ಇಬ್ಬರ ನಡುವಿನ ತಿಕ್ಕಾಟಕ್ಕೆ ಕಾರಣ ಏನು? ರಾಯಬಾಗ ತಹಶೀಲ್ದಾರ್ ಹಾಗೂ ಶಾಸಕ ದುರ್ಯೋಧನ ಐಹೊಳೆ ನಡುವೆ ರಾಜಕೀಯ ತಿಕ್ಕಾಟ ಮುಂದುವರೆದಿದೆ ವಿಡಿಯೋ ವಿವರಗಳನ್ನು ನೋಡಿರಿ

0

ಇನ್ನು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಒತ್ತಡಕ್ಕೆ ಮಣಿದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಒಬ್ಬ ತಾಲೂಕು ಮಟ್ಟದ ಅಧಿಕಾರಿ ಎನ್ನುವುದನ್ನ ಮರೆತು ರಾತ್ರಿ ಬಂದು ಏಕಾಏಕಿ ನೀವು ಮನೆ ಖಾಲಿ ಮಾಡಬೇಕು ಎಂದಿದ್ದಾರೆ. ತಹಶೀಲ್ದಾರ್ ಪ್ರಶ್ನೆ ಮಾಡಿದ್ದಕ್ಕೆ ಎನ್ ಮಾಡೋಣ ಸರ್ ಶಾಸಕರು ಪದೆ ಪದೆ ಪೋನ್ ಮಾಡಿ ನಮ್ಮ ಮೇಲಾಧಿಕಾರಿಗಳಿಗೆ ಒತ್ತಡ ಹಾಕುತ್ತಿದ್ದಾರೆ. ಮೇಲಾಧಿಕಾರಿಗಳು ಕೂಡಲೆ ಮನೆ ಖಾಲಿ ಮಾಡಿಸುವಂತೆ ಆದೇಶ ಕೊಟ್ಟಿದ್ದಾರೆ ಎಂದು ಇಲ್ಲಿನ ಪ್ರಾಚಾರ್ಯರು ಹೇಳಿದ್ದಾರೆ ಅಂತಾರೆ ತಹಶೀಲ್ದಾರ್​ ಚಂದ್ರಕಾಂತ ಭಜಂತ್ರಿ.

ಶಾಸಕರ ಸಮರ್ಥನೆ

ಇನ್ನು ಈ ವಿಚಾರವಾಗಿ ಮಾತನಾಡಿರುವ ಶಾಸಕ ದುರ್ಯೋಧನ ಐಹೋಳೆ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಲಾಗಿದೆ. ಅಲ್ಲಿ ವೈದ್ಯರಿಗೆ ಇರಲು ಸಮಾಜ ಕಲ್ಯಾಣ ಇಲಾಖೆಯವರು ಖಾಲಿ ಮಾಡಿಸಿದ್ದಾರೆ. ನನಗೂ ಅದಕ್ಕೂ ಯಾವುದೆ ಸಂಬಂಧವಿಲ್ಲ ನಾನು ಯಾರಿಗೂ ಹೇಳಿ ಮನೆ ಖಾಲಿ ಮಾಡಿಸಿಲ್ಲ. ನನ್ನ ಮೇಲೆ ಸುಳ್ಳು ಆರೋಪಗಳನ್ನ ತಹಶೀಲ್ದಾರ್ ಭಜಂತ್ರಿ ಮಾಡುತ್ತಿದ್ದಾರೆ.

ಕೊರೋನಾ ಸಂದರ್ಭದಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಅವರ ಇಲಾಖೆ ಸಿಬ್ಬಂದಿಗಳೆ ನನ್ನ ಗಮನಕ್ಕೆ ತಂದಿದ್ದರು. ನನ್ನ ಗಮನಕ್ಕೆ ಬಂದಾದ ಮೇಲೆ ನಾನು ಪತ್ರ ಬರೆದು ವರ್ಗಾವಣೆ ಮಾಡುವಂತೆ ಕೇಳಿದ್ದೆನೆ.

