ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್(ರಿ) ವತಿಯಿಂದ ಉಚಿತವಾಗಿ ಮಾಸ್ಕ್ ಮತ್ತು ಬಿಸ್ಕೆಟ್ ವಿತರಣೆ…!

0

ಬೆಂಗಳೂರು :02 ಕುಮಾರಸ್ವಾಮಿ ಲೇಔಟ್ ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ಚಂದ್ರನಗರದ ಕೊಳಚೇರಿ ಪ್ರದೇಶದ ಸಾರ್ವಜನಿಕರಿಗೆ ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ ವತಿಯಿಂದ ಸೋಂಕು ತಡೆಗಟ್ಟುವ ಬಗ್ಗೆ ಅರಿವು ಮೂಡಿಸಿಸುವ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಯಲು ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ಈಗಿರುವ ಕೊರೊನಾ ವೈರಸ್ ಭೀತಿ ಜಗತ್ತಿನಾದ್ಯಂತ ಆತಂಕದ ವಾತಾವರಣ ಸೃಷ್ಟಿಸಿದ್ದು, ಕೊರೊನಾ ವೈರಸ್ ನಿಂದ ಸಾರ್ವಜನಿಕರು ಭಯದಿಂದಲೇ ಜೀವನ ನಡೆಸುವಂತಾಗಿದೆ ಅಲ್ಲದೇ ಮಾಸ್ಕ್ ಕೂಡ ಸಾರ್ವಜನಿಕರಿಗೆ ಕೈಗೆಟುಕುತ್ತಿಲ್ಲ. ಈ ಹಿನ್ನಲೆಯಲ್ಲಿ ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ ವತಿಯಿಂದ ಸಂಸ್ಥಾಪಕಾಧ್ಯಕ್ಷರಾದ ಶ್ರೀಮತಿ ಎಂ. ಸುಜಾತ ರವರು ಮಾಸ್ಕ್ ವಿತರಣೆ ಮಾಡಿದರು.
ಇದೇ ವೇಳೆ ಮಾತನಾಡಿದ ಅವರು , ಜಗತ್ತಿನಲ್ಲೇ ಒಂದು ದೊಡ್ಡ ಭಯವನ್ನು ಈ ಕೊರೊನಾ ವೈರಸ್‌ ಹುಟ್ಟುಹಾಕಿದೆ. ದೇಶದ ಜನರು ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕು. ಯಾವುದೇ ಸಂದರ್ಭದಲ್ಲಿ ನಿಷ್ಕಾಳಜಿ ತೋರಿಸಬಾರದು
ಕೊರೊನಾ ವೈರಸ್‌ ಹೆಚ್ಚಾಗಿ ಹರಡುತ್ತಿದ್ದು, ಅನೇಕ ಜನರ ಜೀವಕ್ಕೆ ಕುತ್ತಾಗಿ ಪರಣಮಿಸಿದೆ. ಇದರ ತಡೆಗೆ ಪ್ರತಿಯೊಬ್ಬರೂ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಹೊರಗಡೆ ಹೋಗಬೇಕಾದ ಅನಿವಾರ್ಯ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು, ಕೊರೊನಾ ಸೋಂಕು ತಗುಲಿದರೆ ಅಥವಾ ಅಂತಹ ಲಕ್ಷ್ಮಣಗಳು ಏನಾದರೂ ಕಂಡು ಬಂದರೆ ಕೂಡಲೇ ಸಮೀಪದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಹಿರಿಯರು ಮತ್ತು ಮಕ್ಕಳನ್ನು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಕಳಿಸದೇ ಅವರ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು, ಪ್ರತಿಯೊಬ್ಬ ವ್ಯಾಪಾ ರಸ್ಥ, ಗ್ರಾಹಕ ಮತ್ತು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟಿನ ಕಾರ್ಯದರ್ಶಿ ಸಿ. ಡಿ. ರವಿಕುಮಾರ್, ಖಜಾಂಚಿ ವಿಜಯ್, ನಿರ್ದೇಶಕರುಗಳಾದ ಕವಿತಾ, ಹಾರಿಕ. ಡಿ, ಮಹೇಶ್ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here