ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕಲ್ಕೇರಿ ಗ್ರಾಮ ಪಂಚಾಯತಿ ಅವ್ಯವಸ್ಥೆ.. ನಾಲಾಯಕ್ ಪಿಡಿಓ..ನಾಮಕಾವಸ್ಥೆ..!!

0

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕಲ್ಕೇರಿ ಗ್ರಾಮ ಪಂಚಾಯತಿ ಅವ್ಯವಸ್ಥೆ.. ನಾಲಾಯಕ್ ಪಿಡಿಓ..ನಾಮಕಾವಸ್ಥೆ..!!

ಕುಂದಾಪುರ ತಾಲೂಕಿನ ಕಲ್ಕೇರಿ ಎಂಬಲ್ಲಿ ತೋಡಿನ ಕಂಠದ ಒಡ್ಡು ಒಡೆದು ನೀರು ನುಗ್ಗಿ ನಾಟಿ ಮಾಡಿರುವ ನೂರಾರು ಎಕರೆ ಗದ್ದೆ ನಾಶವಾಗಿದೆ, ಇದರ ಪರಿಣಾಮ ಹಲವಾರು ಸಣ್ಣ ರೈತರಿಗೆ ಭಾರಿ ನಷ್ಟ ಉಂಟಾಗಿದೆ, ಈ ಗ್ರಾಮದಲ್ಲಿ ಹೆಚ್ಚು ರೈತ ವರ್ಗದ ಜನರು ಕೃಷಿಯ ಜೀವನವನ್ನೇ ನಂಬಿ ಕೊಂಡು ಬದುಕುತ್ತಿರುವವರು,
ಈ ತೋಡಿನ ಕಂಠ ಒಡೆಯುವುದಕ್ಕೂ ಒಂದು ಕಾರಣವಿದೆ ಈ ತೋಡು ಮಳೆಗಾಲದಲ್ಲಿ ಬೆಟ್ಟ-ಗುಡ್ಡ ಗಳಿಂದ ಬಂದ ನೀರು ಈ ತೋಡಿನಲ್ಲಿಳಿದು ಹೊಳೆಗೆ ಹೋಗಿ ಸೇರುತ್ತದೆ, ಇದು ಯಾವ ಕೃಷಿಕರಿಗೂ ಸಂಬಂಧ ಪಟ್ಟಂತಹ ಜಾಗವಾಗಿರುವುದಿಲ್ಲ ಇದು ಸರಕಾರಕ್ಕೆ ಸಂಬಂಧಿಸಿದ ಜಾಗವೇ ಆದರೂ ಮಳೆಗಾಲದಲ್ಲಿ ಬಾರಿ ನೀರು ಎಲ್ಲಾ ಕಡೆಯಿಂದಲೂ ಬಂದು ಇದೇ ತೋಡಿನಿಂದ ಹೊಳೆಗೆ ಸೇರಿಕೊಳ್ಳುತ್ತದೆ ನೀರು
ನುಗ್ಗಿ ನಾಟಿ ಮಾಡಿರುವ ಗದ್ದೆ ನಾಶ ಆಗುವುದಕ್ಕೆ ಅಲ್ಲಿನ ಒಬ್ಬ ಪ್ರಭಾವೀ ವ್ಯಕ್ತಿಯೇ ಕಾರಣ ತಮ್ಮ ತೋಟಕ್ಕೆ ನೀರು ಹರಿಯುವುದಕ್ಕಾಗಿ ತಮ್ಮ ಜಮೀನಿಗೆ ಅನುಕೂಲ ಆಗಬೇಕೆನ್ನುವ ಸ್ವಾರ್ಥ ಕಾರಣದಿಂದ ಸಾರ್ವಜನಕವಾಗಿರುವ ತೋಡಿನಲ್ಲಿ ಮೋರಿ ಹಾಕಿ ಮಣ್ಣು ಮುಚ್ಚಿದ್ದಾರೆ.. ಆದಕಾರಣ ಭಾರಿ ಮಳೆಯಿಂದ ರಭಸದಿಂದ ಹರಿಯುವ ನೀರು ಮೋರಿಯಲ್ಲಿ ಹೋಗುವ ನೀರು ತಡೆದುಕೊಳ್ಳುವ ಶಕ್ತಿ ಇಲ್ಲದ ಕಾರಣ ತೋಡಿನ ಕಟ್ಟೆ ಒಡೆದು ಕೃಷಿ ಮಾಡಿರುವ ಗದ್ದೆಗೆ ನುಗ್ಗಿದ ಕಾರಣ ನೂರಾರು ಎಕರೆ ಕೃಷಿಭೂಮಿ ನಾಶವಾಗಿ ಹೋಗಿದೆ.