ಇದನ್ನೂ ಓದಿ : ಸಾರಿಗೆ ಸಚಿವರ ತವರಲ್ಲೇ ಸಿಬ್ಬಂದಿಯ ಅಮಾನುಷ ಬಳಕೆ ; ಪೊರಕೆ ಹಿಡಿದು ಬಸ್ ನಿಲ್ದಾಣ ಸ್ವಚ್ಛತೆ

ಕಂಕಣವಾಡಿ ಜಮೀನು ವಿವಾದ ನಾನು ಹೇಳಿದ್ದು ಬೇರೆ ಅವರು ಮಾಡಿದ್ದು ಬೇರೆ ನಾನು ಬಸ್ ನಿಲ್ದಾಣ ಜಾಗ ಅತಿಕ್ರಮಣ ವಾಗಿತ್ತು ಅದನ್ನ ಸರಿ ಮಾಡಬೇಕು ಎಂದು ಸದನದಲ್ಲಿ ಕೇಳಿದ್ದು ನಿಜ. ಆದರೆ, ಇವರು ಎಲ್ಲಾ ಜಾಗವನ್ನೆ ಖಾಲಿ ಮಾಡಿಸಲು ಮುಂದಾಗಿದ್ದರು ನನಗೂ ಅವರಿಗೂ ಯಾವುದೆ ವೈಯಕ್ತಿಕ ದ್ವೇಷ ಇಲ್ಲಾ ಎಂದಿದ್ದಾರೆ

ಕಳೆದ 7 ತಿಂಗಳ ಹಿಂದಷ್ಟೇ ವಿಧಾನ ಸೌಧದಿಂದ ಇಲ್ಲಿಗೆ ತಹಶೀಲ್ದಾರ್ ಹುದ್ದೆಗೆ ವರ್ಗಾವಣೆ ಆಗಿ ಬಂದಿದ್ದರು. ಕೊರೋನಾ ಸಂದರ್ಭದಲ್ಲಿ ಒಳ್ಳೆ ಕೆಲಸವನ್ನೆ ಮಾಡುತ್ತ ಬಂದಿದ್ದ ಇಲ್ಲಿನ ತಹಶೀಲ್ದಾರ್ ಹಾಗೂ ಶಾಸಕ ದುರ್ಯೋಧನ ಐಹೊಳೆ ಮಧ್ಯೆ ಒಳ್ಳೆ ಬಾಂಧವ್ಯ ಕೂಡ ಇತ್ತು. ಆದರೆ, ತಾಲೂಕಿನ ಕಂಕಣವಾಡಿ ಗ್ರಾಮದ ಸರಕಾರಿ ಗೈರಾಣ ಜಾಗದ ಕುರಿತು ಚಂದ್ರಕಾಂತ ಭಜಂತ್ರಿ ಹಾಗೂ ದುರ್ಯೋಧನ ಐಹೊಳೆ ನಡುವೆ ಮುಸುಕಿನ ಗುದ್ದಾಟ ಏರ್ಪಟ್ಟಿತು. ಶಾಸಕರು ಹೇಳಿದ ಮಾತು ಕೇಳಿಲ್ಲ ಎಂಬ ಕಾರಣಕ್ಕಾಗಿ ತಹಶೀಲ್ದಾರ್ ವರ್ಗಾವಣೆ ಮಾಡುವಂತೆ ದುರ್ಯೋಧನ ಐಹೊಳೆ ಸಿಎಂ ಗೆ ಪತ್ರ ಬರೆದಿದ್ದರು.

