ಈಕೆಯ ವಯಸ್ಸು 22, ವಾರ್ಷಿಕ ಸಂಬಳ 42.5 ಲಕ್ಷ ರೂಪಾಯಿ: ಚಿಕ್ಕ ವಯಸ್ಸಿನಲ್ಲೇ ಸಿಕ್ಕಿದೆ ಯಶಸ್ಸು

0

ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಸನ್ಯಾ ಧಿಂಗರ್ ತಮ್ಮ 22 ನೇ ವಯಸ್ಸಿನಲ್ಲಿ ಉತ್ತಮ ಯಶಸ್ಸನ್ನು ಸಾಧಿಸಿದ್ದಾರೆ. ಸನ್ಯಾ ಅವರ ಈ ಸಾಧನೆಯಿಂದ ಕುಟುಂಬ ಮಾತ್ರವಲ್ಲ, ಜಿಲ್ಲೆಯ ಜನರು ಕೂಡ ಸಂತೋಷಗೊಂಡಿದ್ದಾರೆ.

ವಿಚಾರ ಏನಪ್ಪಾ ಅಂದರೆ ಸನ್ಯಾ ಧನಿಕರ್ ಅವರಿಗೆ ಅಮೆರಿಕನ್ ಕಂಪನಿ ಅಡೋಬ್‌ನಲ್ಲಿ ಕೆಲಸ ನೀಡಿದೆ. ಅದೂ ವಾರ್ಷಿಕ ಬರೋಬ್ಬರಿ 42.5 ಲಕ್ಷ ರೂಪಾಯಿ ವೇತನ. ಕೊರೊನಾವೈರಸ್ ಸಾಂಕ್ರಾಮಿಕದಿಂದಾಗಿ, ಆಗಸ್ಟ್ 17 ರಂದು ಸನ್ಯಾ ಆನ್‌ಲೈನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪರಿಸ್ಥಿತಿ ಸಾಮಾನ್ಯವಾಗುವವರೆಗೆ ಆಕೆ ಮನೆಯಲ್ಲಿಯೇ ಕೆಲಸ ಮಾಡಲಿದ್ದು, ನಂತರ ನೋಯ್ಡಾ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

 

ಸುಂದರನಗರದ ಮಹಾವೀರ್ ಶಾಲೆಯಿಂದ 10 ಮತ್ತು 12 ನೇ ತರಗತಿಯಲ್ಲಿ ವ್ಯಾಸಂಗ ಮಾಡಿರುವ ಈಕೆ, 2016 ರಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) ಹಮೀರ್‌ಪುರಕ್ಕೆ ಸೇರಿಸಲಾಯಿತು. ಅವರು ಈ ವರ್ಷದ ಜುಲೈನಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಬಿಟೆಕ್ ಕೋರ್ಸ್ ಅನ್ನು ಪೂರ್ಣಗೊಳಿಸಿದರು.

ಆನಂತರ ಸನ್ಯಾ ಲಕ್‌ ಕೂಡ ಬದಲಾಗಿ ಹೋಗಿದೆ. ಅಮೆರಿಕಾದ ಖ್ಯಾತ ಕಂಪನಿ ಅಡೋಬ್‌ನಲ್ಲಿ ಕ್ಯಾಂಪಸ್ ಆಯ್ಕೆ ಹೊಂದಿದ್ದಾರೆ ಮತ್ತು ಜುಲೈನಲ್ಲಿ ಕೆಲಸಕ್ಕೆ ಸೇರುವ ಪತ್ರವನ್ನು ಪಡೆದಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.

ಕಂಪನಿಯ ತಾಂತ್ರಿಕ ಸದಸ್ಯರ ಸಿಬ್ಬಂದಿಯಲ್ಲಿ ಸನ್ಯಾ ಅವರನ್ನು ನೇಮಕ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆಗಸ್ಟ್ 17 ರಿಂದ ತಮ್ಮ ಮಗಳು ಆನ್‌ಲೈನ್‌ನಲ್ಲಿ ನೋಯ್ಡಾದ ಅಮೆರಿಕಾದ ಕಚೇರಿಯಲ್ಲಿ ಸೇವೆ ಸಲ್ಲಿಸಲಿದ್ದಾರೆ ಎಂದು ತಂದೆ ಸತೀಶ್ ಧಿಂಗರ್ ಹೇಳಿದ್ದಾರೆ.

ಸನ್ಯಾ ತನ್ನ ಅಧ್ಯಯನ ಮುಗಿದ ಕೂಡಲೇ 42.5 ಲಕ್ಷ ರೂಪಾಯಿ ಪ್ಯಾಕೇಜ್ ಪಡೆಯುವ ಮೂಲಕ ಜಿಲ್ಲೆ ಮತ್ತು ರಾಜ್ಯದ ಹೆಸರನ್ನು ಬೆಳಗಿಸಿದ್ದಾರೆ.

LEAVE A REPLY

Please enter your comment!
Please enter your name here