ಈರುಳ್ಳಿ ಬೆಳೆಗಾರರಿಗೆ ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

0

ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧ ತೆರವುಗೊಳಿಸಿದ್ದು ರಫ್ತು ಮಾಡಲು ಅನುಮತಿ ನೀಡಿದೆ.

ಕೃಷ್ಣಪುರಂ ತಳಿಯ ಈರುಳ್ಳಿ ಮತ್ತು ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಭಾಗದಲ್ಲಿ ಬೆಳೆಯುವ ರೋಸ್ ಈರುಳ್ಳಿ ರಫ್ತು ಮಾಡಲು ಅನುಮತಿ ನೀಡಿದೆ. ಈರುಳ್ಳಿ ಬೆಲೆ ದೇಶಿಯ ಮಾರುಕಟ್ಟೆಯಲ್ಲಿ ತೀವ್ರಗತಿಯಲ್ಲಿ ಏರಿಕೆಯಾಗತ್ತಿದ್ದ ಹಿನ್ನೆಲೆಯಲ್ಲಿ ಬೆಲೆ ನಿಯಂತ್ರಣ ಉದ್ದೇಶದಿಂದ ಸೆಪ್ಟೆಂಬರ್ 14 ರಂದು ಎಲ್ಲಾ ವಿಧದ ಈರುಳ್ಳಿ ರಫ್ತು ನಿರ್ಬಂಧಿಸಲಾಗಿತ್ತು.

ಈಗ ವಿದೇಶಾಂಗ ವ್ಯವಹಾರಗಳ ನಿರ್ದೇಶನಾಲಯದಿಂದ ಅಧಿಸೂಚನೆ ಹೊರಡಿಸಿದ್ದು ರೋಸ್ ಈರುಳ್ಳಿ ಮತ್ತು ಕೃಷ್ಣಪುರಂ ತಳಿ ಈರುಳ್ಳಿ ರಫ್ತು ಮಾಡಲು ಮಾರ್ಚ್ 31, 2021 ರ ವರೆಗೆ ಅವಕಾಶ ನೀಡಲಾಗಿದೆ. 10,000 ಮೆಟ್ರಿಕ್ ಟನ್ ವರೆಗೆ ರಫ್ತು ಮಾಡಲು ಅವಕಾಶ ಕಲ್ಪಿಸಲಾಗಿದೆ.

LEAVE A REPLY

Please enter your comment!
Please enter your name here