ಈ ಬಂಕ್ ನಲ್ಲಿ ಪೆಟ್ರೋಲ್ – ಡಿಸೇಲ್ ಹಾಕಿಸಿಕೊಂಡವರಿಗೆ ಸಿಗುತ್ತೆ ಉಚಿತ ‘ಬಿರಿಯಾನಿ’

0

ಬೆಂಗಳೂರಿನ ಹಳೆ ಮದ್ರಾಸ್ ರಸ್ತೆ ಇಂದಿರಾನಗರ ಆರ್.ಟಿ.ಒ. ಬಳಿ ಇರುವ ಶ್ರೀ ವೆಂಕಟೇಶ್ವರ ಇಂಡಿಯನ್ ಆಯಿಲ್ ಕಾರ್ಪೋರೇಶನ್ (ಐಒಸಿ) ಸರ್ವೀಸ್ ಸ್ಟೇಶನ್ ಗ್ರಾಹಕರಿಗೆ ಭಾರೀ ಉಡುಗೊರೆ ಘೋಷಿಸಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಹಾಗೂ ಸಂಜೆ 5 ರಿಂದ ರಾತ್ರಿ 9 ಗಂಟೆವರೆಗೆ ಉಚಿತವಾಗಿ ಬಿರಿಯಾನಿ ಹಂಚಿಕೆ ಮಾಡುತ್ತಿದೆ.

ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ಪೆಟ್ರೋಲ್ ಬಂಕ್, ಮೇನಕಾ ಹೋಟೆಲ್ ಸಹಯೋಗದೊಂದಿಗೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಬಿರಿಯಾನಿಯನ್ನು ಗ್ರಾಹಕರಿಗೆ ಕೊಡುತ್ತಿದೆ.

ಆದರೆ, 2 ಸಾವಿರ ರೂ.ಗೆ ಹೆಚ್ಚಿನ ಮೌಲ್ಯದ ಪೆಟ್ರೋಲ್‌ – ಡಿಸೇಲ್ ಹಾಕಿಸಿಕೊಂಡ ಗ್ರಾಹಕರಿಗೆ ಉಚಿತ ಬಿರಿಯಾನಿ ಮಾತ್ರವಲ್ಲದೆ, 250 ರೂ.ಗಿಂತ ಅಧಿಕ ಬೆಲೆಯ ಪೆಟ್ರೋಲ್‌ – ಡಿಸೇಲ್ ಹಾಕಿಸಿಕೊಂಡವರಿಗೆ ಆಕರ್ಷಕ ಉಡುಗೊರೆಗಳನ್ನು ನೀಡುತ್ತಿದೆ.

ಸರ್ವೀಸ್ ಸ್ಟೇಷನ್ ಮುಖ್ಯಸ್ಥ ಪ್ರಕಾಶ್ ರಾವ್ ಸಾಥೆ ಮಾತನಾಡಿ, 51 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಸರ್ವೀಸ್ ಸ್ಟೇಷನ್, ಕರ್ನಾಟಕದಲ್ಲಿ ಅತಿ ಹೆಚ್ಚು ವಹಿವಾಟು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಲು ನಿರ್ಧರಿಸಿದ್ದು, ತಿಂಗಳಿಡೀ ಈ ಉಡುಗೊರೆ ಇರಲಿದೆ. ಅಲ್ಲದೆ, ಶೇ.50 ರ ರಿಯಾಯಿತಿ ದರದಲ್ಲಿ ಕೆಲ ಉತ್ಪನ್ನಗಳನ್ನೂ ಮಾರಾಟ ಮಾಡಲಾಗುತ್ತಿದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here