ಜುಲೈ 10 ರಂದು ದುರ್ಯೋಧನ ಐಹೊಳೆ ಪತ್ರಕ್ಕೆ ಎಸ್. ಎಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿಯನ್ನ ವರ್ಗಾವಣೆ ಮಾಡಿದರು. ವರ್ಗಾವಣೆ ಸಮಯದಲ್ಲಿ ಚಂದ್ರಕಾಂತ ಭಜಂತ್ರಿಗೆ ಯಾವುದೇ ಸ್ಥಳ ನಿಯೋಜನೆ ಮಾಡದೆ ಆದೇಶ ಮಾಡಿದ್ದರಿಂದ ಆದೇಶ ಪ್ರಶ್ನಿಸಿ ಜುಲೈ 13 ರಂದು ಕೆ.ಎ.ಟಿ ಮೋರೆ ಹೋಗಿದ್ದರು. ಕೆಎಟಿ ತೀರ್ಮಾನ ಕೂಡ ಬಾಕಿ ಇದೆ. ಆದೇಶ ಬರುವ ಮುನ್ನವೇ ರಾಯಬಾಗದ ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರ ವಸತಿ ಗ್ರಹದಲ್ಲಿ ತಂಗಿದ್ದ ಚಂದ್ರಕಾಂತ ಅವರನ್ನ ರಾತ್ರೋರಾತ್ರಿ ಹೊರ ಹಾಕಿದ್ದಾರೆ.
ರಾಯಬಾಗದ ರಾಣಿ ಚೆನ್ನಮ್ಮ ವಸತಿ ಶಾಲೆಯ ವಸತಿ ನಿಲಯದಲ್ಲಿದ್ದ ಹಿಂದಿನ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿಯನ್ನ ರಾತ್ರೋ ರಾತ್ರಿ ಶಾಸಕರು ತಮ್ಮ ಪ್ರಭಾವ ಬಳಸಿ ನನ್ನ ಹೊರ ಹಾಕಿಸಿ ರಾತ್ರಿಯಿಡೀ ನನನ್ನ ಬೀದಿಯಲ್ಲಿ ಮಲಗುವ ಹಾಗೆ ಮಾಡಿದ್ದಾರೆ ಎಂದು ಚಂದ್ರಕಾಂತ ಭಜಂತ್ರಿ ಆರೋಪಿಸಿದ್ದಾರೆ. ಶಾಸಕರ ಕುಮ್ಮಕ್ಕಿನಿಂದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನನ್ನನ್ನ ಮನೆಯಿಂದ ಏಕಾಏಕಿ ಹೊರ ಹಾಕಿದ್ದಾರೆ ಅಲ್ಲದೆ ನಾನು ನಾನು ಬಾಡಿಗೆ ನೆಲೆಸಲು ಬಾಡಿಗೆ ಪಡೆದಿದ್ದ ಮನೆ ಮಾಲೀಕರಿಗೆ ಒತ್ತಡ ಹೇರಿಸಿ ನನಗೆ ಮನೆ ಸಿಗದ ಹಾಗೆ ಇಲ್ಲಿನ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಮಾಡಿದ್ದಾರೆ ಎಂದು ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಆರೋಪ ಮಾಡಿದ್ದಾರೆ.

ಇಬ್ಬರ ನಡುವಿನ ತಿಕ್ಕಾಟಕ್ಕೆ ಕಾರಣ ಏನು?

ರಾಯಬಾಗ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಹಾಗೂ ಶಾಸಕ ದುರ್ಯೋಧನ ಐಹೊಳೆ ನಡುವೆ ರಾಜಕೀಯ ತಿಕ್ಕಾಟ ಮುಂದುವರೆದಿದೆ. ಮೊನ್ನೆಯಷ್ಟೆ ತಹಶೀಲ್ದಾರ್ ವರ್ಗಾವಣೆ ಮಾಡುವಂತೆ ಪತ್ರ ಬರೆದು ಸುದ್ದಿಯಾಗಿದ್ದ ಶಾಸಕರು ಈಗ ತಹಶೀಲ್ದಾರ್​ ರನ್ನ ಮನೆಯಿಂದ ಹೊರ ಹಾಕಿಸಿರುವ ಆರೋಪಕ್ಕೆ ಗುರಿಯಾಗಿದ್ದಾರೆ.

LEAVE A REPLY

Please enter your comment!
Please enter your name here