ಉದ್ಯೋಗ ನಷ್ಟ? ವೇತನ ಕಡಿತವಾಗ್ತಿದ್ಯಾ: ಸಾಲದ ಭಾರ ಇಳಿಸಲು ಎಸ್ ಬಿಐ ಚಿಂತನೆ

0

ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಕಾರ್ಪೊರೇಟ್ ಹಾಗೂ ರಿಟೇಲ್ ಸಾಲಗಳಿಗೆ ಅನ್ವಯಿಸುವಂತಹ ಒಂದಷ್ಟು ನಿಯಮಾವಗಳಿಗಳನ್ನು ಘೋಷಣೆ ಮಾಡಿದೆ.

ರಿಟೇಲ್ ಲೋನ್ ವಿಷಯದಲ್ಲಿ ಸ್ವಲ್ಪ ವಿನಾಯ್ತಿ ತೋರಿಸಲು ಎಸ್ ಬಿಐ ಮುಂದಾಗಿದ್ದು, ಉದ್ಯೋಗ ಕಳೆದುಕೊಂಡವರಿಗೆ, ವೇತನ ನಷ್ಟ ಎದುರಿಸುತ್ತಿರುವವರಿಗೆ ಈ ವಿನಾಯ್ತಿ ಅನ್ವಯವಾಗಲಿದೆ.

ಕೊರೋನಾ ಸಾಂಕ್ರಾಮಿಕದ ಕಾರಣದಿಂದಾಗಿ ಗ್ರಾಹಕರ ಭವಿಷ್ಯದ ಆದಾಯದ ಆಧಾರದಲ್ಲಿ ಸಾಲವನ್ನು ಪುನಾರಚನೆ ಮಾಡಲಾಗುತ್ತದೆ. ತಮ್ಮ ಅರ್ಹತೆಯನ್ನು ಪರಿಶೀಲಿಸಿಕೊಂಡು ಗ್ರಾಹಕರು ಅಗತ್ಯವಿರುವ ದಾಖಲೆಗಳನ್ನು ಅಪ್ ಲೋಡ್ ಮಾಡಬಹುದಾಗಿದೆ.

ಅರ್ಹತೆ ಇರುವವರು 1-24 ತಿಂಗಳ ಇಎಂಐ ಮೊರಾಟೋರಿಯಂನ್ನು ಪಡೆಯಬಹುದಾಗಿದೆ.

LEAVE A REPLY

Please enter your comment!
Please enter your name here