ಈ ಕರೋನಾ ಮಹಾ ಮಾರಿಯಿಂದ ತರಕಾರಿ ಬೆಳೆಯುವ ರೈತನಿಗೂ ಸಾಕಷ್ಟು ನಷ್ಟವಾಗಿದ್ದು | ಜೀವನ ನಡೆಸುವುದು ಹೇಗೆ ಎಂಬುದಕ್ಕೆ ಕಣ್ಣೀರು

0

ವಿಶೇಷ ವರದಿ

👍ಕರೋನಾದಿಂದ ಕಂಗೆಟ್ಟು ಸೂಕ್ತ ಬೆಲೆ, ಮಾರುಕಟ್ಟೆ ಇಲ್ಲದೇ ಕೋತಂಬರಿಯನ್ನು ಗಿಡಗಳಾಗಿ ಬೆಳೆಸಿದ ರೈತ👍

★ಸ್ಥಳ: ಎಂಕೆ ಹುಬ್ಬಳ್ಳಿ

★ವರದಿಗಾರ : ಬಸವರಾಜು

ಹೌದು ಈ ಕರೋನಾ ವೈರಸ್ ಎಂಬ ಮಹಾ ಮಾರಿಯಿಂದ ತರಕಾರಿ ಬೆಳೆಯುವ ರೈತನಿಗೂ ಸಾಕಷ್ಟು

ನಷ್ಟವಾಗಿದ್ದು, ಜೀವನ ನಡೆಸುವುದು ಹೇಗೆ ಎಂಬುದಕ್ಕೆ ಕಣ್ಣೀರು ಇಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂತಹದ್ದೇ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಎಂಕೆ ಹುಬ್ಬಳ್ಳಿ ಗ್ರಾಮದ ಬಸಪ್ಪಾ ಕೊಡ್ಲಿ ಎಂಬ

ತರಕಾರಿ ಬೆಳೆಯುವ ಬಡ ರೈತನ ಪರಿಸ್ಥಿತಿಯೂ ತುಂಬಾನೇ ಶೋಚನೀಯ ವಾಗಿದೆ. ಮೊದಲೇ ಸಾಲದ

ಸುಳಿಯಲ್ಲಿ ಸಿಲುಕಿದ್ದ ಈ ರೈತ ಸಾವಿರಾರು ರೂಪಾಯಿ ಖರ್ಚು ಮಾಡಿ ಅರ್ಧ ಎಕರೆ ಜಮೀನಿನಲ್ಲಿ ಕೋತಂಬರಿ

ಸೊಪ್ಪಿನ ಬೀಜಗಳನ್ನು ಮಾರಾಟಕ್ಕೆ ಎಂದು ಬಿತ್ತುತ್ತಾರೆ. ಆದರೇ ಕೈ ಬಂದ ತುತ್ತು ಬಾಯಿಗೆ ಬರೋದಿಲ್ಲ

ಎಂಬಂತೆ ಈ ಕೋತಂಬರಿ ಸೊಪ್ಪಿನ ಬೆಳೆಗೆ ಬೆಳೆಗೆ ಸೂಕ್ತ ಮಾರುಕಟ್ಟೆ, ಬೆಲೆ ಇಲ್ಲದೇ ಇರುವ ಕಾರಣ ಬೆಳೆದ

ಕೋತಂಬರಿ ಸಸಿಗಳನ್ನು 5 ಅಡಿಗೂ ಎತ್ತರದ ಗಿಡಗಳಾಗಿ ಬೆಳೆಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ

ವ್ಯಕ್ತಪಡಿಸಿದ್ದಾನೆ. ಇನ್ನೂ ತೋಟಗಾರಿಕೆ ಇಲಾಖೆಯೂ ನೆಪ ಮಾತ್ರಕ್ಕೆ ಬೆಳೆದ ತರಕಾರಿ ಬೆಳೆಗಳಿಗೆ ಸೂಕ್ತ

, ಸೂಕ್ತ ಬೆಂಬಲ ಬೆಲೆ ನಿಗದಿ ಮಾಡುವುದಾಗಿ ಆದೇಶ ನೀಡಿದೆ ಹಾಗೂ ಇತ್ತೀಚೆಗೆ ತರಕಾರಿ ಬೆಳೆಯುವ ರೈತರಿಗೂ

1 ಎಕರೆಗೆ 6000 ಸಹಾಯಧನ ಬಿಡುಗಡೆ ಗೊಳಿಸಲಾಗುವುದು ಎಂದು ಘೋಷಣೆ ಮಾಡಲಾಗಿದೆ. ಆದರೇ ಅದು

ಸಹ ಕಾರ್ಯರೂಪಕ್ಕೆ ಬಂದಿಲ್ಲಾ . ಇನ್ನೂ ಈ ಕೋತಂಬರಿ ಸೊಪ್ಪನ್ನು ಮಾರಾಟಕ್ಕೆ ತೆಗೆದುಕೊಂಡು ಹೋದರೆ

ನಿರೀಕ್ಷೆಗೆ ತಕ್ಕಂತೆ ಮಾರಾಟವಾಗದೆ ಕಂಗೆಟ್ಟ ರೈತ ಹೊಲದಲ್ಲೇ 5 ಅಡಿಗಳಿಗೂ ಎಚ್ಚು ಉದ್ದ ಈ

ಕೋತಂಬರಿಯನ್ನು ಬೆಳೆಸಿದ್ದಾನೆ. ಆದ್ದರಿಂದ ಇಂದು ಇಂದು ಪತ್ರಕರ್ತ ಬಸವರಾಜು ಭೇಟಿಕೊಟ್ಟು ಈ ರೈತನ

ಸಮಸ್ಯೆಗಳು ಹಾಗೂ ನಷ್ಟಗಳ ಬಗ್ಗೆ ಸಮಗ್ರವಾಗಿ ವರದಿ ತಯಾರು ಮಾಡಿದರು. ಇನ್ನಾದರೂ ಸರ್ಕಾರ ,

ಸಂಬಂಧಿಸಿದಂತೆ ಇರುವ ಇಲಾಖೆಗಳು ಹಾಗೂ ತೋಟಗಾರಿಕೆ ಇಲಾಖೆ ಸಚಿವರು ಆದ ನಾರಾಯಣ ಗೌಡರು ಈ

ರೈತನ ಹಿತ ಕಾಯುವರೇ ಎಂಬುದನ್ನ ಕಾದುನೋಡಬೇಕಿದೆ.🤝👍

ವಂದನೆಗಳು. ಶ್ರೀ ಬಸವರಾಜುರವರು.

ಪತ್ರಕರ್ತ ಹಾಗೂ ಹೋರಾಟಗಾರರು.

LEAVE A REPLY

Please enter your comment!
Please enter your name here