ಆಸ್ಪತ್ರೆಗೆ ಹೋಗುವ ಮುನ್ನ ಈ ಪುಟ್ಟ ಕಂದಮ್ಮನ ಜತೆಯಲ್ಲಿ ಆಟವಾಡಿದ್ದ ಸುರೇಶ್​ ಅಂಗಡಿ.

0

ಕೇಂದ್ರ ಸಚಿವ ಸುರೇಶ ಅಂಗಡಿ ಅವರು ಎಷ್ಟೇ ಒತ್ತಡದ ಕೆಲಸದಲ್ಲಿದ್ದರೂ ಆ ಮಗುವಿನ ಮುಖ ಕಂಡಾಕ್ಷಣ ತಾವು ಮಗುವಿನಂತೆ ಆಟವಾಡುತ್ತಿದ್ದ. ಅನಾರೋಗ್ಯ ನಿಮಿತ್ತ ದೆಹಲಿಯ ಏಮ್ಸ್​ ಆಸ್ಪತ್ರೆಗೆ ಹೋಗುವ ಮುನ್ನವೂ ಕೊನೆಯದಾಗಿ ಆ ಪುಟ್ಟ ಕಂದಮ್ಮನ ಜತೆ ಕೆಲಕಾಲ ಕಳೆದಿದ್ದರು…

ಹೌದು, ಸುರೇಶ್​ ಅಂಗಡಿ ಅವರಿಗೆ ಮೊಮ್ಮಗಳು 2 ವರ್ಷದ ರಿದ್ದಿಶಾ ಅಂದ್ರೆ ಅಚ್ಚು ಮೆಚ್ಚು. ರಾಜಕೀಯ ಬಿಡುವಿನ ವೇಳೆ ಮನೆಯಲ್ಲಿ ಮೊಮ್ಮಗಳೊಂದಿಗೆ ಹೆಚ್ಚಾಗಿ ಕಾಲಕಳೆಯುತ್ತಿದ್ದರು. ಸುರೇಶ್ ಅಂಗಡಿಗೆ ಇಬ್ಬರು ಹೆಣ್ಣು ಮಕ್ಕಳು. ಈ ಪೈಕಿ ಹಿರಿಯ ಮಗಳು ಸ್ಫೂರ್ತಿ ಅಂಗಡಿಯ ಪುತ್ರಿಯೇ ಈ ರಿದ್ದಿಶಾ. ಅಜ್ಜನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ತನ್ನ ತಾಯಿ ಜೊತೆ ದೆಹಲಿಗೆ ರಿದ್ದಿಶಾ ಪ್ರಯಾಣ ಬೆಳೆಸಿದ್ದಾರೆ. ಆದರೆ, ಆ ಕಂದಮ್ಮನಿಗೆ ಅಜ್ಜನನ್ನು ನೋಡಲು ತಾನು ಹೋಗುತ್ತಿರುವುದು ಇದೇ ಕೊನೇ… ತಾತ ಬಾರದ ಲೋಕಕ್ಕೆ ಹೋಗಿದ್ದಾರೆ… ಮತ್ತೆಂದೂ ಬರಲ್ಲ… ಎಂಬುದ್ಯಾವುದೂ ಗೊತ್ತಿಲ್ಲ. ಏನೂ ಅರಿಯದ ಕಂದಮ್ಮ, ತಾತನ ನೋಡಲು ಪ್ರಯಾಣ ಬೆಳೆಸಿದೆ.  

ಇನ್ನು ಸುರೇಶ್​ ಅಂಗಡಿ ಅವರು ಸಂಜೆ ವೇಳೆ ಬಿಡುವು ಸಿಕ್ಕಾಗ ಮಿರ್ಚಿ ಬಜ್ಜಿ, ಚೂಡಾ ಮಂಡಕ್ಕಿಯನ್ನು ಇಷ್ಟಪಟ್ಟು ಸೇವಿಸುತ್ತಿದ್ದರು. ಬೆಳಗಾವಿಯ ಮಹಾವೀರ ಟೀ ಸ್ಟಾಲ್​ನ ಮಿರ್ಚಿ ಮಂಡಕ್ಕಿ, ಚೂಡಾ ಚಹಾ ಅಂದ್ರೆ ಅವರಿಗೆ ತುಂಬಾ ಇಷ್ಟವಾಗುತ್ತಿತ್ತು.

LEAVE A REPLY

Please enter your comment!
Please enter your name here