ಗ್ರಾಮಸ್ಥರೆಲ್ಲರೂ ಸೇರಿ ಬೇಸಿಗೆಯಲ್ಲಿ ಗ್ರಾಮ ಪಂಚಾಯಿತಿ ಪಿಡಿಓ. ಅವರಿಗೆ ಮನವಿಯನ್ನು ಮಾಡಿರುತ್ತಾರೆ ಆದರು ಮಳೆಗಾಲ ಸಮೀಪಿಸುತ್ತಿರುವ ಸಮಯದಲ್ಲಿ ಈ ಮಣ್ಣು ಹಾಕುವುದರಿಂದ ನಮ್ಮ ಕೃಷಿಭೂಮಿ ಹಾಳಾಗುತ್ತದೆ ದಯವಿಟ್ಟು ಇದನ್ನು ತೆರವುಗೊಳಿಸಿ ಎಂದು ಪಿಡಿಓ ಅವರಿಗೆ ಗ್ರಾಮಸ್ಥರೆಲ್ಲರೂ ಸೇರಿ ಮನವಿ ಮಾಡಿರುತ್ತಾರೆ, ಆದರೆ ಪಿಡಿಓ ಅವರಿಗೆ ಇದರ ಬಗ್ಗೆ ಆಸಕ್ತಿ ಇಲ್ಲ
ಆದರೆ ಮಳೆಗಾಲ ಬಂದು ಎಷ್ಟು ಸಮಯವಾದರೂ ನೂರಾರು ಎಕರೆ ಕೃಷಿ ಭೂಮಿ ನಾಶವಾದರೂ ಪಿಡಿಓ ಚಂದ್ರಕಾಂತ್ ಸಾಹೇಬರದು ಮಾತ್ರ ಬಾರಿ ನಿದ್ದೆ.. ಅವರು ಮಾತ್ರ ಇಲ್ಲಿಯ ತನಕ ರೈತರಿಗೆ ಸಮಸ್ಯೆಗೆ ಸ್ಪಂದಿಸುವ ಮನಸ್ಸಿಲ್ಲ ಕೃಷಿಯನ್ನೇ ನಂಬಿರುವ ರೈತರ ಸಂಕಷ್ಟ ಎಷ್ಟು ಬಾರಿ ಮನವಿ ಮಾಡಿದರೂ ಸ್ಥಳಕ್ಕೆ ಬೇಟಿ ನೀಡದೆ ಆ ಜಾಗದತ್ತ ಬಂದು ತಿರುಗಿ ನೋಡದೆ ಇರುವ
ಪಿಡಿಓ ಚಂದ್ರಕಾಂತರಿಗೆ ಆ ಪ್ರಭಾವಿ ವ್ಯಕ್ತಿ ಭರ್ಜರಿ ಪ್ರಸಾದ ನೀಡಿ ತಮ್ಮ ಅಂಕುಶದಲ್ಲಿ ಇಟ್ಟು ಕೊಂಡಿರುವುದು ಮೇಲ್ನೋಟಕ್ಕೆ ಸಾಬೀತು..ಯಾವುದೇ ರೈತರು ಎಷ್ಟು ಬಾರಿ ಇವರಿಗೆ ಎಷ್ಟು ಬಾರಿ ಫೋನ್ ಮಾಡಿದರು.. ಪ್ರಯೋಜನ ಇಲ್ಲ.. ಇವರು ಫೋನು ಎತ್ತಿ ಮಾತನಾಡುವುದಿಲ್ಲ .. ಸರಕಾರಿ ಸಂಬಳ ಪಡೆದು ನಿದ್ದೆ ಮಾಡುವುದೇ ಈ ನಾಲಾಯಕ್ ಪಿಡಿಓ.. ಕೆಲಸ ಎಷ್ಟು ಬಾರಿ ಹೇಳಿದರೂ ಅಷ್ಟೇನೆ..!? ಆ ಜಾಗವನ್ನು ಇವರಾರು ಸರಿಪಡಿಸಲಾಗದೆ ಈ ದಿನ ಬಡ ರೈತರ ಪಾಡು ಮತ್ತೇ ಮತ್ತೇ ಬೀದಿ ಪಾಲಾಗ್ತಿದೆ, ಕೃಷಿಯೇ ಜೀವನ ಎಂದು ನಂಬಿಕೊಂಡಿರುವ ರೈತರು ಸಂಕಷ್ಟದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ ಮಳೆಗಾಲದಲ್ಲಿ ಯಾರಾದರೂ ಹೊಳೆಗೆ ಹೋಗುವ ನೀರಿಗೆ ಅಡ್ಡಕಟ್ಟಿ ಮಣ್ಣನ್ನು ಹಾಕಿ ಬ್ಲಾಕ್ ಮಾಡಿದಾಗ ಕೃಷಿ ಭೂಮಿಗೆ ನೀರು ನುಗ್ಗುತ್ತದೆ ಅಷ್ಟು ಪರಿಜ್ಞಾನ ಇಲ್ಲದಂತಹ ಆ ಪ್ರಭಾವಿ ವ್ಯಕ್ತಿ ತಮ್ಮ ತೋಟ ಗದ್ದೆ..ತಾವು ಮಾತ್ರ ಸುರಕ್ಷಿತವಾಗಿರಬೇಕು ಎನ್ನುವ ಸ್ವಾರ್ಥಿಗೆ ಬಡ ರೈತರ ಸುರಕ್ಷತೆ ಬೇಕಿಲ್ಲ ತಾವು ಮಾತ್ರ ಬದುಕಬೇಕು ಬಡ ರೈತರು ತುಂಡು ಭೂಮಿಯನ್ನೇ ನಂಬಿಕೊಂಡು ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದಾರೆ, ಪ್ರಭಾವಿ ವ್ಯಕ್ತಿಗಳಿಗೆ ನೂರಾರು ಎಕರೆ ಕೃಷಿಯ ಭೂಮಿಯಿದೆ ಅತ್ಯಂತ ಬಡ ರೈತರು ತುಂಡು ಭೂಮಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ,ಎಂದು ಗೊತ್ತಿದ್ದರೂ ಇವರು ಮಾಡುತ್ತುರುವುದು ಬಡರೈತರಿಗೆ ತೀರದ ಅನ್ಯಾಯ ಅದಲ್ಲದೇ
ಗ್ರಾಮಪಂಚಾಯತ್ ಪಿಡಿಓ.. ಸಹ ಈ ಪ್ರಭಾವಿ ವ್ಯಕ್ತಿಯ ಪ್ರಭಾವಕ್ಕೆ ಒಳಗಾಗಿ ಬಡ ರೈತರಿಗೆ ಆಗಿರುವ ನಷ್ಟ ಮತ್ತು ಅನ್ಯಾಯದ ವಿರೋಧಿಸಲಾರದ ಅವರು ಕೃಷಿಭೂಮಿಯ ಜಾಗಕ್ಕೆ ಬಂದು ಸರಿ ಪಡಿಸುವ ಪ್ರಯತ್ನ ಮಾಡುತ್ತಿಲ್ಲ ಅವರಿಗೆ ಬಡರೈತರು ಸುರಕ್ಷಿತವಾಗಿರುವುದು ಬೇಕಿಲ್ಲ ಇಂತಹ ನಾಲಾಯಕ್ ಪಿಡಿಓ ಅವರಿಗೆ ದಿಕ್ಕಾರ..
ಗ್ರಾಮ ಪಂಚಾಯಿತಿ ಯಲ್ಲಿ ಪಿಡಿಓ ಎಲ್ಲರನ್ನೂ ಸಮಾನವಾಗಿ ನೋಡಬೇಕು ಸರಕಾರಿ ಕೆಲಸದಲ್ಲಿರುವ ಅವರ ಕರ್ತವ್ಯವದು ಆದರೆ ಈ ಪಿಡಿಓ ಚಂದ್ರಕಾಂತ್ ಅವರ ದೃಷ್ಟಿಯಲ್ಲಿ ಬಡವನೇ ಬೇರೆ ಶ್ರೀಮಂತನೇ ಬೇರೆ ಎನ್ನುವ ವರ್ತನೆ ಇದೆ.. ಹಾಗಾದರೆ ಬಡ ರೈತರು ಸಣ್ಣ ರೈತರು ಯಾರ ಬಳಿ ನ್ಯಾಯ ಕೇಳಬೇಕು ಪಿಡಿಓ ಚಂದ್ರಕಾಂತ್ ಅವರಿಗೆ ಕರ್ತವ್ಯದ ಪರಿಜ್ಞಾನವಿಲ್ಲ ರೈತರಿಗೆ ಆಗಿರುವ ಅನ್ಯಾಯ ಮತ್ತು ನಷ್ಟವನ್ನು ಎರಡನ್ನೂ ತುಂಬಿಸಿಕೊಳ್ಳುವ ಪ್ರಯತ್ನ ಪಿಡಿಓ ಮಾಡಬೇಕು ಅದು ನಿಮ್ಮ ಕರ್ತವ್ಯ..