ಉನ್ನತ ಹುದ್ದೆಯಲ್ಲಿ ಮಕ್ಕಳಿದ್ರೂ ಬೀದಿ ಪಾಲಾದ ತಾಯಿ

0

ಪಂಜಾಬ್‌ನ ಶ್ರೀ ಮುಕ್ತಸರ್ ಸಾಹಿಬ್‌ನಲ್ಲಿ ಕರುಳು ಹಿಂಡುವ ಘಟನೆ ನಡೆದಿದೆ. 80 ವರ್ಷದ ವೃದ್ಧೆಯೊಬ್ಬಳು ಮಣ್ಣಿನ ಮಧ್ಯೆ ಸಿಕ್ಕಿದ್ದಾಳೆ. ಮಹಿಳೆ ದೇಹದ ಮೇಲೆ ಸಂಪೂರ್ಣ ಬಟ್ಟೆ ಕೂಡ ಇರಲಿಲ್ಲ. ಆಕೆ ತಲೆಯಲ್ಲಿ ಹುಳುಗಳು ಓಡಾಡ್ತಿದ್ದವು ಎಂದು ಪೊಲೀಸರು ಹೇಳಿದ್ದಾರೆ.

ದಾರಿಹೋಕರೊಬ್ಬರು ಮಹಿಳೆ ಬಗ್ಗೆ ಮಾಹಿತಿ ನೀಡಿದ ನಂತ್ರ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆ ಮೇಲೆ ಹುಳುಗಳು ಓಡಾಡ್ತಿದ್ದವು. ಆಕೆಗೆ ಉಸಿರಾಡಲು ಸಮಸ್ಯೆಯಾಗ್ತಿತ್ತು ಎಂದು ವೈದ್ಯರು ಹೇಳಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾಳೆ.

ಮಹಿಳೆ ರಕ್ಷಣೆ ಮಾಡಿದ ನಂತ್ರ ಆಕೆ ಮಕ್ಕಳಿಗೆ ಮಾಹಿತಿ ನೀಡಲಾಗಿತ್ತು. ನಂತ್ರ ಆಸ್ಪತ್ರೆಗೆ ಬಂದ ಮಕ್ಕಳು ತಾಯಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಮಹಾತಾಯಿಗೆ ಇಬ್ಬರು ಗಂಡು ಮಕ್ಕಳು. ಒಬ್ಬ ಉನ್ನತ ಹುದ್ದೆಯಲ್ಲಿದ್ದರೆ ಇನ್ನೊಬ್ಬ ರಾಜಕಾರಣಿ. ಬೇರೆ ವ್ಯಕ್ತಿಯೊಬ್ಬನಿಗೆ ತಾಯಿ ನೋಡಿಕೊಳ್ಳಲು ಹಣ ನೀಡ್ತಿದ್ದರಂತೆ. ಆದ್ರೆ ಹಣ ಪಡೆಯುತ್ತಿದ್ದ ಆತ ಮಹಿಳೆ ರಕ್ಷಣೆ ಮಾಡ್ತಿರಲಿಲ್ಲ.

LEAVE A REPLY

Please enter your comment!
Please enter your name here