ಉತ್ತರ ಪ್ರದೇಶ: ಗರ್ಭಿಣಿ ಪುತ್ರಿಯ ಕತ್ತು ಹಿಸುಕಿ ತಲೆ ಕಡಿದು ಸಾಯಿಸಿದ ತಂದೆ

0

ಉತ್ತರ ಪ್ರದೇಶದ ಶಹಜಾನ್ ಪುರ ದಲ್ಲಿ ವ್ಯಕ್ತಿಯೊಬ್ಬ ಗರ್ಭಿಣಿಯಾಗಿದ್ದ ತನ್ನ 14 ವರ್ಷದ ಪುತ್ರಿಯನ್ನು ತನ್ನ ಇನ್ನೊಬ್ಬನ ಮಗನ ಸಹಾಯದಿಂದ ಕೊಂದ ಘಟನೆ ವರದಿಯಾಗಿದೆ. ಅಪ್ರಾಪ್ತೆ ತಾನು ಗರ್ಭಿಣಿಯಾಗಲು ಯಾರು ಕಾರಣ ಎಂದು ಬಾಯ್ಬಿಡದೇ ಇದ್ದುದರಿಂದ ಸಿಟ್ಟುಗೊಂಡ ತಂದೆ ಆಕೆಯ ಹತ್ಯೆಗೈದಿದ್ದಾನೆಂದು ಹೇಳಲಾಗಿದೆ.

ಬಾಲಕಿಯ ಮೃತದೇಹ ತಲೆ ಕಡಿದ ಸ್ಥಿತಿಯಲ್ಲಿ ದುಲ್ಹಾಪುರ ಗ್ರಾಮದ ಸಿಧೌಲಿ ಪ್ರದೇಶದಲ್ಲಿ ಮಂಗಳವಾರ ಪತ್ತೆಯಾಗಿದೆ. ಆಕೆ ಆರು ತಿಂಗಳ ಗರ್ಭಿಣಿಯಾಗಿದ್ದಳೆಂದು ತಿಳಿದು ಬಂದಿದೆ.

ಅಪ್ರಾಪ್ತೆಯನ್ನು ಸೆಪ್ಟಂಬರ್ 24ರಂದೇ ಕೊಲ್ಲಲಾಗಿತ್ತಾದರೂ ಆಕೆಯ ಕುಟುಂಬ ಇದನ್ನು ಗುಟ್ಟಾಗಿರಿಸಿತ್ತೆನ್ನಲಾಗಿದೆ. ಪುತ್ರಿ ತಾನು ಗರ್ಭ ಧರಿಸಲು ಯಾರು ಕಾರಣರು ಎಂದು ಹೇಳಿಲ್ಲದ ಕಾರಣ ಸಿಟ್ಟಿನಿಂದ ಆಕೆಯ ಕತ್ತು ಹಿಸುಕಿದ್ದಾಗಿ ಆಕೆಯ ತಂದೆ ಹೇಳಿದ್ದಾನೆ. ಆಕೆ ಸಂಬಂಧ ಹೊಂದಿದ್ದ ವ್ಯಕ್ತಿಯೊಂದಿಗೆ ಮದುವೆ ಮಾಡಲು ಆತ ನಿರ್ಧರಿಸಿದ್ದನೆನ್ನಲಾಗಿದೆ. ಆದರೆ ಆಕೆ ಬಾಯ್ಬಿಡದೇ ಇದ್ದಾಗ ಕತ್ತು ಹಿಸುಕಿ ತಲೆ ಕಡಿದು ಮೃತದೇಹವನ್ನು ತೋಡಿನ ಸಮೀಪ ಎಸೆದಿದ್ದನೆಂದು ತಿಳಿದು ಬಂದಿದೆ.

ಮೃತ ಬಾಲಕಿಯ ತಂದೆಯನ್ನು ಬಂಧಿಸಲಾಗಿದ್ದರೆ ಆಕೆಯ ಸೋದರ ತಲೆಮರೆಸಿಕೊಂಡಿದ್ದಾನೆ.

LEAVE A REPLY

Please enter your comment!
Please enter your name here