ಇಂಗ್ಲೆಂಡ್‌ ಕೋಚಿಂಗ್‌ ಬಳಗಕ್ಕೆ ಅಜರ್‌ ಮೆಹಮೂದ್‌ ಸೇರ್ಪಡೆ

0

 ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್‌ ಅಜರ್‌ ಮೆಹಮೂದ್‌ ಅವರನ್ನು ಇಂಗ್ಲೆಂಡ್‌ ತಂಡದ ಸಹಾಯಕ ಕೋಚ್ ಆಗಿ ನೇಮಿಸಲಾಗಿದೆ. ಪಾಕಿಸ್ತಾನ ವಿರುದ್ಧ ಆಗಸ್ಟ್‌ 28ರಿಂದ ನಡೆಯಲಿರುವ ಮೂರು ಟ್ವೆಂಟಿ-20 ಪಂದ್ಯಗಳಿಗೆ, ಆತಿಥೇಯ ಇಂಗ್ಲೆಂಡ್‌ ತಂಡ ಮೆಹಮೂದ್‌ ಅವರಿಂದ ತರಬೇತಿ ಪಡೆಯಲಿದೆ.

’45 ವರ್ಷದ ಮೆಹಮೂದ್‌ ಅವರು‌ ತಂಡದ ಬೌಲಿಂಗ್‌ ಕೋಚ್‌ ಜಾನ್‌ ಲೂಯಿಸ್‌ ಅವರೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಇಂಗ್ಲೆಂಡ್‌ ಮತ್ತು ವೇಲ್ಸ್ ಕ್ರಿಕೆಟ್‌ ಮಂಡಳಿ (ಇಸಿಬಿ) ಮಂಗಳವಾರ ಹೇಳಿದೆ.

ಓಲ್ಡ್‌ ಟ್ರಾಫರ್ಡ್‌ನಲ್ಲಿ ಜೀವಸುರಕ್ಷಾ ವಾತಾವರಣದಲ್ಲಿ ಮೊದಲ ಟ್ವೆಂಟಿ-20 ಪಂದ್ಯ ನಡೆಯಲಿದೆ. ಸದ್ಯ ಬ್ರಿಟನ್‌ನ ನಾಗರಿಕತ್ವ ಪಡೆದಿರುವ ಮೆಹಮೂದ್‌, ಹೋದ ವರ್ಷ ಪಾಕಿಸ್ತಾನ ತಂಡದ ಕೋಚಿಂಗ್ ಬಳಗದಲ್ಲಿದ್ದರು.

ಮೂರು ಪಂದ್ಯಗಳ ಸರಣಿಗೆ ಇಂಗ್ಲೆಂಡ್‌ ತಂಡಕ್ಕೆ ಸದ್ಯ ಸಹಾಯಕ ಕೋಚ್‌ ಆಗಿರುವ ಗ್ರಹಾಂ ಥೋರ್ಪ್‌ ಅವರು ಮುಖ್ಯ ಕೋಚ್‌ ಆಗಿ, ಕ್ರಿಸ್‌ ಸಿಲ್ವರ್‌ವುಡ್ ಬದಲಿಗೆ ಕಾರ್ಯನಿರ್ವಹಿಸಲಿದ್ದಾರೆ. ಸಹಾಯಕ ಕೋಚ್‌ ಪಾಲ್‌ ಕಾಲಿಂಗ್‌ವುಡ್‌ ಅವರಿಗೆ ನೆರವು ನೀಡಲಿದ್ದಾರೆ. ಮಾರ್ಕಸ್‌ ಟ್ರೆಸ್ಕೋಥಿಕ್‌ ಅವರು ಬ್ಯಾಟಿಂಗ್‌ ಕೋಚ್‌ ಆಗಿದ್ದು, ಜೇಮ್ಸ್‌ ಫಾಸ್ಟರ್‌ ವಿಕೆಟ್‌ ಕೀಪಿಂಗ್‌ ತರಬೇತಿ ನೀಡಲಿದ್ದಾರೆ.‌

LEAVE A REPLY

Please enter your comment!
Please enter your name here