ಆಸ್ಟ್ರೇಲಿಯಾ ಪ್ರವಾಸಕ್ಕೆ 23-25 ಮಂದಿಯ ಬಲಿಷ್ಠ ಭಾರತ ತಂಡದ ನಿರೀಕ್ಷೆ

0

ಕೊರೊನಾವೈರಸ್‌ ಇರುವುದರಿಂದ ಆರೋಗ್ಯ ಸುರಕ್ಷಾ ಮುನ್ನೆಚ್ಚರಿಕೆಯತ್ತ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಗಮನ ಹರಿಸುತ್ತಿದೆ. ಹೀಗಾಗಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಬಿಸಿಸಿಐ 23-25 ಮಂದಿಯ ತಂಡವನ್ನು ಕಾಂಗರೂ ನಾಡಿಗೆ ಕಳುಹಿಸುವ ನಿರೀಕ್ಷೆಯಿದೆ.

‘ಇಂಗ್ಲೆಂಡ್ ಪ್ರವಾಸದ ವೇಳೆ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳಂತೆ ಭಾರತ ಕೂಡ 23-25 ಮಂದಿಯ ತಂಡವನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸುವುದು ತಾರ್ಕಿಕ,’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಬೆಳವಣಿಗೆಯ ಬಗ್ಗೆ ಪಿಟಿಐಗೆ ಮಾಹಿತಿ ನೀಡಿದ್ದಾರೆ.

‘ನೆಟ್ ಬೌಲರ್‌ ಆಗಿ ಹೊರಗಿನವರನ್ನು ಕರೆದುಕೊಂಡು ಹೋಗುವ ಅಗತ್ಯವಿಲ್ಲ. ಒಂದು ವೇಳೆ ಭಾರತ ‘ಎ’ ತಂಡದ ಆಟಗಾರರು ಹೋದರೆ, ಇದು ನಮಗೆ ನಾಲ್ಕು ದಿನಗಳ ಪ್ರಥಮರ್ಜೆ ಪಂದ್ಯ ಆಡುವಾಗ ನೆರವಿಗೆ ಬರಲಿದೆ,’ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ಐಪಿಎಲ್ ಪ್ಲೇ ಆಫ್‌ಗೆ ಪ್ರವೇಶಿಸದ ಆಟಗಾರರ ಸಹಿತ, ರವಿ ಶಾಸ್ತ್ರಿ ಮುಂದಾಳತ್ವದ ಬೆಂಬಲ ಸಿಬ್ಬಂದಿ ಅಕ್ಟೋಬರ್ ಕೊನೆಗೆ ಅಥವಾ ನವೆಂಬರ್ ಮೊದಲ ವಾರದಲ್ಲಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುವುದನ್ನು ನಿರೀಕ್ಷಿಸಲಾಗಿದೆ. ಐಪಿಎಲ್ ಟೂರ್ನಿ ನವೆಂಬರ್‌ 10ಕ್ಕೆ ಮುಗಿದರೆ, ಅಕ್ಟೋಬರ್ 11ರಿಂದ ಭಾರತ-ಆಸ್ಟ್ರೇಲಿಯಾ ಸರಣಿಗಳು ಆರಂಭವಾಗಲಿವೆ. ಸರಣಿಯು 3 ಟಿ20, 4 ಟೆಸ್ಟ್, 3 ಏಕದಿನ ಪಂದ್ಯಗಳನ್ನು ಒಳಗೊಂಡಿರಲಿದೆ.

LEAVE A REPLY

Please enter your comment!
Please enter your name here