೇದಾವತಿ ,ರೇಖಾ, ಪರಶುರಾಮ್, ಸವಿತಾ, ಅರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿದಂತೆ ಆಶಾ ಕಾರ್ಯಕರ್ತರು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here