ಇನ್ನುಮುಂದೆ ದೇಶದಲ್ಲಿ ‘ಲಾಕ್ ಡೌನ್’ ಇಲ್ಲ : ಕೇಂದ್ರ ಸರ್ಕಾರದಿಂದ ‘ಅನ್ ಲಾಕ್ 4.0’ ಮಾರ್ಗಸೂಚಿ ಪ್ರಕಟ

0

ಕೇಂದ್ರದಿಂದ ಅನ್ ಲಾಕ್ 4.0 ಮಾರ್ಗಸೂಚಿ ಬಿಡುಗಡೆಯಾಗಿದ್ದು, ಸೆ.7 ರಿಂದ ದೇಶಾದ್ಯಂತ ಮೆಟ್ರೋ ಸಂಚಾರ ಮತ್ತೆ ಆರಂಭವಾಗಲಿದ್ದು, ಇದರ ಜೊತೆಗೆ ಹಂತ ಹಂತವಾಗಿ ರೈಲು ಸಂಚಾರ ಆರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಇನ್ನೂ, ಮಾರ್ಗಸೂಚಿಯಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ದೇಶದಲ್ಲಿ ಯಾವುದೇ ರೀತಿಯಲ್ಲಿ ಲಾಕ್ ಡೌನ್ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಮಾರ್ಗಸೂಚಿ ಪ್ರಕಾರ ಹಳ್ಳಿ, ನಗರದಲ್ಲಿ ಲಾಕ್ ಡೌನ್ ಮಾಡುವಂತಿಲ್ಲ, ಒಂದು ವೇಳೆ ಲಾಕ್ ಡೌನ್ ಅನಿವಾರ್ಯವಾದಲ್ಲಿ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕು ಎಂದು ಸೂಚನೆ ಹೊರಡಿಸಿದೆ.

ಇನ್ನೂ, ಸೆಪ್ಟೆಂಬರ್ 30 ರವರೆಗೆ ಶಾಲಾ ಕಾಲೇಜು ತೆರೆಯುವಂತಿಲ್ಲ, ಆನ್ ಲೈನ್ ಮೂಲಕವೇ ಶಿಕ್ಷಣ ನೀಡಬೇಕು ಎಂದು ಸೂಚನೆ ನೀಡಿದೆ. ಹಂತ ಹಂತವಾಗಿ ಬೆಂಗಳೂರು ಸೇರಿದಂತೆ ಹಲವು ಕಡೆ ಮೆಟ್ರೋ ಸಂಚಾರ ಆರಂಭವಾಗಲಿದೆ. ಇದರ ಜೊತೆಗೆ ಥಿಯೇಟರ್ , ಮಲ್ಟಿಫೆಕ್ಸ್ , ಸ್ವಿಮ್ಮಿಂಗ್ ಫೂಲ್ ತೆರೆಯಲು ಸದ್ಯಕ್ಕಿಲ್ಲ ಅನುಮತಿ ಇರುವುದಿಲ್ಲ. ಹಾಗೂ ಹಂತ ಹಂತವಾಗಿ ರೈಲು ಸಂಚಾರ ಆರಂಭಿಸುವುದಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಹಾಗೂ ಸಾಮಾಜಿಕ, ,ಮನೋರಂಜನಾ ಕಾರ್ಯಕ್ರಮ ನಡೆಸಲು ಷರತ್ತು ಬದ್ದ ಅನುಮತಿ ನೀಡಲಾಗಿದ್ದು, 100 ಜನ ಸೇರದಂತೆ ಆದೇಶ ಹೊರಡಿಸಲಾಗಿದೆ. ಹಾಗೂ ಪಿಹೆಚ್ಡಿ ವಿದ್ಯಾರ್ಥಿಗಳ ಸಂಶೋಧನೆಗೆ ಅನುಮತಿ ನೀಡಲಾಗಿದೆ.

LEAVE A REPLY

Please enter your comment!
Please enter your name here