ಸಾವು ಅದ್ಹೇಗೆ ಕಾಣಿಸಿಕೊಳ್ಳುತ್ತೋ ಆ ದೇವರೇ ಬಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ಮಗಳಿಗೆ ಚಿಕಿತ್ಸೆ ಕೊಡಿಸಿಕೊಂಡು ವಾಪಸ್ ಆಗುತ್ತಿದ್ದ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಅಮ್ಮ-ಮಗಳು ದುರಂತ ಅಂತ್ಯ ಕಂಡಿದ್ದಾರೆ. ಗಂಡನ ಕಣ್ಣೆದುರಲ್ಲೇ ಪತ್ನಿ-ಮಗಳು ಸಾವಿಗೀಡಾದ ದೃಶ್ಯ ಮನಕಲಕುವಂತಿತ್ತು.
ಹಾಡ್ಯ ಗ್ರಾಮದ ದೇವರಾಜು ಅವರ ಪತ್ನಿ ಶಶಿಕಲಾ(35) ಮತ್ತು ಅವರ ಮಗಳು ಲಾವಣ್ಯ(4) ಮೃತರು.
ಘಟನೆ ವಿವರ: ಹಾಡ್ಯ ಗ್ರಾಮದ ದೇವರಾಜು ಸೋಮವಾರ ಬೆಳಗ್ಗೆ ಅನಾರೋಗ್ಯದ ನಿಮಿತ್ತ ಮಗಳು ಲಾವಣ್ಯಳಿಗೆ ಚಿಕಿತ್ಸೆ ಕೊಡಿಸಲು ಟಿವಿಎಸ್ ಸ್ಕೂಟರ್‌ನಲ್ಲಿ ಪತ್ನಿ ಜತೆಗೆ ಮಂಡ್ಯಕ್ಕೆ ಆಗಮಿಸಿದ್ದರು. ಚಿಕಿತ್ಸೆ ಪಡೆದು ಸ್ವಗ್ರಾಮಕ್ಕೆ ವಾಪಸ್ ತೆರಳುವ ಮಾರ್ಗ ಮಧ್ಯೆ ಹೊಳಲು ಗ್ರಾಮದ ಸರ್ಕಲ್ನಲ್ಲಿ ಹಿಂದಿನಿಂದ ಬಂದ ಟಿಪ್ಪರ್, ಟಿವಿಎಸ್ಗೆ ಡಿಕ್ಕಿಯೊಡೆದಿದೆ. ಕೆಳಕ್ಕೆ ಬಿದ್ದ ತಾಯಿ-ಮಗು ಮೇಲೆ ಲಾರಿಯ ಚಕ್ರ ಹರಿದು ಸ್ಥಳದಲ್ಲೇ ಅವರಿಬ್ಬರೂ ಸಾವನ್ನಪ್ಪಿದ್ದಾರೆ. ಸಣ್ಣಪುಟ್ಟ ಗಾಯಗಳೊಂದಿಗೆ ದೇವರಾಜು(45) ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಡ್ಯ ಗ್ರಾಮಾಂತರ ಠಾಣಾ ಪಿಎಸ್‌ಐ ಸಿದ್ದರಾಜು ಸ್ಥಳ ಪರಿಶೀಲಿಸಿದರು. ಆಂಬುಲೆನ್ಸ್ನಲ್ಲಿ ಶವಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.