ಇನ್ನು ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ರಾತ್ರಿಯಲ್ಲಿ ಪಿಡಿಓ ಅವರಿಂದ ಬಾರಿ ಭ್ರಷ್ಟಾಚಾರ ನಡೆಯುತ್ತಿದೆ, ಎಂಬ ಮಾಹಿತಿ ಇದೆ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಒಂದು ಬಾವಿ ತೋರಿಸಿ ಅದಕ್ಕೆ ಸರಕಾರಿ ಯೋಜನೆಯ ಹೆಸರನ್ನು ಬರೆಯುವುದಕ್ಕೆ ಒಂದು ಮನೆಗೆ 400 ರೂಪಾಯಿಯಂತೆ ವಸೂಲು ಮಾಡುತ್ತಿದ್ದಾರೆ, ಪಿಡಿಓ ಅವರು ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿ ಕೊಂಡಿರುವವರು ನಮಗೆ ಲೆಕ್ಕಕೊಡಿ ಎಂದು ಮಾಹಿತಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಆದರೂ ಅದಕ್ಕೆ ಪ್ರತಿಯುತ್ತರ ಇಲ್ಲ ಈಗೇನು ಮಾಡೋಣ …ಈ ವಿಷಯದಲ್ಲಿ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಸೂಕ್ತ ತನಿಖೆ ಕೈ ಗೊಂಡಾಗ ಎಲ್ಲ ಭ್ರಷ್ಟಾಚಾರ ಬಯಲಿಗೆ ಬರುತ್ತದೆ, ಈ ಪರಿಸ್ಥಿತಿಯಲ್ಲಿ ರೈತರ ಹಿತ ರಕ್ಷಣೆಯನ್ನು ಪತ್ರಿಕೆ ಬಯಸುತ್ತದೆ ಗ್ರಾಮ ಪಂಚಾಯತಿ ಹಿರಿಯ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮತ್ತೊಮ್ಮೆ ಒತ್ತಾಯಿಸುತ್ತದೆ.

ವರದಿಗಾರರು
ಮಂಜುನಾಥ್ ಕೋಠಾರೀ
ಉಡುಪಿ ಮತ್ತು ಮಂಗಳೂರು ಜಿಲ್ಲೆ

LEAVE A REPLY

Please enter your comment!
Please enter your name here