ಇಂದು ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಯಲ್ಲಿ 21ನೇ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ಆಚರಿಸಲಾಯಿತು

0

ಇಂದು ಅರಸೀಕೆರೆ ತಾಲ್ಲೂಕಿನ ಕಣಕಟ್ಟೆಯಲ್ಲಿ 21ನೇ #ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ಆಚರಿಸಲಾಯಿತು ಮಾಜಿ ಸೈನಿಕರು #ಕುಮಾರ್ ಸರ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು
ವೀರ ಯೋಧರಿಗೆ ನಮ್ಮದೊಂದು ಸಲಾಂ.
ನಮ್ಮ ವೀರ ಯೋಧರ ವಿಜಯದ ದಿನ. 21ನೇ ಕಾರ್ಗಿಲ್​ ವಿಜಯೋತ್ಸವ. ನಮ್ಮ ದೇಶದ ಗಡಿಯನ್ನು ಅತಿಕ್ರಮಿಸುವ ಮೂಲಕ ಕಾಲ್ಕೆರೆದು ಯುದ್ಧಕ್ಕೆ ಬಂದ ಶತ್ರು ದೇಶ ಪಾಕಿಸ್ತಾನಿ ಸೇನೆಯನ್ನು, ನಮ್ಮ ದೇಶದ ಹೆಮ್ಮೆಯ ಸೈನಿಕರು ಶತ್ರು ಸೈನ್ಯವನ್ನು ಅಟ್ಟಾಡಿಸಿ ಹೊಡೆದೋಡಿಸುವ ಮೂಲಕ ನಮ್ಮ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ತೋರಿಸಿದ ದಿನ. ಭಾರತಾಂಬೆಯ ರಕ್ಷಣೆಗೆ ಬಲಿದಾನಗೈದ ನೂರಾರು ಯೋಧರ ತ್ಯಾಗ ಬಲಿದಾನವನ್ನು ಸ್ಮರಿಸುವ ದಿನವೇ ಕಾರ್ಗಿಲ್‌ ‘ವಿಜಯ್‌ ದಿವಸ್‌’. ಇಂತಹ ನಮ್ಮ ವೀರ ಯೋಧರಿಗೆ ನಮ್ಮ ಸಲಾಂ.
#ಭಾರತ್ ಮಾತಾಕೀ ಜೈ…..
#ವಂದೇಮಾತರಂ…

ಈ ಕಾರ್ಯಕ್ರಮದಲ್ಲಿ ಲೋಕೇ ಶ್ ಗೋವಿಂದಪ್ಪ ,ಮಹೇಶ್,ಶಿವಕುಮಾರ್ ,ಶಿಕ್ಷಕರಾದ ಹರೀಶ್ ,ನಾಸೀರ್,ತನ್ವೀರ್ ,ಪೋಲೀಸ್ ರಾಜಣ್ಣ,ಸತೀಶ್,ರುದ್ರೇಶ್ ,ಕೇಶವಮೂರ್ತಿ, ನಟರಾಜ್ ,ವಕೀಲ ಕಣಕಟ್ಟೆ ಮಂಜುನಾಥ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ ಷಡಕ್ಷರಿ ನರಸೀಪುರ

LEAVE A REPLY

Please enter your comment!
Please enter your name here