ಇಲ್ಲಿದೆ ಮಕ್ಕಳಿಗೆ ʼಆಧಾರ್ʼ ಮಾಡಿಸುವ ಕುರಿತ ಮಾಹಿತಿ.!

0

ಸಾಮಾನ್ಯವಾಗಿ 5 ವರ್ಷದ ಮೇಲ್ಪಟ್ಟರಿಗೆ ಆಧಾರ್ ಕಾರ್ಡ್ ಮಾಡಿಸಬೇಕು ಎಂದಾದರೆ, ಬಯೋಮೆಟ್ರಿಕ್ ಮೂಲಕ ಅವರಿಗೆ ಆಧಾರ್ ಕಾರ್ಡ್ ಸಿಗುವಂತೆ ಮಾಡುತ್ತಾರೆ.

ಆದರೆ ಮಗು 5 ವರ್ಷದ ಒಳಗಿದೆ ಎಂದಾದರೆ ಅಂತಹ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ ಎಂಬ ಯೋಚನೆ ಇದ್ದೇ ಇರುತ್ತದೆ. ಇಂತವರಿಗೊಂದು ಮಹತ್ವದ ಮಾಹಿತಿ ಇಲ್ಲಿದೆ. ನೀವು ಇದಕ್ಕೆ ಚಿಂತೆ ಪಡಬೇಕಿಲ್ಲ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸುವ ಸುಲಭ ವಿಧಾನ ಇಲ್ಲಿದೆ.

5 ವರ್ಷದ ಒಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಬೇಕು ಎಂದರೆ ಆ ಮಗುವಿನ ತಂದೆ ಅಥವಾ ತಾಯಿ ಮಗುವಿನ ಬದಲು ಧೃಡೀಕರಣ ನೀಡಬೇಕಾಗುತ್ತದೆ. ಈ ಮಕ್ಕಳಿಗೆ ಬಯೋಮೆಟ್ರಿಕ್ ಇರೋದಿಲ್ಲ. ಹೀಗಾಗಿ ಮಗುವಿನ ಪೋಷಕರಲ್ಲಿ ಒಬ್ಬರು ದಾಖಲಾತಿ ಕಾಲಂನಲ್ಲಿ ಸಹಿ ಮಾಡಬೇಕಾಗುತ್ತದೆ.

ಇನ್ನು 5 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೂ ಈ ರೀತಿಯಲ್ಲಿಯೇ ದಾಖಲಾತಿ ಕಾಲಂನಲ್ಲಿ ಸಹಿ ಮಾಡಬೇಕು. ಇದರ ಜೊತೆಗೆ ಶಾಲೆಯಿಂದ ಕೊಟ್ಟ ಐಡಿ ಕಾರ್ಡ್ ಸೇರಿದಂತೆ ಜನನ ಪತ್ರಗಳ ಇದ್ದರೆ ಅವುಗಳನ್ನು ದಾಖಲಾತಿಗೆ ನೀಡಬಹುದಾಗಿದೆ. ಇನ್ನು ಜೊತೆಗೆ 15 ನೇ ವಯಸ್ಸಿಗೆ ಹೋದಾಗ ಬಯೋಮೆಟ್ರಿಕ್ ನಲ್ಲಿ ನವೀಕರಿಸಬೇಕಾಗುತ್ತದೆ.

LEAVE A REPLY

Please enter your comment!
Please enter your name here